Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಐಪಿಎಲ್‌ 2019' ಗೊಂದಲಕ್ಕೆ ತೆರೆ, ಅದ್ದೂರಿ ಕ್ರಿಕೆಟ್ ಹಬ್ಬ ಭಾರತದಲ್ಲೆ

IPL 2019 to be staged in India, begins from March 23

ಬೆಂಗಳೂರು, ಜನವರಿ 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಿ ವಿದೇಶದಲ್ಲಿ ನಡೆಯಲಿದೆ ಎಂಬ ಗಾಳಿಸುದ್ದಿಗೆ ತೆರೆ ಬಿದ್ದಿದೆ. 12ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ. ಈ ಅದ್ದೂರಿ ಕ್ರಿಕೆಟ್ ಹಬ್ಬ ಆರಂಭಗೊಳ್ಳಲು ಇನ್ನರಡು ತಿಂಗಳು ಕಾಯಬೇಕಿದೆ.

ಲೋಕಸಭಾ ಚುನಾವಣೆ ದಿನಾಂಕ ಮುಖಾಮುಖಿಯಾಗುವುದರಿಂದ ಐಪಿಎಲ್ 2019ನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂಬ ಊಹಾಪೋಹಗಳು ಹಬ್ಬಿತ್ತು. ಆದರೆ ಚುನಾವಣೆ ಹೊರತಾಗಿಯೂ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ (ಜನವರಿ 8) ಸ್ಪಷ್ಟಪಡಿಸಿದೆ.

'ಐಪಿಎಲ್ 2019ರ ಆವೃತ್ತಿಯನ್ನು ಇದೇ ಮಾರ್ಚ್ 23ರಿಂದ ಆರಂಭಿಸಲು ಪ್ರಾಸ್ತಾಪಿಸಲಾಗಿದೆ. ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆಯ ಬಳಿಕ ಸಂಪೂರ್ಣ ವೇಳಾಪಟ್ಟಿಯನ್ನು ತಿಳಿಸಲಾಗುತ್ತದೆ' ಎಂದು ಬಿಸಿಸಿಐ ಪ್ರಕಟನೆಯಲ್ಲಿ ಹೇಳಿಕೊಂಡಿದೆ. ಅಂತೂ ಟೂರ್ನಿ ವಿದೇಶದಲ್ಲಿ ನಡೆಯಲಿದೆ ಎಂಬ ಗೊಂದಲ ನಿವಾರಣೆಯಾದಂತಾಗಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವೇಳಾಪಟ್ಟಿಯ ಪ್ರಕಾರ, 2019ರ ಮಾರ್ಚ್ 29ರಂದು ದುಬೈನಲ್ಲಿ ಆರಂಭಗೊಳ್ಳುವ ಐಪಿಎಲ್ ಮೇ 19ರಂದು ದುಬೈನಲ್ಲೇ ಫೈನಲ್‌ನೊಂದಿಗೆ ಅಂತ್ಯ ಹಾಡಲಿದೆ ಎಂಬಂತಿತ್ತು. ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ ಎಂದು ಹೇಳಲಾಗಿತ್ತು.

Story first published: Tuesday, January 8, 2019, 17:33 [IST]
Other articles published on Jan 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+