Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: 'ಡೆಲ್ಲಿ ಕ್ಯಾಪಿಟಲ್ಸ್' ಎಂದು ಹೆಸರು ಬದಲಿಸಿದ ಡೆಲ್ಲಿ ಡೇರ್ ಡೆವಿಲ್ಸ್!

IPL 2019 : 'ಡೆಲ್ಲಿ ಕ್ಯಾಪಿಟಲ್ಸ್' ಎಂದು ಹೆಸರು ಬದಲಿಸಿದ ಡೆಲ್ಲಿ ಡೇರ್ ಡೆವಿಲ್ಸ್! | Oneindia Kannada
IPL 2019: Delhi Daredevils renamed as Delhi Capitals

ನವದೆಹಲಿ, ಡಿಸೆಂಬರ್ 4: ಐಪಿಎಲ್ 2019ರ ಅದ್ದೂರಿ ಆವೃತ್ತಿಗೆ ಮುಂದಡಿಯಿಡುತ್ತಿದ್ದಂತೆ ಟೂರ್ನಿಯ ಪ್ರಮುಖ ತಂಡವೊಂದು ತನ್ನ ತಂಡದ ಹೆಸರನ್ನು ಬದಲಿಸಿಕೊಂಡಿದೆ. ಡೆಲ್ಲಿ ಡೇರ್ ಡೆವಿಲ್ಸ್‌ ತಂಡ ತನ್ನ ಹೆಸರನ್ನು 'ಡೆಲ್ಲಿ ಕ್ಯಾಪಿಟಲ್ಸ್' ಎಂದು ಮರುನಾಮಕರಣ ಮಾಡಿಕೊಂಡಿದೆ.

ಜನವರಿ 2008ರಂದು ದೆಹಲಿ ಮೂಲದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಜಿಎಂಆರ್ ಗ್ರೂಪ್‌ 84 ಮಿಲಿಯನ್ ಯುಎಸ್‌ಡಿಗೆ ಖರೀದಿಸಿತ್ತು. ಟೂರ್ನಿ ಆರಂಭಗೊಂಡ ಮೊದಲ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ತಂಡ ಅನಂತರ 2012ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದ್ದೇ ಹೆಚ್ಚು.

ಇದೀಗ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರರು, ನಾಯಕತ್ವದಲ್ಲೂ ಬದಲಾವಣೆಗಳಾಗಿವೆ. ಫ್ರಾಂಚೈಸಿ ಹೆಸರೂ ಬದಲಾಗಿರುವುದರಿಂದ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲಿದೆ. ಸ್ಫೋಟಕ ಬ್ಯಾಟ್ಸ್ಮನ್ ಶಿಖರ್ ಧವನ್ ಸನ್ ರೈಸರ್ಸ್ ತೊರೆದು ಡೆಲ್ಲಿ ಸೇರಿರುವುದು ತಂಡಕ್ಕೆ ಪ್ಲಸ್ಸಾಗಿ ಪರಿಣಮಿಸುವ ನಿರೀಕ್ಷೆಯಿದೆ.

Story first published: Tuesday, December 4, 2018, 18:06 [IST]
Other articles published on Dec 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+