ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಡೆಲ್ಲಿ ವೇಗಿ ಕಾಗಿಸೋ ರಬಾಡಾ

IPL 2019: Delhi Capitals’ Kagiso Rabada shares injury update

ನವದೆಹಲಿ, ಮೇ 7: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಿಂಚಿದ್ದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಾನು ಚೆನ್ನಾಗಿದ್ದೇನೆ. ಆದರೆ ಕೊಂಚ ಮುನ್ನಚ್ಚರಿಕೆ ವಹಿಸಬೇಕಾಗಿದೆಯಷ್ಟೆ ಎಂದು ಅವರು ತಿಳಿಸಿದ್ದಾರೆ.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್‌!ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್‌!

ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ರಬಾಡಾ ಕೊಡುಗೆ ಅಪಾರವಾಗಿತ್ತು ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ಗಾಗಿಯೂ ಗುರುತಿಸಿಕೊಂಡಿದ್ದ ರಬಾಡಾ, ಬೆನ್ನು ನೋವಿಗೀಡಾಗಿ ಐಪಿಎಲ್‌ನಿಂದ ಹೊರಗುಳಿದಿದ್ದರು. ಈಗ ಸುಧಾರಿಸುತ್ತಿರುವ ರಬಾಡಾ ಐಪಿಎಲ್‌ ಬಗ್ಗೆ ಉತ್ತಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ.

'ಐಪಿಎಲ್ ನಿಜಕ್ಕೂ ಖುಷಿ ನೀಡಿತ್ತು. ಅವಕಾಶ ನೀಡಿದ್ದಕ್ಕಾಗಿ ನಾನು ನಿಜಕ್ಕೂ ಅಭಾರಿ. ಐಪಿಎಲ್ ಬಿಟ್ಟು ಹೊರಡೋಕೆ ಒಂದು ಬದಿ ಬೇಸರವಾದರೆ ತವರು ನೆಲಕ್ಕೆ ವಾಪಸ್ಸಾಗುತ್ತಿರುವುದರಿಂದ ಇನ್ನೊಂದು ಬದಿ ಖುಷಿಯೂ ಆಯ್ತು. ಇದೊಂದು ಅರ್ಧದಲ್ಲಿ ಸಿಹಿ-ಕಹಿಯ ಮಿಶ್ರಭಾವ' ಎಂದು ರಬಾಡಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಗಿದು ಹೋಗೋ ಮುನ್ನ ಗಮನಿಸಿ; 2019ರ ಪ್ರಮುಖ ವಿವಾದಗಳಿವು!ಮುಗಿದು ಹೋಗೋ ಮುನ್ನ ಗಮನಿಸಿ; 2019ರ ಪ್ರಮುಖ ವಿವಾದಗಳಿವು!

'ಇನ್ನು ನನ್ನ ಬೆನ್ನು ನೋವಿನ ಬಗ್ಗೆ ತಿಳಿಸೋದಾದರೆ, ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ. ಆದರೆ ಕೊಂಚ ಮುನ್ನೆಚ್ಚರಿಕೆ ವಹಿಸಬೇಕಾಷ್ಟೆ. ಎಲ್ಲಾ ವಿಧದಲ್ಲೂ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಹಾಯ ಒದಗಿಸಬಲ್ಲೆ' ಎಂದೂ ಸಾಲನ್ನು ರಬಾಡಾ ಸೇರಿಸಿಕೊಂಡಿದ್ದಾರೆ. ಸದ್ಯ ಸುಧಾರಿಸುತ್ತಿರುವ ರಬಾಡಾ ಐಸಿಸಿ ವಿಶ್ವಕಪ್‌ನತ್ತ ಚಿತ್ತ ಹರಿಸುತ್ತಿದ್ದಾರೆ.

Story first published: Tuesday, May 7, 2019, 0:24 [IST]
Other articles published on May 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X