ಸಂಭಾವ್ಯ XI : ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸಮರ

ಜೈಪುರ, ಏಪ್ರಿಲ್ 03: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 16ನೇ ಪಂದ್ಯದಲ್ಲಿಂದು ಹೊಸ ಉತ್ಸಾಹದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದರೂ ಈ ಪಂದ್ಯದಲ್ಲಿ ಮೇಲ್ನೋಟಕ್ಕೆ ಹೈದರಾಬಾದ್ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಒಂದು ಪಂದ್ಯ ಸೋತು, ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಎರಡು ಪಂದ್ಯ ಸೋತು ಹಾಗೂ ಎರಡರಲ್ಲಿ ಗೆಲುವು ಸಾಧಿಸಿರುವ ಡೆಲ್ಲಿ 5ನೇ ಸ್ಥಾನದಲ್ಲಿದೆ.
ಉಭಯ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು, ಹೈದರಾಬಾದ್ 8 ಬಾರಿ ಹಾಗೂ ಡೆಲ್ಲಿ 4 ಬಾರಿ ಗೆಲುವು ಸಾಧಿಸಿವೆ. ಡೆಲ್ಲಿ ತಂಡ ಈ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ
ಆರಂಭಿಕರು: ಶಿಖರ್ ಧವನ್, ಪೃಥ್ವಿಶಾ
ಮಧ್ಯಮ ಕ್ರಮಾಂಕ : ಶ್ರೇಯಸ್ ಅಯ್ಯರ್(ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ಕಾಲಿನ್ ಇನ್ ಗ್ರಾಮ್,
ಆಲ್ ರೌಂಡರ್: ಕ್ರಿಸ್ ಮೊರಿಸ್, ಹನುಮ ವಿಹಾರಿ, ಹರ್ಷಲ್ ಪಟೇಲ್
ಬೌಲರ್ಸ್: ಕಗಿಸೋ ರಬಾಡಾ, ಅಮಿತ್ ಮಿಶ್ರಾ, ಸಂದೀಪ್ ಲಾಮಿಚಾನೆ
ಸನ್ ರೈಸರ್ಸ್ ಹೈದರಾಬಾದ್ ತಂಡ
ಕಳೆದ ಪಂದ್ಯದಲ್ಲಿ ಮೊಹಮ್ಮದ್ ನಬಿ ನಾಲ್ಕು ವಿಕೆಟ್ ತೆಗೆದುಕೊಂಡು ಆರ್ ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು, ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅಥವಾ ರಶೀದ್ ಖಾನ್ ನಡುವೆ ಆಡುವ ಹನ್ನೊಂದರಲ್ಲಿ ಯಾರು ಆಡಲಿದ್ದಾರೆ ಕಾದು ನೋಡಬೇಕಿದೆ.
ಆರಂಭಿಕರು : ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋ(ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ : ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್
ಆಲ್ ರೌಂಡರ್ಸ್: ವಿಜಯ್ ಶಂಕರ್, ಯೂಸುಫ್ ಪಠಾಣ್, ಮೊಹಮ್ಮದ್ ನಬಿ
ಬೌಲರ್ಸ್ : ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ
ನಿರೀಕ್ಷೆ: ಸನ್ ರೈಸರ್ಸ್ ಹೈದರಬಾದ್ ತಂಡದ ಉತ್ತಮ ಲಯದಲ್ಲಿದ್ದು, ಚೇಸಿಂಗ್ ನಲ್ಲೂ ಸಾಮರ್ಥ್ಯ ತೋರಬಲ್ಲದು. ಡೆಲ್ಲಿ ತಂಡದ ಸ್ಪಿನ್ನರ್ ಗಳು ಯಾವ ರೀತಿ ರನ್ ಗತಿಗೆ ಬ್ರೇಕ್ ಹಾಕುತ್ತಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡವು ಕಡಿಮೆ ಅಂತರದಿಂದ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications