Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಸೇರಿದ ರಿಕಿ ಪಾಂಟಿಂಗ್

IPL 2018: Ricky Ponting appointed Delhi Daredevils head coach

ಮುಂಬೈ, ಜನವರಿ 05: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ವಿಭಾಗಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸೇರಿಕೊಂಡಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಿಇಒ ಹೇಮಂತ್ ದುವಾ ಅವರು ರಿಕಿ ಪಾಂಟಿಂಗ್ ಅವರನ್ನು ಟ್ವಿಟ್ಟರ್ ಮೂಲಕ ತಂಡಕ್ಕೆ ಸ್ವಾಗತಿಸಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಹೊಸ ಕೋಚ್ ವಿಶ್ವಕಪ್ ಮತ್ತು ಐಪಿಎಲ್ ವಿಜೇತ ತಂಡದ ಆಟಗಾರ ರಿಕಿ ಪಾಟಿಂಗ್ ಗೆ ಸ್ವಾಗತ ಎಂದು ಹೇಮಂತ್ ದುವಾ ಟ್ವೀಟ್ ಮಾಡವ ಮೂಲಕ ಬರಮಾಡಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನಿಬಂಧನೆಗಳ ಕಾರಣದಿಂದಾಗಿ ಕಳೆದ ಐಪಿಎಲ್ ಬಳಿಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ಹುದ್ದೆಯಿಂದ ತೊರೆದು ಭಾರತ 'ಎ' ಮತ್ತು ಅಂಡರ್-19 ತಂಡದ ಕೋಚ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.

ಇದರಿಂದ ಖಾಲಿ ಇದ್ದ ಡೆಲ್ಲಿ ತಂಡದ ಕೋಚ್ ಹುದ್ದೆ ರಿಕಿ ಪಾಟಿಂಗ್ ನೇಮಕಗೊಂಡಿದ್ದಾರೆ. ರಿಕಿ ಪಾಂಟಿಂಗ್ 2015, 2016ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಮುಂಬೈ ಚಾಂಪಿಯನ್ ಆಗಿತ್ತು.

Story first published: Friday, January 5, 2018, 16:43 [IST]
Other articles published on Jan 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+