ಟಾಸ್ ಗೆದ್ದ ಕೊಲ್ಕತ್ತ ಬೌಲಿಂಗ್, ರಾಜಸ್ಥಾನ ಗೆಲ್ಲುವ ಫೇವರೇಟ್

ರಾಜಸ್ಥಾನ ತಂಡವು ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದ್ದು. ಪಂದ್ಯವು ರಾಜಸ್ಥಾನದ ತವರು ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಕಲ್ಕತ್ತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಎರಡೂ ತಂಡಗಳು ಈ ಹಿಂದಿನ ಪಂದ್ಯವನ್ನು ಗೆದ್ದಿವೆ. ರಾಜಸ್ಥಾನ ತಂಡವು ಆಡಿರುವ ಮೂರು ಪಂದ್ಯದಲ್ಲಿ ಎರಡನ್ನು ಗೆದ್ದಿದ್ದರೆ, ಕೊಲ್ಕತ್ತ ತಂಡವು ಆಡಿರುವ ನಾಲ್ಕರಲ್ಲಿ ಮೂರು ಪಂದ್ಯ ಗೆದ್ದು, ಎರಡನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ರಾಜಸ್ಥಾನ ಗೆದ್ದಲ್ಲಿ ಪಾಯಿಂಟ್ಸ್‌ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಲಿದೆ.
ರಾಜಸ್ಥಾನ ತಂಡದ ಪರ ಸಂಜು ಸ್ಯಾಮ್ಸನ್ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದರೆ, ಕೊಲ್ಕತ್ತ ತಂಡದ ಪರ ದಿನೇಶ್ ಕಾರ್ತಿಕ್ ನಾಯಕ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯುತವಾಗಿ ಆಡುತ್ತಿದ್ದಾರೆ. ಆ ತಂಡಕ್ಕೆ ನರೇನ್ ಬಲ ಇದೆ. ರಾಬಿನ್ ಉತ್ತಪ್ಪ ಈ ವರೆಗೆ ಉತ್ತಮ ಪ್ರದರ್ಶನ ತೋರದಿರುವುದು ಕೊಲ್ಕತ್ತದ ತಲೆ ನೋವಿಗೆ ಕಾರಣವಾಗಿದೆ.
ಈ ಎರಡೂ ತಂಡಗಳು 15 ಬಾರಿ ಮುಖಾಮುಖಿಯಾಗಿದ್ದು, 9 ರಲ್ಲಿ ರಾಜಸ್ಥಾನ ಗೆದ್ದಿದ್ದರೆ 6 ಬಾರಿ ಕೆಕೆಆರ್ ಗೆದ್ದಿದೆ. ಆದರೆ ಜೈಪುರದಲ್ಲಿ ರಾಜಸ್ಥಾನ ತಂಡವು 3 ಬಾರಿ ಗೆದ್ದಿದ್ದರೆ 1 ಬಾರಿ ಕೊಲ್ಕತ್ತ ತಂಡ ಗೆದ್ದಿದೆ.
ಆಡುವ 11 ಆಟಗಾರರ ಪಟ್ಟಿ ಇಂತಿದೆ...
ರಾಜಸ್ಥಾನ ರಾಯಲ್ಸ್
ಅಜಿಂಕ್ಯಾ ರಹಾನೆ(ನಾಯಕ), ಜಾಸ್ ಬಟ್ಲರ್, ಆರ್ಕಿ ಶಾರ್ಟ್, ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಟಿ, ಕೆ.ಗೌಥಮ್, ಶ್ರೇಯಸ್ ಗೋಪಾಲ್, ಧವಲ್ ಕುಲಕರ್ಣಿ, ಜಯದೇವ್ ಉನದ್ಕತ್, ಬೆನ್ ಲಾನಿಂಗ್.
ಕೊಲ್ಕತ್ತ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್ (ನಾಯಕ, ಕೀಪರ್), ಸುನೀಲ್ ನರೇನ್, ಕ್ರಿಸ್ ಲೇನ್, ರಾಬಿನ್ ಉತ್ತಪ್ಪ, ನಿತೇಶ್ ರಾಣಾ, ಆಂಡ್ರೆ ರಸೆಲ್, ಶುಬ್‌ಮನ್ ಗಿಲ್, ಟಾಮ್ ಕುರ್ರನ್, ಪಿಯೂಶ್ ಚಾವ್ಲಾ, ಶಿವಂ ಮವಿ, ಕುಲದೀಪ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications