ಆರ್‌ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್!


ಬೆಂಗಳೂರು, ಏಪ್ರಿಲ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಆನೆ ಬಲ ಬಂದಂತಾಗಿದೆ. ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಅವರು ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಗಾಯಗೊಂಡಿರುವ ನಾಥನ್ ಕೌಲ್ಟರ್-ನೈಲ್ ಸ್ಥಾನಕ್ಕೆ ಸ್ಟೇನ್ ಅವರನ್ನು ತರಲಾಗಿದೆ.
ಸುಮಾರು 2 ವರ್ಷಗಳ ನಂತರ ಸ್ಟೇನ್ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದರಲ್ಲಿದ್ದಾರೆ. 2016ರಲ್ಲಿ ಗುಜರಾತ್ ಲಯನ್ಸ್ ಪರ ಕಡೆಯ ಸಾರಿ ಡೇಲ್ ಸ್ಟೇನ್ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅದೂ ಕೇವಲ ಒಂದೇ ಪಂದ್ಯದಲ್ಲಿ ಸ್ಟೇನ್ ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಲಭಿಸಿತ್ತು.
ಅದಕ್ಕೂ ಮುನ್ನ ಸ್ಟೇನ್ ಆರ್‌ಸಿಬಿ ತಂಡದಲ್ಲಿದ್ದರು. 2008ರಿಂದ 2010ರ ಅವಧಿಯಲ್ಲಿ ಬೆಂಗಳೂರು ತಂಡದಲ್ಲಿದ್ದ ಸ್ಟೇನ್ 28 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್‌ಗಳನ್ನು ಪಡೆದಿದ್ದರು. ಈ ಬಾರಿಯ ಟೂರ್ನಿಯಲ್ಲಿ ಸತತ 6 ಸೋಲುಗಳನ್ನು ಕಂಡು ಮಂಕಾಗಿರುವ ಆರ್‌ಸಿಬಿಗೆ ಸ್ಟೇನ್ ಸೇರ್ಪಡೆ ಕೊಂಚ ಹುಮ್ಮಸ್ಸು ತುಂಬಲಿದೆ. ಆರ್‌ಸಿಬಿ ತಂಡ ಏಪ್ರಿಲ್ 13ರಂದು ಕಿಂಗ್ಸ್ XI ಪಂಜಾಬ್ ಜೊತೆ ಕಾದಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications