
ನವದೆಹಲಿ, ಮೇ 4: ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 53ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಸದ್ಯ ಡೆಲ್ಲಿ ಪ್ಲೇ ಆಫ್ ಪ್ರವೇಶಿಸಿ ನಿರಾಳವಾಗಿದ್ದರೆ, ರಾಜಸ್ಥಾನ್‌ಗೆ ಈ ಪಂದ್ಯ ಕೇವಲ ಅದೃಷ್ಟ ಪರೀಕ್ಷೆಯ ನಿಟ್ಟಿನಲ್ಲಿ ಮಾತ್ರ ಕೆಲಸಕ್ಕೆ ಬಂದೀತು.
ಪಂದ್ಯದ Live Score ಕೆಳಗಿದೆ
ಪ್ರಸ್ತುತ ಅಂಕಪಟ್ಟಿಯಲ್ಲಿ ಚೆನ್ನೈ, ಮುಂಬೈ ನಂತರ ಮೂರನೇ ಸ್ಥಾನ ಆವರಿಸಿರುವ ಡೆಲ್ಲಿ ಶನಿವಾರದ (ಮೇ 5) ಪಂದ್ಯದಲ್ಲೂ ಪಾರಮ್ಯ ಮೆರೆಯುವ ನಿರೀಕ್ಷೆಯಿದೆ. ಆದರೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ರಾಜಸ್ಥಾನ್‌ಗೆ ಈ ಪಂದ್ಯದ ಗೆಲುವು ತೀವ್ರ ಅನಿವಾರ್ಯವಾಗಿರುವುದರಿಂದ ಆರ್‌ಆರ್ ಕೂಡ ಕೊಸರಾಟ ನಡೆಸಿದರೆ ಅಚ್ಚರಿಯಿಲ್ಲ.
ಈ ಪಂದ್ಯದಲ್ಲಿ ಗೆದ್ದರೂ ಆರ್‌ಆರ್ ಪಾಲಿಗೆ ಪ್ಲೇ ಆಫ್ ದೂರದ ಮಾತೆ. ಯಾಕೆಂದರೆ ಪ್ಲೇ ಆಫ್ ಪ್ರವೇಶವನ್ನು ನಿರ್ಧರಿಸಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹಿಂದಿನ ಪಂದ್ಯ ಮಳೆಯ ಕಾರಣ ಫಲಿತಾಂಶವಿಲ್ಲವೆಂದು ಘೋಷಿಸಲಾಗಿದ್ದರಿಂದ ಆರ್‌ಆರ್-ಆರ್‌ಸಿಬಿ ಎರಡಕ್ಕೂ ಬರೀ 1 ಅಂಕ ಲಭಿಸಿದ್ದು ಹಿನ್ನಡೆಗೆ ಕಾರಣವಾಗಿತ್ತು. ಶನಿವಾರದ ಮೊದಲ ಪಂದ್ಯ 4 pmಗೆ ಆರಂಭವಾಗಲಿದೆ.
ರಾಜಸ್ಥಾನ್ ಸಂಭಾವ್ಯ ತಂಡ: ಅಜಿಂಕ್ಯ ರಹಾನೆ, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (ವಿ.ಕೆ.), ಆ್ಯಷ್ಟನ್ ಟರ್ನರ್, ರಿಯಾನ್ ಪರಾಗ್, ಸ್ಟುವರ್ಟ್ ಬಿನ್ನಿ, ಮಹೀಪಾಲ್ ಲೋಮರರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್/ಇಶ್ ಸೊಧಿ, ವರುಣ್ ಆ್ಯರನ್, ಒಶೇನ್ ಥಾಮಸ್.
ಡೆಲ್ಲಿ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್ (ಸಿ), ರಿಷಬ್ ಪಂತ್ (W), ಕಾಲಿನ್ ಇಂಗ್ರಾಮ್ / ಹನುಮಾ ವಿಹಾರಿ, ಶೇರ್ಫೇನ್ ರುದರ್ಫೋರ್ಡ್, ಅಕ್ಸರ್ ಪಟೇಲ್, ಕ್ರಿಸ್ ಮೊರಿಸ್, ಜಗದೀಶ ಸುಚಿತ್, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್.