ಐಪಿಎಲ್: ಚೆನ್ನೈ ವಿರುದ್ಧ ಬೆಂಗಳೂರು ಸೋತಿದ್ದಕ್ಕೆ ಅಸಲಿ ಕಾರಣ ಇದು!


ಚೆನ್ನೈ, ಮಾರ್ಚ್ 24: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 24) ನಡೆದ ಐಪಿಎಲ್ 2019ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ ಕಾಣುತ್ತದೆ ಎಂಬ ಬೆಂಗಳೂರು ಅಭಿಮಾನಿಗಳ ನಿರೀಕ್ಷೆ ಮಣ್ಣು ಪಾಲಾಯಿತು. ಚೆನ್ನೈ ತಂಡ 7 ವಿಕೆಟ್ ಸುಲಭ ಗೆಲುವು ದಾಖಲಿಸಿತ್ತು.
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಗೆಲ್ಲುವಲ್ಲಿ ಧೋನಿಯ ಜಾಣತನ ಕೆಲಸ ಮಾಡಿತ್ತು. ಎದುರಾಳಿ ತಂಡವನ್ನು ಸುಲಭವಾಗಿ ಕಟ್ಟಿಹಾಕುವ ದಾರಿ ಕಂಡುಕೊಂಡ ಧೋನಿ, ಸ್ಪಿನ್ನರ್ ಹರ್ಭಜನ್ ಅವರನ್ನು ಮೊದಲ ಎಂಟು ಓವರ್‌ಗಳೊಳಗೆ ಬೌಲಿಂಗ್‌ಗೆ ಇಳಿಸಿದ್ದರು.
ಚೆನ್ನೈ ಪಂದ್ಯದಲ್ಲಿ ಸಿಎಸ್‌ಕೆ ಪರ 4 ಓವರ್ ಬೌಲಿಂಗ್ ಮಾಡಿದ್ದ ಹರ್ಭಜನ್, 20 ರನ್ನಿಗೆ 3 ವಿಕೆಟ್ ಪಡೆದಿದ್ದರು. ಬೆಂಗಳೂರು ತಂಡದ ಕೊಹ್ಲಿ, ಮೊಯೀನ್ ಆಲಿ ಮತ್ತು ಎಬಿ ಡಿವಿಲಿಯರ್ಸ್ ಈ ಮೂರೂ ಅಪಾಯಕಾರಿ ಆಟಗಾರರನ್ನು ಪೆವಿಲಿಯನ್‌ಗೆ ಅಟ್ಟಿದ್ದು ಹರ್ಭಜನ್ ಸಿಂಗ್. ಇದು ಬೆಂಗಳೂರಿನ ಸೋಲಿಗೆ ಕಾರಣವೇ.
ಗಮನಿಸಿ; ಕೊಹ್ಲಿ ವಿಕೆಟ್ ಉರುಳಿದ್ದು 3.3ನೇ ಓವರ್‌ಗೆ. ಆಲಿ 5.2ನೇ ಓವರ್‌ಗೆ, ಎಬಿಡಿ 7.2ನೇ ಓವರ್‌ಗೆ ನಿರ್ಗಮಿಸಿದ್ದು ಆರ್‌ಸಿಬಿಯನ್ನು ದಂಗುಬಡಿಸಿತ್ತು. ಅಪಾಯಕಾರಿ ಬ್ಯಾಟ್ಸ್ಮನ್‌ಗಳ ವಿಕೆಟ್ ಮುರಿಯಲು ಭಜ್ಜಿಯೇ ಸೂಕ್ತ ಎಂದು ಭಾವಿಸಿದ್ದ ಧೋನಿ, ಅವರನ್ನೇ ಆರಂಭಿಕ 8 ಓವರ್ ಒಳಗೆ ಬೌಲಿಂಗ್ ಮಾಡಲು ಸೂಚಿಸಿದ್ದರು. ಧೋನಿಯ ಈ ಐಡಿಯಾ ಕೆಲಸ ಮಾಡಿತ್ತು!
ಇದರ ಜೊತೆಗೆ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾದ ಬೆಂಗಳೂರು, ಪಾರ್ಥಿವ್ ಪಾಟೆಲ್ 29 ರನ್‌ನೊಂದಿಗೆ (ಇನ್ಯಾವುದೇ ಬ್ಯಾಟ್ಸ್ಮನ್‌ಗಳು 10ಕ್ಕೂ ಹೆಚ್ಚು ರನ್ ಬಾರಿಸಿಲ್ಲ) 17.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 70 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ 17.4 ಓವರ್‌ಗೆ 3 ವಿಕೆಟ್ ಕಳೆದು 71 ರನ್ ಪೇರಿಸಿ ಶುಭಾರಂಭ ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications