ಟಿ20 ಅತ್ಯಧಿಕ ರನ್ ಹೊಸ ದಾಖಲೆ ಬರೆದ ಯುನಿವರ್ಸಲ್ ಬಾಸ್ ಗೇಲ್

ಮುಂಬೈ, ಏಪ್ರಿಲ್ 10: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರ ಅಬ್ಬರ ಬ್ಯಾಟಿಂಗ್ ಐಪಿಎಲ್ ನಲ್ಲಿ ಮತ್ತೆ ಕಾಣಸಿಕ್ಕಿತು. ಬುಧವಾರ (ಏಪ್ರಿಲ್ 10) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 24ನೇ ಪಂದ್ಯದಲ್ಲಿ ಗೇಲ್ ವೇಗದ ಅರ್ಧಶತಕ ಬಾರಿಸಿದರು.
ಐಪಿಎಲ್ 2019: ಪಂಜಾಬ್ vs ಮುಂಬೈ ಪಂದ್ಯ, Live ಸ್ಕೋರ್‌ಕಾರ್ಡ್
ಮುಂಬೈ ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಪರ ಕೆಲ್ ರಾಹುಲ್ ಮತ್ತು ಗೇಲ್ ಉತ್ತಮ ಜೊತೆಯಾಟ ನೀಡಿದರು. ಈ ವೇಳೆ ಗೇಲ್ 36 ಎಸೆತಗಳಿಗೆ 63 ರನ್ ಬಾರಿಸಿದ್ದರು.
3 ಬೌಂಡರಿ, 7 ಸಿಕ್ಸರ್‌ಗಳ ಮೂಲಕ ಒಟ್ಟು 63 ರನ್ ಕಲೆ ಹಾಕಿದ ಗೇಲ್ ಐಪಿಎಲ್‌ನಲ್ಲಿ 26ನೇ ಅರ್ಧ ಶತಕ ಪೂರೈಸಿಕೊಂಡಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 12,500 ರನ್ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿಯೂ ಕ್ರಿಸ್‌ಗೇಲ್ ದಾಖಲೆ ಬರೆದಿದ್ದಾರೆ.
ಟಿ20ಯಲ್ಲಿ ಗೇಲ್ ಒಟ್ಟು 12,541 ರನ್ ಮೂಲಕ ಅತೀ ಹೆಚ್ಚು ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಬ್ರೆಂಡನ್ ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ 9,922 ರನ್ ಬಾರಿಸಿದ್ದಾರೆ. ಬುಧವಾರದ ಪಂದ್ಯದಲ್ಲಿ ಪಂಜಾಬ್ ಮತ್ತೊಬ್ಬ ಆರಂಭಿಕ ಆಟಗಾರ, ಕನ್ನಡಿಗ ರಾಹುಲ್ 64 ಎಸೆತಗಳಿಗೆ 100 ರನ್ ಬಾರಿಸಿ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications