ಐಪಿಲ್: ಚೆನ್ನೈ ಸೂಪರ್ ಕಿಂಗ್ ತಂಡ ಹೀಗಿದೆ ನೋಡಿ

ಬೆಂಗಳೂರು, ಜನವರಿ 28: ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಮತ್ತೆ ಐಪಿಎಲ್ ಅಖಾಡಕ್ಕಿಳಿದಿದ್ದು, ಸಮತೋಲನದಿಂದ ಕೂಡಿದ ತಂಡವನ್ನು ಅದು ಹೆಕ್ಕಿಕೊಂಡಿದೆ.
ಚೆನ್ನೈನ ತಂಡದ ನಾಯಕ ಧೋನಿ ಅವರನ್ನು ಈ ಮೊದಲೇ ಉಳಿಸಿಕೊಂಡಿದ್ದ ಚೆನ್ನೈ ಈ ಬಾರಿ ತವರಿನ ಆಟಗಾರ ಆರ್.ಅಶ್ವಿನ್ ಅವರನ್ನು ಕೈಬಿಟ್ಟಿತ್ತು. ಅಷ್ಟೇ ಅಲ್ಲ ಅವರನ್ನು ಆರ್‌ಟಿಎಂ ಬಳಸಿ ಮರಳಿ ತಂಡಕ್ಕೆ ಕರೆದುಕೊಂಡು ಬರಲೂ ಸಹ ಚೆನ್ನೈ ಆಸಕ್ತಿ ತೋರಲಿಲ್ಲ ಎಂಬುದು ವಿಶೇಷ.
ಧೋನಿ, ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ಅವರನ್ನು ಉಳಿಸಿಕೊಂಡಿದ್ದ ಚೆನ್ನೈ ಖ್ಯಾತ ಆಟಗಾರರನ್ನು ಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಗಮನ ವಹಿಸಿತು.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ
ಚೆನ್ನೈನ ತಂಡದ ಮಾಹಿತಿಗೆ ಮುಂದೆ ಓದಿರಿ...

ಭಾರತದವರೇ ಪ್ರಮುಖ ಬ್ಯಾಟ್ಸ್‌ಮನ್‌ಗಳು
* ಮಹೇಂದ್ರ ಸಿಂಗ್ ಧೋನಿ (ಉಳಿಸಿಕೊಂಡ ಆಟಗಾರ)
* ಸುರೇಶ್ ರೈನಾ (ಉಳಿಸಿಕೊಂಡ ಆಟಗಾರ)
* ಮುರಳಿ ವಿಜಯ್ (2 ಕೋಟಿ)
* ಪಾಫ್ ಡುಪ್ಲಿಸಿಸ್ (1.60 ಕೋಟಿ)

ಆಲ್‌ರೌಂಡರ್‌ಗಳೇ ಹೆಚ್ಚು
* ರವೀಂದ್ರ ಜಡೇಜಾ (ಉಳಿಸಿಕೊಂಡ ಆಟಗಾರ)
* ಕೇದರ್ ಜಾದವ್ (7.80 ಕೋಟಿ)
* ಡ್ವೇನ್ ಬ್ರಾವೊ (6.40 ಕೋಟಿ)
* ಶೇನ್ ವ್ಯಾಟ್ಸನ್ (4 ಕೋಟಿ)
* ದೀಪಕ್ ಚಾಹರ್ (80 ಲಕ್ಷ)
* ಮಿಷೆಲ್ ಸ್ಯಾಂಟ್ನರ್ (50 ಲಕ್ಷ)
* ಕನಿಷ್ಕ ಶರ್ಮಾ (20 ಲಕ್ಷ)
* ಧ್ರುವ್ ಶೋರೆ (20 ಲಕ್ಷ)
* ಚೈತನ್ಯ ಬಿಶಿನೋಯ್
* ಕ್ಷಿತ್ವಿಜ ಶರ್ಮಾ

ಒಂಬತ್ತು ಮಂದಿ ಬೌಲರ್‌ಗಳು
* ಕರ್ಣ ಶರ್ಮಾ (5 ಕೋಟಿ)
* ಶಾರ್ದೂಲ್ ಠಾಕೂರ್ (2.60 ಕೋಟಿ)
* ಹರ್ಭಜನ್ ಸಿಂಗ್ (2 ಕೋಟಿ)
* ಇಮ್ರಾನ್ ತಾಹಿರ್ (1 ಕೋಟಿ)
* ಲುಂಗಿ ಗಿನಿ (50 ಲಕ್ಷ)
* ಆಸಿಫ್ ಕೆ.ಎಂ (50 ಲಕ್ಷ)
* ಮೋನು ಸಿಂಗ್
* ಡಿ ಚೌಹರ್
* ಮಾರ್ಕ್ ವೂಡ್

ನಾಲ್ಕು ಮಂದಿ ಕೀಪರ್
* ಮಹೇಂದ್ರ ಸಿಂಗ್ ಧೋನಿ (ಉಳಿಸಿಕೊಂಡ ಆಟಗಾರ)
* ಅಂಬಟಿ ರಾಯುಡು (2.20 ಕೋಟಿ)
* ಸ್ಯಾಮ್ ಬಿಲ್ಲಿಂಗ್ಸ್ (1 ಕೋಟಿ)
* ಜಗದೀಶ್ ನಾರಾಯಣ್ (20 ಲಕ್ಷ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications