For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ v/s ಡೆಲ್ಲಿ: ಗೆಲ್ಲುವ ಒತ್ತಡದಲ್ಲಿ ವಿರಾಟ್‌ ಕೊಹ್ಲಿ

ipl-2018-match-19-royal-chalengers-bengaluru-delhi-daredevil

ಬೆಂಗಳೂರು, ಏಪ್ರಿಲ್ 21: ಐಪಿಎಲ್‌ 2018ರ 19ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಎರಡೂ ತಂಡಗಳು ಟೂರ್ನಿಯಲ್ಲಿ ಈವರೆಗೆ ಕಳಪೆ ಪ್ರದರ್ಶನವನ್ನು ತೋರಿದ್ದು, ಎರಡೂ ತಂಡಗಳು ತಮ್ಮ ಈ ಹಿಂದಿನ ಪಂದ್ಯದಲ್ಲಿ ಸೋಲು ಕಂಡಿವೆ. ಇಂದಿನ ಪಂದ್ಯ ಗೆಲ್ಲುವ ಮೂಲಕ ಗೆಲುವಿನ ಟ್ರಾಕ್‌ಗೆ ವಾಪಾಸ್ಸಾಗಲು ಇತ್ತಂಡಗಳೂ ಪೈಪೋಟಿ ನಡೆಸಲಿವೆ.

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತು ಪಡಿಸಿ ಇನ್ನಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರದಿರುವುದು ತಲೆನೋವಾಗಿ ಪರಿಣಮಿಸಿದೆ. ಎಬಿಡಿವಿಲಿಯರ್ಸ್, ಸರ್ಫರಾಜ್ ಖಾನ್ ಅಂತಹಾ ಭರವಸೆಯ ಬ್ಯಾಟ್ಸ್‌ಮನ್‌ಗಳೇ ತಮ್ಮ ಪ್ರತಿಭೆಗೆ ತಕ್ಕ ಆಟವಾಡಲು ವಿಫಲರಾಗಿದ್ದಾರೆ.

ಡೆಲ್ಲಿ ಕೂಡ ಭಿನ್ನವೇನು ಅಲ್ಲ, ಆ ತಂಡದಲ್ಲಿಯೂ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಬಂದಿಲ್ಲ, ಸ್ವತಃ ಗಂಭೀರ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಇಂದು ವೇಗದ ಬೌಲರ್‌ ಹರ್ಷಲ್ ಪಟೇಲ್ ಡೆಲ್ಲಿ ಪರ ಆಡುವ ಸಾಧ್ಯತೆ ಇದೆ.

ಈವರೆಗೆ ಈ ಎರಡು ತಂಡಗಳು 19 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿದ್ದು 11 ರಲ್ಲಿ ಆರ್‌ಸಿಬಿ ಗೆದ್ದಿದ್ದರೆ 6 ರಲ್ಲಿ ಡೆಲ್ಲಿ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಪರಸ್ಪರರ ವಿರುದ್ಧ ಸಮಾನ ವಿಜಯ ಸಾಧಿಸಿವೆ (3-3).

Story first published: Saturday, April 21, 2018, 19:32 [IST]
Other articles published on Apr 21, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+