IPL 2019: ಇನ್ಸ್ಟಾಗ್ರಾಂನಲ್ಲೊಂದು ವಿಶೇಷ ಫೋಟೋ ಶೇರ್ ಮಾಡಿದ ಗೇಲ್

ನವದೆಹಲಿ, ಏಪ್ರಿಲ್ 5: ಕಿಂಗ್ಸ್ XI ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್‌ಗೇಲ್ ತನ್ನ ಇನ್ಸ್ಟಾಗ್ರಾಂನಲ್ಲಿ ವಿಶೇಷ ಫೋಟೋ ಹಾಕಿಕೊಂಡಿದ್ದಾರೆ. ಇದರಲ್ಲಿ ಗೇಲ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ನ ಇನ್ನೊಬ್ಬ ಆಟಗಾರ ಸ್ಯಾಮ್ ಕರನ್ ಇದ್ದಾರೆ. ಗೇಲ್-ಕರನ್ ಜೊತೆಯಾಗಿ ನಿಂತಿರುವ ಆಗಿನ-ಈಗಿನ ಫೋಟೋ ಇದು.
ಐಪಿಎಲ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಯುವ ಆಟಗಾರ ಸ್ಯಾಮ್ ಕರನ್ ಬಾಲಕನಾಗಿದ್ದಾಗ ಗೇಲ್ ಅಭಿಮಾನಿಯಾಗಿ ಗೇಲ್ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದರು. ಆದರೆ ಈಗ ಒಂದೇ ತಂಡದಲ್ಲಿ ಇಬ್ಬರೂ ಆಟಗಾರರು ಆಡುತ್ತಿದ್ದಾರೆ. ಇದೇ ಸಂಗತಿಯನ್ನು ಗೇಲ್ ಫೋಟೋದ ಜೊತೆ ಬರೆದುಕೊಂಡಿದ್ದಾರೆ.
ಐಪಿಎಲ್ 2019ರ ಈಗಿನ ಪಾಯಿಂಟ್ ಟೇಬಲ್ ಗಮನಿಸಿದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿರುವ 4ರಲ್ಲಿ 3 ಪಂದ್ಯಗಳನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಕೂಡ 4ರಲ್ಲಿ 3 ಪಂದ್ಯ ಗೆದ್ದಿದ್ದರೂ ನೆಟ್ ರೇಟ್ ಆಧಾರದಲ್ಲಿ ಮೊದಲ ಸ್ಥಾನ ಆವರಿಸಿದೆ.
Story first published: Friday, April 5, 2019, 20:01 [IST]
Other articles published on Apr 5, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications