ಪಂಜಾಬ್‌ಗೆ ಬ್ಯಾಟ್ಸ್‌ಮನ್ ಬಲ, ಹೈದರಾಬಾದ್‌ಗೆ ಬೌಲರ್ ಬಲ

ಐಪಿಎಲ್ 2018ರ 16ನೇ ಪಂದ್ಯವು ಪಂಜಾಬ್ ಕಿಂಗ್ಸ್ ಇಲೆವನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಡುವೆ ಮೊಹಾಲಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಎರಡೂ ತಂಡಗಳು ಈ ಐಪಿಎಲ್‌ನಲ್ಲಿ ಗೆಲ್ಲುವ ಫೆವರೇಟ್ ತಂಡಗಳಾಗಿವೆ. ಹೈದರಾಬಾದ್ ತಂಡವು ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾದಲ್ಲಿದೆ. ಪಂಜಾಬ್ ತಂಡವು ಮೂರರಲ್ಲಿ ಎರಡನ್ನು ಗೆದ್ದು ಒಂದು ಸೋತಿದೆ. ಎರಡೂ ತಂಡಗಳು ಈ ಹಿಂದೆ ಆಡಿರುವ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಎರಡೂ ತಂಡಗಳು ಈವರೆಗೆ ಮುಖಾಮುಖಿ ಆಗಿರುವ ಪಂದ್ಯಗಳಲ್ಲಿ ಹೆಚ್ಚು ಪಂದ್ಯಗಳನ್ನು ಹೈದರಾವಾದ್ ತಂಡ ಗೆದ್ದಿದೆ. ಮೊಹಾಲಿಯಲ್ಲಂತೂ ಈವರೆಗೆ ಈ ಎರಡೂ ತಂಡಗಳು ಆಡಿರುವ 6 ಪಂದ್ಯವನ್ನೂ ಸನ್‌ರೈಸರ್ಸ್ ಗೆದ್ದುಕೊಂಡಿದೆ.
ಎರಡೂ ತಂಡದ ಬ್ಯಾಟಿಂಗ್ ಬಲ ಅತ್ಯುತ್ತಮವಾಗಿದ್ದು, ಕೆ.ಎಲ್.ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಕಳೆದ ಪಂದ್ಯದಲ್ಲಿ ಗೇಲ್ ಕೂಡಾ ಉತ್ತಮ ಆಟವಾಡಿರಿವುದು ಹೈದರಾಬಾದ್‌ಗೆ ಚಿಂತೆಯ ಗೆರೆ ಮೂಡಿಸಿದೆ. ಆದರೆ ಹೈದರಾಬಾದ್ ಪರ ಅಬ್ದುಲ್ ರಶೀದ್ ಮತ್ತು ಶಕೀಬ್ ಉಲ್ ಹಸನ್ ಅಂತಹಾ ಉತ್ತಮ ಸ್ಪಿನ್ನರ್‌ಗಳಿರುವುದು ಪಂಜಾಬ್ ಕೂಡಾ ಯೋಚಿಸಿ ಬ್ಯಾಟ್ ಬೀಸುವಂತೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications