
ಜೈಪುರ್, ಮಾರ್ಚ್ 25: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ವೇಗದ 4000 ರನ್‌ಗಾಗಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸೋಮವಾರ (ಮಾರ್ಚ್ 25) ಜೈಪುರ್‌ನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ XI ಪಂಜಾಬ್ ನಡುವಿನ ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದರು.
ರಾಜಸ್ಥಾನ್ ರಾಯಲ್ಸ್ vs ಕಿಂಗ್ಸ್ XI ಪಂಜಾಬ್ Live Score ಕೆಳಗಿದೆ.
ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 4ನೇ ಪಂದ್ಯಕ್ಕೂ ಮುನ್ನ ಗೇಲ್‌ಗೆ ಐಪಿಎಲ್ 4000 ರನ್ ಪೂರೈಸಲು ಕೇವಲ 6 ರನ್‌ಗಳ ಅಗತ್ಯವಿತ್ತು. ಪಂದ್ಯದಲ್ಲಿ ಗೇಲ್ 47 ಎಸೆತಗಳಿಗೆ 79 ರನ್ ಬಾರಿಸಿದರು. ಈ ಸಾಧನೆಯೊಂದಿಗೆ ಕ್ರಿಸ್, ಸ್ಪೋಟಕ ಬ್ಯಾಟ್ಸ್ಮನ್ ದೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದ್ದಾರೆ.
ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ, ಅಂತಾರಾಷ್ಟ್ರೀಯಕ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧಕ್ಕೀಡಾಗಿದ್ದ ಆಸ್ಟ್ರೇಯಾದ ಆರಂಭಿಕ ಆಟಗಾರ ವಾರ್ನರ್ ಒಟ್ಟು 114 ಇನ್ನಿಂಗ್ಸ್‌ಗಳಲ್ಲಿ 4000 ರನ್ ಬಾರಿಸಿದ್ದರು. ಗೇಲ್ 112 ಇನ್ನಿಂಗ್ಸ್‌ಗಳಲ್ಲಿ 4000 ರನ್ ಗಡಿ ದಾಟಿದ್ದಾರೆ.
ಅಂತೂ ಐಪಿಎಲ್ ನಲ್ಲಿ 4000 ರನ್ ಬಾರಿಸಿದ 9ನೇ ಆಟಗಾರನಾಗಿ ಗೇಲ್ ಗುರುತಿಸಿಕೊಂಡಿದ್ದಾರೆ. ಇದೇ ಸಾಧನೆಯನ್ನು ಕ್ರಮವಾಗಿ ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ, ಶಿಖರ್ ಧವನ್, ಎಂಎಸ್ ಧೋನಿ ಮತ್ತು ಡೇವಿಡ್ ವಾರ್ನರ್ ಮಾಡಿದ್ದರು.