ಐಪಿಎಲ್ ಅಭ್ಯಾಸ ಪಂದ್ಯ : ಸನ್ ರೈಸರ್ಸ್ ಪರ ವಾರ್ನರ್ ಭರ್ಜರಿ ಬ್ಯಾಟಿಂಗ್


ಹೈದರಾಬಾದ್, ಮಾರ್ಚ್ 18: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಮುಗಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರು ಹೊಸ ಉತ್ಸಾಹದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದ್ದಾರೆ.
ಭಾನುವಾರದಂದು ಜೈಪುರಕ್ಕೆ ಆಗಮಿಸಿ, ರಾಜಸ್ಥಾನ ರಾಯಲ್ಸ್ ತಂಡದ ಶಿಬಿರವನ್ನು ಸ್ಮಿತ್ ಸೇರಿದರು. ಇದಕ್ಕೂ ಮುನ್ನವೆ ತಂಡ ಸೇರಿದ ಡೇವಿಡ್ ವಾರ್ನರ್ ಅವರು ಅಭ್ಯಾಸ ಪಂದ್ಯವನ್ನಾಡಿದರು.
ಸನ್ರೈಸರ್ಸ್ ಎ ತಂಡದ ಪರವಾಗಿ ಆಡಿದ ವಾರ್ನರ್ ಅವರು ಸನ್ರೈಸರ್ಸ್ ಬಿ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 43 ಎಸೆತಗಳಲ್ಲಿ 65 ರನ್ ಬಾರಿಸಿದರು. ಇದೇ ವೇಳೆ ಯೂಸುಫ್ ಪಠಾಣ್ ಅವರು 30 ಎಸೆತಗಳಲ್ಲಿ 68 ರನ್ ಗಳಿಸಿ ಅಬ್ಬರಿಸಿದರು.
ನಿಷೇಧದಿಂದ ಮರಳಿರುವ ಸ್ಟೀವ್ ಸ್ಮಿತ್, ವಾರ್ನರ್
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣ ನಡೆದಿತ್ತು. ಇದರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಸಿಕ್ಕಿಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಕಳೆದ ವರ್ಷ ಮಾರ್ಚ್ 28ರಂದು ಮೂವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು.
ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ-ವಾರ್ನರ್
'ಹೈದರಾಬಾದಿಗೆ ಮರಳಿ, ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವುದು ಸಂತಸ ತಂದಿದೆ. ಕಳೆದ 12 ವರ್ಷಗಳಿಂದ ಅಭಿಮಾನಿಗಳು, ಫ್ರಾಂಚೈಸಿಗಳು ನೀಡಿರುವ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ' ಎಂದು ವಾರ್ನರ್ ಅವರು ಹೇಳಿದರು.
ಸೀಸನ್ ನಲ್ಲಿ ಸನ್ ರೈಸರ್ಸ್ ತಂಡ ರನ್ನರ್ ಆಪ್
ಮಾರ್ಚ್ 24ರಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಈಡೆನ್ ಗಾರ್ಡನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಮೊದಲ ಪಂದ್ಯವನ್ನಾಡಲಿದೆ. ಕಳೆದ ಸೀಸನ್ ನಲ್ಲಿ ಸನ್ ರೈಸರ್ಸ್ ತಂಡ ರನ್ನರ್ ಆಪ್ ಅಗಿತ್ತು.

ಆಸ್ಟ್ರೇಲಿಯಾದ ಆಟಗಾರರು
ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸ್ಟನ್ ಟರ್ನರ್ ಅವರು ರಾಜಸ್ಥಾನ ತಂಡ ಪರ ಆಡಲಿದ್ದಾರೆ. ಆದರೆ, ಪಾಕಿಸ್ತಾನ ವಿರುದ್ಧ ಸರಣಿ ಇರುವ ಕಾರಣ, ಆಶ್ಟನ್ ಟರ್ನರ್ ರಾಜಸ್ಥಾನ ತಂಡದ ಮೊದಲ 3 ಪಂದ್ಯಗಳಿಗೆ ಲಭ್ಯರಿಲ್ಲ. ಸ್ಟೋಕ್ಸ್, ಬಟ್ಲರ್, ಆರ್ಚರ್ ಕೂಡ ಇದೇ ಕಾರಣಕ್ಕಾಗಿ ಲಭ್ಯರಿಲ್ಲ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications