ಐಪಿಎಲ್ 2019: ಇಂಡಿಯನ್ಸ್ ವಿರುದ್ಧ ಸೇಡಿನ ತವಕದಲ್ಲಿ ಸೂಪರ್ ಕಿಂಗ್ಸ್

ಚೆನ್ನೈ, ಏಪ್ರಿಲ್ 26: ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಬದ್ಧ ಎದುರಾಳಿ ಮುಂಬಯಿ ಇಂಡಿಯನ್ಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದೊಂದಿಗೆ ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಕಣಕ್ಕಿಳಿಯಲಿದೆ.
ಲೀಗ್‌ನಲ್ಲಿ ಈವರೆಗೆ ಆಡಿರುವ ಒಟ್ಟು 11 ಪಂದ್ಯಗಳಲ್ಲಿ 8 ಜಯದೊಂದಿಗೆ 16 ಅಂಕಗಳನ್ನು ಒಗ್ಗೂಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಪ್ಲೇ ಆಫ್ಸ್ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಆದರೂ, ಗೆಲುವಿನ ಅಲೆಯಲ್ಲೇ ಸಾಗುವ ಲೆಕ್ಕಾಚಾರದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಪಡೆ, ಅಂಕಪಟ್ಟಿಯ ಅಗ್ರಸ್ಥಾನ ಕಾಯ್ದುಕೊಳ್ಳುವುದನ್ನು ಎದುರು ನೋಡುತ್ತಿದೆ.
ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರುವ ಮೂರು ಬಾರಿಯ ಚಾಂಪಿಯನ್ಸ್ ಮುಂಬಯಿ ಇಂಡಿಯನ್ಸ್, ತನ್ನ ಪಾಲಿನ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ 2 ಜಯ ದಾಖಲಿಸಿದರೆ ಪ್ಲೇ ಆಫ್ಸ್ ಟಿಕೆಟ್ ಪಡೆದುಕೊಳ್ಳಲಿದೆ. ಇಂಡಿಯನ್ಸ್ ಸದ್ಯ 10 ಪಂದ್ಯಗಳಿಂದ 6 ಜಯದೊಂದಿಗೆ 12 ಅಂಕಗಳನ್ನು ಗಳಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು 5 ವಿಕೆಟ್‌ಗಳ ಹೀನಾಯ ಸೋಲನುಭವಿಸಿರುವುದು ಇಂಡಿಯನ್ಸ್ ತಂಡದ ಆತ್ಮವಿಶ್ವಾಸವನ್ನು ಕೊಂಚ ತಗ್ಗಿಸಿದೆ ಎಂದೇ ಹೇಳಬಹುದು.
ಇನ್ನು ಕಳೆದ ಬಾರಿ ಸೂಪರ್ ಕಿಂಗ್ಸ್ ಪಡೆ ಮುಂಬಯಿ ಇಂಡಿಯನ್ಸ್ ತಂಡವನ್ನು ಎದುರಾದಾಗ 37 ರನ್‌ಗಳ ಹೀನಾಯ ಸೋಲುಂಡಿತ್ತು. ಇದೀಗ ಆ ಸೋಲಿಗೆ ತನ್ನ ಮನೆಯಂಗಣದಲ್ಲಿ ದಿಟ್ಟ ಉತ್ತರ ನೀಡಲು ಎದುರು ನೋಡುತ್ತಿದೆ.
ಸೂಪರ್ ಕಿಂಗ್ಸ್ ಸಂಭಾವ್ಯ 11
ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಡ್ವೇನ್ ಬ್ರಾವೋ, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ದೀಪಕ್ ಚಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.
ಇಂಡಿಯನ್ಸ್ ಸಮಭಾವ್ಯ 11
ರೋಹಿತ್ ಶರ್ಮಾ, ಕ್ವಿಂಟನ್ ಡಿ'ಕಾಕ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್, ಬೆನ್ ಕಟಿಂಗ್, ಕೃಣಾಲ್ ಪಾಂಡ್ಯ, ಮಯಾಂಕ್ ಮಾರ್ಕಂಡೆ, ರಾಹುಲ್ ಚಹರ್, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬುಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications