Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2019: ಕೋಟ್ಲಾ ಮೈದಾನದ ಬಗ್ಗೆ ಕಿಡಿಕಾರಿದ ಡೆಲ್ಲಿ ಕೋಚ್ ಪಾಂಟಿಂಗ್

IPL 2019: Delhi Capitals coach Ricky Ponting blasts Kotla track

ನವದೆಹಲಿ, ಏಪ್ರಿಲ್ 5: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರು ಫಿರೋಜ್ ‍ಷಾ ಕೋಟ್ಲಾ ಮೈದಾನದ ಬಗ್ಗೆ ಕಿಡಿ ಕಾರಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಎದುರಾಳಿ ಆಟಗಾರರಿಗೆ ಅನುಕೂಲವಾಗುವಂತಹ ಪರಿಸ್ಥಿತಿಯನ್ನು ಮೈದಾನದ ಸಿಬ್ಬಂದಿಗಳು ಸೃಷ್ಟಿಸಿದ್ದರು ಎಂದು ಪಾಂಟಿಂಗ್ ದೂರಿದ್ದಾರೆ.

ಗುರುವಾರ (ಏಪ್ರಿಲ್ 5) ನಡೆದ ಐಪಿಎಲ್ 16ನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಡೆಲ್ಲಿ 5 ವಿಕೆಟ್ ಸೋಲನುಭಿಸಿತ್ತು. ಪಂದ್ಯದಲ್ಲಿ ತಲಾ 4 ಓವರ್‌ನಂತೆ ಬೌಲಿಂಗ್ ಮಾಡಿದ್ದ ಅಪ್ಘಾನಿಸ್ತಾನ ಸ್ಪಿನ್ನರ್‌ಗಳಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ 2 ವಿಕೆಟ್ ಕೆಡವಿದ್ದರು. 8 ಓವರ್‌ಗಳಲ್ಲಿ ಇಬ್ಬರೂ ಡೆಲ್ಲಿಗೆ ನೀಡಿದ್ದು ಕೇವಲ 39 ರನ್ ಮಾತ್ರ.

'ಇದು (ಪಿಚ್) ಖಂಡಿತವಾಗಿಯೂ ಹೈದರಾಬಾದ್ ಆಟಗಾರರಿಗೆ ಅನುಕೂಲ ಮಾಡಿಕೊಡುವಂತಿತ್ತು. ಅವರಲ್ಲಿ ಶ್ರೇಷ್ಠ ಸ್ಪಿನ್ನರ್‌ಗಳಿದ್ದರು ಸಾಲದ್ದಕ್ಕೆ ವೇಗಿಗಳೂ ಸ್ಲೋವರ್ ಎಸೆತಗಳನ್ನು ಎಸೆಯುತ್ತಿದ್ದರು. ವೇಗಿಗಳ ಸ್ಲೋವರ್‌ ಎಸೆತಕ್ಕೆ ಹೊಡೆಯೋದು ತುಂಬಾ ಕಷ್ಟ' ಎಂದು ಪಾಟಿಂಗ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಆಸ್ಟ್ರೇಲಿಯಾ ಮಾಜಿ ನಾಯಕ ಪಾಂಟಿಂಗ್, 'ಸತ್ಯ ಹೇಳಬೇಕೆಂದರೆ ಡೆಲ್ಲಿ ವಿಕೆಟ್ ಉರುಳುತ್ತಿದ್ದುದು ನಮಗೆ ಅಚ್ಚರಿ ಮೂಡಿಸುತ್ತಿತ್ತು. ಮೈದಾನ ಸಿಬ್ಬಂದಿಗಳ ಬಗ್ಗೆ ನಾವು ಹೇಳಬೇಕೆಂದರೆ, ಪಂದ್ಯಕ್ಕೂ ಮುನ್ನ ಈ ತವರು ಮೈದಾನ ನಮಗೆ ಅತ್ಯುತ್ತಮ ಎಂದು ಭಾವಿಸಿದ್ದೆವು. ಆದರೆ ಪಂದ್ಯದ ಬಳಿಕ ಇದು ಕೆಟ್ಟ ಮೈದಾನ ಅನ್ನಿಸಿತು' ಎಂದರು.

Story first published: Friday, April 5, 2019, 16:27 [IST]
Other articles published on Apr 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+