ಐಪಿಎಲ್ 12 : ಚೆನ್ನೈ ತಂಡದಿಂದ ಇಂಗ್ಲೆಂಡಿನ ಮಾರ್ಕ್ ವುಡ್ ಹೊರಕ್ಕೆ

ಚೆನ್ನೈ, ನವೆಂಬರ್ 14: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡವು ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನಿಂದ ಮೂವರು ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
ನವೆಂಬರ್ 14ರಂದು ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಎಸ್ ಕೆ, ಇಂಗ್ಲೆಂಡಿನ ವೇಗಿ ಮಾರ್ಕ್ ವುಡ್, ದೇಶಿ ಯುವ ಆಟಗಾರರಾದ ಕಾನಿಷ್ಕ್ ಸೇಠ್ ಹಾಗೂ ಕ್ಷಿತಿಜ್ ಶರ್ಮ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಮಾರ್ಕ್ ವುಡ್ ಅವರು ಚೆನ್ನೈ ಪರ ಕೇವಲ ಒಂದು ಪಂದ್ಯವಾಡಿದ್ದರು. ಕ್ಷಿತಿಜ್ ಹಾಗೂ ಕಾನಿಷ್ಕ್ ಯಾವುದೇ ಪಂದ್ಯವಾಡಿರಲಿಲ್ಲ. ಉಳಿದಂತೆ, ಇಂಗ್ಲೆಂಡ್ ಆಲ್ ರೌಂಡರ್ ಡೇವಿಡ್ ವಿಲ್ಲಿ ಅವರನ್ನು ಉಳಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ಕೇದಾರ್ ಜಾಧವ್ ಬದಲಿಗೆ ಕಣಕ್ಕಿಳಿಯಲಿದ್ದಾರೆ.
ಎಂಎಸ್ ಧೋನಿ ನೇತೃತ್ವದ ಸಿಎಸ್ ಕೆ ತಂಡವು ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್ ಗೆ ಮರಳಿದ್ದಲ್ಲದೆ, ಕಪ್ ಎತ್ತಿ ಸಂಭ್ರಮಿಸಿತ್ತು. ಏಳು ಬಾರಿ ಫೈನಲ್ ತಲುಪಿರುವ ಚೆನ್ನೈ ತಂಡವು ಮೂರು ಬಾರಿ ಕಪ್ ಗೆದ್ದಿದೆ. ಮುಂಬೈ ಇಂಡಿಯನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಲಾ ಮೂರು ಬಾರಿ ಗೆದ್ದಿರುವ ತಂಡಗಳಾಗಿವೆ.
ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಂಡಿರುವ ಚೆನ್ನೈ ತಂಡದಲ್ಲಿ ಅಂಬಟಿ ರಾಯುಡು, ಕರಣ್ ಶರ್ಮ, ಕೇದಾರ್ ಜಾಧವ್, ಮುರಳಿ ವಿಜಯ್ ಕೂಡಾ ಇದ್ದಾರೆ. ಮುಂದಿನ ಸೀಸನ್ ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications