
ನನಗೆ ಸಕತ್ ಖುಷಿಯಾಗಿದೆ
'ನನಗೆ ಸಕತ್ ಖುಷಿಯಾಗಿದೆ, ಸಾಕಷ್ಟು ಫೋನ್ ಕಾಲ್ ಗಳು ಬರುತ್ತಿವೆ, ಎಲ್ಲರ ಶುಭ ಹಾರೈಕೆಗಳನ್ನು ಸ್ವೀಕರಿಸಿ ಧನ್ಯವಾದ ಹೇಳುತ್ತಿದ್ದೇನೆ. ಐಪಿಎಲ್ ತಂಡ ಸೇರುವ ನಿರೀಕ್ಷೆ ಇರಲಿಲ್ಲ, ಅದರಲ್ಲೂ ತನ್ನ ಹೀರೋ ಕೊಹ್ಲಿ ಜತೆ ಆಡಬಲ್ಲೆ ಎಂದು ಊಹಿಸಿರಲೂ ಇಲ್ಲ' ಎಂದು ಪಿಟಿಐ ಜತೆ ಮಾತನಾಡುತ್ತಾ ಪ್ರಯಾಸ್ ಹೇಳಿದ್ದಾರೆ.

ಕೊಹ್ಲಿ, ಕುಂಬ್ಳೆ ನನಗೆ ಮಾದರಿ ಕ್ರಿಕೆಟರ್ಸ್
'ಕ್ರಿಕೆಟ್ ನಲ್ಲಿ ನನಗೆ ವಿರಾಟ್ ಮಾದರಿಯಾಗಿದ್ದು, ಅವರ ಜತೆ ಫೋಟೋ ತೆಗೆಸಿಕೊಳ್ಳುವುದು ಕನಸಾಗಿತ್ತು. ಆದರೆ, ಇಲ್ಲಿ ತನಕ ಕನಸು ನನಸಾಗಿರಲಿಲ್ಲ. ಈಗ ನನ್ನ ಹೀರೋ ಜತೆಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಜತೆಗೆ ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ' ಎಂದಿದ್ದಾರೆ.

ಮನೋಜ್ ತಿವಾರಿ ನೆರವು
ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 4/20 ಗಳಿಸಿದ್ದಲ್ಲದೆ, 9 ಪಂದ್ಯಗಳಿಂದ 11 ವಿಕೆಟ್ 4.45 ಸರಾಸರಿಯಂತೆ ಪಡೆದುಕೊಂಡಿದ್ದಾರೆ. ರಣಜಿಯಲ್ಲಿ ನಾಯಕ ಮನೋಜ್ ತಿವಾರಿ ಹಾಗ್ ಕೋಚ್ ಸಾಯಿರಾಜ್ ಬಹುತಳೆ ನನಗೆ ನೆರವಾದರು ಎಂದು ಸ್ಮರಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಅನುಭವ
ದುರ್ಗಾಪುರ್ ಮೂಲದ ಪ್ರಯಾಸ್ ಅವರು ಬೆಳೆದಿದ್ದು ನವದೆಹಲಿಯ ವಾತಾವರಣದಲ್ಲಿ, ತಂದೆ ಕೌಶಿಕ್ ರಾಯ್ ವೃತ್ತಿಯಲ್ಲಿ ವೈದ್ಯರು, ರಾಮ್ ಪಾಲ್ ಕ್ರಿಕೆಟ್ ಅಕಾಡೆಮಿ, ಗಾರ್ಗಿ ಕಾಲೇಜಿನಲ್ಲಿ ಮೊದಲಿಗೆ ಕ್ರಿಕೆಟ್ ಪಾಠ ಕಲಿತರು.
ದುರ್ಗಾಪುರ್ ಕ್ರಿಕೆಟ್ ಸೆಂಟರ್ ನಲ್ಲಿ ಶಿಬ್ನಾಥ್ ರಾಯ ಮಾರ್ಗದರ್ಶನ ಸಿಕ್ಕಿತು. ಅಂಡರ್ 14ರಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂಡರ್ 16ರಲ್ಲಿ ಆಡಿ ನಂತರ ಬಂಗಾಲ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದಾರೆ.


Click it and Unblock the Notifications











