ಐಪಿಎಲ್: ಕೊಲ್ಕತ್ತಾ ತಂಡದಲ್ಲಿ ಯಾರ್ಯಾರಿದ್ದಾರೆ?

ಬೆಂಗಳೂರು, ಜನವರಿ 28: ಶಾರುಖ್ ಖಾನ್, ಜೂಹಿ ಚಾವ್ಲಾ ಒಡೆತನದ ಕೊಲ್ಕತ್ತಾ ಸದಾ ಯುವ ಆಟಗಾರರಿಗೆ ಮುಂಚಿನಿಂದಲೂ ಮಣೆ ಹಾಕುತ್ತಲೇ ಬರುತ್ತಿದೆ. ಈ ಬಾರಿಯೂ ಅದನ್ನು ಮುಂದುವರೆಸಿದೆ.
ವೆಸ್ಟ್ ಇಂಡೀಸ್ ಬೌಲರ್ ಸುನಿಲ್ ನರೇನ್ ಮತ್ತು ಅದೇ ದೇಶದ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಕೊಲ್ಕತ್ತ ನಾಯಕ ಗಂಭೀರ್, ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಹಾಗಾಗಿ ಅದರ ಆಟಗಾರರ ಆಯ್ಕೆ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು.
ರಾಬಿನ್ ಉತ್ತಪ್ಪ ಹಾಗೂ ಕ್ರಿಸ್ ಲೇನ್ ಅವರನ್ನು ರೈಟ್ ಟು ಮ್ಯಾಚ್ ಹಕ್ಕು ಬಳಸಿ ಅವರನ್ನು ಉಳಿಸಿಕೊಂಡ ಕೊಲ್ಕತ್ತ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಿದೆ. ಅದರ ಜೊತೆಗೆ ಕರ್ನಾಟಕದ ವಿನಯ್‌ಕುಮಾರ್ ಅವರನ್ನೂ ಕೊಲ್ಕತ್ತ ಖರೀದಿಸಿದ್ದು, ಕೊಲ್ಕತ್ತಾಗೆ ನಾಯಕನ ಸಮಸ್ಯೆ ಕಾಡಲಿದೆ.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ
ಗೌತಮ್ ಗಂಭೀರ್ ಅವರನ್ನು ದೆಹಲಿಗೆ ಬಿಟ್ಟು ಕೊಟ್ಟಿರುವ ಕೊಲ್ಕತ್ತ ತಂಡಕ್ಕೆ ನಾಯಕ ಯಾರಾಗಬಹುದು ಎಂಬ ಕುತೂಹಲ ಇದೆ. ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ ಮತ್ತು ವಿನಯ್ ಕುಮಾರ್ ಅವರಲ್ಲಿ ಒಬ್ಬರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ.

ದಾಂಡಿಗರ ದಂಡು
* ಕ್ರಿಸ್ ಲೇನ್ (9.60)
* ಶುಬ್ಮನ್ ಗಿಲ್ (1.20)
* ರಿಂಕು ಸಿಂಗ್ (80 ಲಕ್ಷ)
* ಇಶಾಂಕ್ ಜಗ್ಗಿ (20 ಲಕ್ಷ)
* ಅಪೂರ್ವ ವಾಂಖೆಡೆ (20 ಲಕ್ಷ)

ತಂಡದಲ್ಲಿ ಇವರೇ ಹೆಚ್ಚು
* ಆಂಡ್ರೆ ರಸೆಲ್ (ಉಳಿಸಿಕೊಂಡಿರುವ ಆಟಗಾರ)
* ನಿತೀಶ್ ರಾಣಾ (3.40)
* ಕಮಲೇಶ್ ನಗರಕೋಟಿ (3.20)
* ಶಿವಂ ಮಾವಿ (3)
* ಕ್ಯಾಮೆರಾನ್ ಡಲ್ಫೋರ್ಟ್ (50 ಲಕ್ಷ)
* ಜೇವನ್ ಸಿವಲೆರ್ಯ್ಸ್ (50 ಲಕ್ಷ)

ವಿಕೆಟ್ ಟೇಕರ್ಸ್‌ಗಳಿವರು
* ಸುನಿಲ್ ನರೇನ್ (ಉಳಿಸಿಕೊಂಡಿರುವ ಆಟಗಾರ)
* ಮಿಷೆಲ್ ಸ್ಟಾರ್ಕ್ (9.40)
* ಕುಲದೀಪ್ ನಾಯರ್ (5.20)
* ಪಿಯೂಶ್ ಚಾವ್ಲಾ (4.20)
* ಮಿಷೆಲ್ ಜಾನ್ಸನ್ (2)
* ವಿನಯ್ ಕುಮಾರ್ (1)

ಗೂಟ ರಕ್ಷಕರು
* ದಿನೇಶ್ ಕಾರ್ತಿಕ್ (7.40)
* ರಾಬಿನ್ ಉತ್ತಪ್ಪ (6.40)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications