Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್ ಗಿದೆ ರಸೆಲ್ ಪವರ್, ಚೆನ್ನೈಗೆ ಕೂಲ್ ಕ್ಯಾಪ್ಟನ್ ಬಲ

IPL 2019, Chennai Super kings vs Kolkata Knight Riders : Probable XIs, Match Prediction

ಚೆನ್ನೈ, ಏಪ್ರಿಲ್ 09: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ ಮೂರನೇ ವಾರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಇಂದು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದೆ. ಈ ಬಾರಿಯ ಐಪಿಎಲ್ ನಲ್ಲಿ ಸ್ಪರ್ಧಾತ್ಮಕ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಎದುರು ನೋಡುತ್ತಿದೆ.

ಚೆಪಾಕ್ ಸ್ಟೇಡಿಯಂ ನಡೆಯಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ಧೋನಿ ಪಡೆ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆದರೆ, ಚೆನ್ನೈ ವಿರುದ್ಧ ಗೆಲ್ಲಬಲ್ಲ ಸಮರ್ಥ ಕೆಕೆಆರ್ ತಂಡಕ್ಕಿದೆ.

ಇಲ್ಲಿ ತನಕ ಐಪಿಎಲ್ ನಲ್ಲಿ ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 12 ಬಾರಿ, ಕೆಕೆಆರ್ 8 ಬಾರಿ ಗೆಲುವು ಸಾಧಿಸಿವೆ. ಆದರೆ, ಚೆಪಾಕ್ ನಲ್ಲಿ 8 ಪಂದ್ಯಗಳಲ್ಲಿ ಚೆನ್ನೈ 6, ಕೆಕೆಆರ್ 22 ಪಂದ್ಯ ಗೆದ್ದಿದೆ.

ಉಭಯ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಚೆಪಾಕ್ ಅಂಗಳ ಸ್ಪಿನ್ನರ್ಸ್ ಗೆ ನೆರವಾಗುವುದರಿಂದ ಈ ಪಂದ್ಯದಲ್ಲಿ ಸ್ಪಿನ್ನರ್ ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆಂಡ್ರೆ ರಸೆಲ್ ಅವರ ಆಲ್ ರೌಂಡರ್ ಆಟದ ಮೇಲೆ ಕೆಕೆಆರ್ ಅವಲಂಬಿತವಾಗಿದೆ. ಚೆನ್ನೈ ತಂಡದಲ್ಲಿ ಶೇನ್ ವಾಟ್ಸನ್ ಅವರು ತಮ್ಮ ಲಯ ಕಂಡುಕೊಳ್ಳುವ ನಿರೀಕ್ಷೆಯಿದೆ.

ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಅಂಬಟಿ ರಾಯುಡು, ಕೇದಾರ್ ಜಾಧವ್, ರವೀಂದ್ರ ಜಡೇಜ, ದೀಪಕ್ ಚಾಹರ್, ಸ್ಕಾಟ್ ಕುಗ್ಗೆಲೆನ್, ಹರ್ಭಜನ್ ಸಿಂಗ್, ಇಮ್ರಾನ್ ತಾಹೀರ್, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ

1
45899

ಕೋಲ್ಕತ್ತಾ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್ (ನಾಯಕ, ವಿಕೆಟ್ ಕೀಪರ್), ಅಂಡ್ರೆ ರಸೆಲ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್, ಹ್ಯಾರಿ ಗರ್ನಿ, ಪ್ರಸಿದ್ಧ್ ಕೃಷ್ಣ, ಕ್ರಿಸ್ ಲಿನ್, ಸುನೀಲ್ ನರೇನ್, ರಾಬಿನ್ ಉತ್ತಪ್ಪ, ಶುಭಂ ಗಿಲ್ ಹಾಗೂ ನಿತೀಶ್ ರಾಣಾ.

Story first published: Tuesday, April 9, 2019, 13:10 [IST]
Other articles published on Apr 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+