ಐಪಿಎಲ್: ದೆಹಲಿ ತಂಡಕ್ಕೆ ಗೌತಮ್ ಗಂಭೀರ್ ಬಲ

ಬೆಂಗಳೂರು, ಜನವರಿ 28: ಖ್ಯಾತರಲ್ಲದ ಆಟಗಾರರನ್ನು ಉಳಿಸಿಕೊಂಡು ಆಶ್ಚರ್ಯ ಹುಟ್ಟಿಸಿದ್ದ ದೆಹಲಿ ತಂಡ ಹರಾಜಿನ ಅಂತ್ಯಕ್ಕೆ ಸಮತೋಲಿತ ತಂಡವಾಗಿ ಕಾಣುತ್ತಿದೆ. ಆದರೆ ಖ್ಯಾತನಾಮರ ಕೊರತೆ ದೆಹಲಿಗಿದೆ.
ಹರಾಜಿಗೆ ಮುಂಚೆ ರಿಶಬ್ ಪಂಥ್, ಕ್ರಿಸ್ ಮಾರಿಸ್, ಶ್ರೇಯಸ್ ಐಯರ್ ಅವರನ್ನು ಉಳಿಸಿಕೊಂಡಿದ್ದ ದೆಹಲಿ, ದೊಡ್ಡ ಹೆಸರಿನ ಬಲದ ಆಟಗಾರರಿಗೆ ತಂಡದಿಂದ ಕೊಕ್ ಕೊಟ್ಟಿತ್ತು. ಈ ಬಾರಿ ದೆಹಲಿಗೆ ಗೌತಮ್ ಗಂಭೀರ್ ಆಗಮನವಾಗಿರುವುದು ತಂಡಕ್ಕೆ ಯಾವ ರೀತಿಯಲ್ಲಿ ಬಲ ತುಂಬಲಿದೆ ಎಂಬುದು ಕುತೂಹಲದ ವಿಷಯ.
ಕೊಲ್ಕತ್ತ ತಂಡವನ್ನು ಚಾಂಪಿಯನ್ ಮಾಡಿದ್ದ ಗೌತಮ್ ಗಂಭಿರ್ ಅವರನ್ನು ದೆಹಲಿ ತಂಡದ ನಾಯಕನನ್ನಾಗಿ ಮೆಂಟರ್ ರಿಕಿ ಪಾಂಟಿಗ್ ಘೋಷಿಸಿದ್ದು, ಗಂಭೀರ್ ಏನು ಮ್ಯಾಜಿಕ್ ಮಾಡುತ್ತಾರೆ ಎಂಬುದನ್ನು ನೋಡಬೇಕು.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಗಂಭೀರ್ ಪ್ರಮುಖ ಬ್ಯಾಟ್ಸ್‌ಮನ್
* ಗೌತಮ್ ಗಂಭೀರ್ (2 ಕೋಟಿ)
* ಶ್ರೇಯಸ್ ಅಯ್ಯರ್ (ಉಳಿಸಿಕೊಂಡಿದ್ದ ಆಟಗಾರ)
* ಜೇಸನ್ ರಾಯ್ (1.50)
* ಪೃಥ್ವಿ ಶಾ (1.20)
* ಮಂಜೋತ್ರ ಕಲ್ರಾ (20 ಲಕ್ಷ)

ಆಲ್‌ರೌಂಡರ್‌ಗಳೇ ಹೆಚ್ಚು
* ಕ್ರಿಸ್ ಮಾರಿಸ್ (ಉಳಿಸಿಕೊಂಡಿದ್ದ ಆಟಗಾರ)
* ಗ್ಲೇನ್ ಮ್ಯಾಕ್ಸ್‌ವೆಲ್ (9)
* ವಿಜಯ್ ಶಂಕರ್ (3.20)
* ರಾಹುಲ್ ತೆವಾಟಿಯಾ (3)
* ಕಾಲಿನ್ ಮಸ್ರೊ (1.90)
* ಡ್ಯಾನಿಯಲ್ ಕ್ರಿಸ್ಟಿಯನ್ (1.50)
* ಗುರು ಕೀರತ್ ಸಿಂಗ್ (75 ಲಕ್ಷ)
* ಜಯಂತ್ ಯಾದವ್ (50 ಲಕ್ಷ)
* ಹರ್ಷಲ್ ಪಟೇಲ್ (20 ಲಕ್ಷ)

ಶಕ್ತಿಯುತ ಬೌಲಿಂಗ್ ಪಡೆ
* ಕಗಿಸೊ ರಬಾಡಾ (4.20)
* ಅಮಿತ್ ಮಿಶ್ರಾ (4)
* ಶಾಬಾಜ್ ನದೀಮ್ (3.20)
* ಮೊಹಮ್ಮದ್ ಶಮಿ (3)
* ಟ್ರೆಂಟ್ ಬೋಲ್ಟ್ (2.20)
* ಆವೇಶ್ ಖಾನ್ (70 ಲಕ್ಷ)
* ಸಯಾನ್ ಘೋಷ್ (20 ಲಕ್ಷ)
* ಸಂದೀಪ್ ಲಮಿಚ್ಚಾನೆ (20 ಲಕ್ಷ)

ಇಬ್ಬರು ಗೂಟ ರಕ್ಷಕರು
* ರಿಶಬ್ ಪಂತ್ (ಉಳಿಸಿಕೊಂಡ ಆಟಗಾರ)
* ನಮನ್ ಓಜಾ (1.4)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications