ಧೋನಿಯಂತೆ ಬ್ಯಾಟ್ ಬೀಸಿದ ಇಶಾನ್ ತ್ವರಿತಗತಿ ಅರ್ಧಶತಕ
ಕೋಲ್ಕತಾ, ಮೇ 10: ಈಡನ್ ಗಾರ್ಡನ್ಸ್ ಅಂಗಳದಲ್ಲಿ ಭಾರತದ ಯುವ ಆಟಗಾರ ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರವನ್ನು ನೋಡಿ ಎಲ್ಲರೂ ಬೆರಗಾದರು. ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸಿದ ಇಶಾನ್, ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದರು.
ಕೇವಲ 21 ಎಸೆತಗಳಲ್ಲಿ 62 ರನ್ ಚೆಚ್ಚಿದ ಎಡಗೈ ಬ್ಯಾಟ್ಸ್ ಮನ್ ಇಶಾನ್ ಅವರು ಕೊನೆಗೆ ಸುನೀಲ್ ನರೇನ್ ಎಸೆತವನ್ನು ಸ್ವೀಪ್ ಮಾಡಲು ಹೋಗಿ ರಾಬಿನ್ ಉತ್ತಪ್ಪಗೆ ಕ್ಯಾಚಿತ್ತರು. ಇಶಾನ್ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಉತ್ತಮ ಮೊತ್ತ (210) ಕಲೆ ಹಾಕಿದ್ದಲ್ಲದೆ, ನಂತರ ಗೆಲುವನ್ನು ಸಾಧಿಸಿತು.
ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಕಲಿತ ಪಾಠವನ್ನು ಮೈದಾನದಲ್ಲಿ ಅಳವಡಿಸಿಕೊಂಡು, ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಅವರು ಮುಂಬೈ ಪರ ತ್ವರಿತಗತಿ ಅರ್ಧಶತಕ ಗಳಿಸಿದರು.
ಫ್ಯಾಂಟಸಿ ಲೀಗ್ ಆಡಿ | ಐಪಿಎಲ್ 2018ರ ವಿಶೇಷ ಪುಟ
ಜತೆಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲಿ ತ್ವರಿತಗತಿ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದರು.

ತ್ವರಿತ ಗತಿ ಅರ್ಧ ಶತಕ ದಾಖಲೆ
ಚೈನಾಮನ್ ಬೌಲರ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ 25ರನ್ ಚೆಚ್ಚಿದ ಇಶಾನ್ ಕೇವಲ 17 ಎಸೆತಗಳಲ್ಲಿ 50ರನ್ ಗಡಿ ದಾಟಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಪರ ತ್ವರಿತಗತಿಯಲ್ಲಿ ಅರ್ಧಶತಕ ಬಾರಿಸಿದ್ದ ಕಿರಾನ್ ಪೊಲ್ಲಾರ್ಡ್ ಸಮಕ್ಕೆ ನಿಂತರು.
ಹೆಲಿಕಾಪ್ಟರ್ ಶಾಟ್ ಬಾರಿಸಿದ ಇಶಾನ್
ಹೆಲಿಕಾಪ್ಟರ್ ಶಾಟ್ ಬಾರಿಸಿದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಅರ್ಧಶತಕ ಗಳಿಸಿದ್ದಲ್ಲದೆ 21 ಎಸೆತಗಳಲ್ಲಿ 62ರನ್ ಕಲೆ ಹಾಕಿ ಔಟಾದರು.
ಇಶಾನ್ ಬ್ಯಾಟಿಂಗ್ ಗೆ ಮೆಚ್ಚುಗೆ
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ದಿಕ್ಕು ಬದಲಾಯಿಸಿದ ಇಶಾನ್ ನೆರವಿನಿಂದ 210ರನ್ ಗಳಿಸಿದ ಮುಂಬೈ ತಂಡವು ನಂತರ 102ರನ್ ಗಳ ಅಂತರದಿಂದ ಗೆಲುವು ಸಾಧಿಸಿತು. ಇದು ಐಪಿಎಲ್ 2018ರಲ್ಲಿ ಭಾರಿ ಅಂತರದ ಗೆಲುವಾಗಿದೆ
ಇಶಾನ್ ಇನ್ನಿಂಗ್ಸ್ ನಲ್ಲಿ 4 ಡಾಟ್ ಬಾಲ್
ಇಶಾನ್ ಇನ್ನಿಂಗ್ಸ್ ನಲ್ಲಿ 4 ಡಾಟ್ ಬಾಲ್ ಗಳು ಕೂಡಾ ಇತ್ತು. 21 ಎಸೆತಗಳಲ್ಲಿ 62ರನ್ ಗಳಿಸಿದ್ದು ಹೀಗೆ: 0, 6, 1, 4, 0, 0, 4, 2, 4, 1, 1, 4, 1, 4, 6 6, 6, 6, 0, 6, W

ಐಪಿಎಲ್ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿರುವ ಕೆಎಲ್ ರಾಹುಲ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಹೊಸ ದಾಖಲೆ ಬರೆದರು.
ಮಿಕ್ಕಂತೆ:
* 17 ಎಸೆತಗಳಲ್ಲಿ ಸುನೀಲ್ ನರೇನ್(ಕೆಕೆಆರ್ ಪರ ಆರ್ ಸಿಬಿ ವಿರುದ್ಧ)
* 17 ಎಸೆತಗಳಲ್ಲಿ ಇಶಾನ್ ಕಿಶಾನ್ (ಮುಂಬೈ ಪರ ಕೆಕೆಆರ್ ವಿರುದ್ಧ)
* 18 ಎಸೆತಗಳಲ್ಲಿ ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್ ಪರ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ)
* 21 ಎಸೆತಗಳಲ್ಲಿ ಸ್ಯಾಮ್ ಬಿಲ್ಲಿಂಗ್ಸ್ (ಚೆನ್ನೈ ಸೂಪರ್ ಕಿಂಗ್ಸ್ ಪರ ಕೆಕೆಆರ್ ವಿರುದ್ಧ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications