Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಾಟ್ಸನ್, ತಾಹೀರ್ ಮಕ್ಕಳ ಜತೆ ಧೋನಿ ರನ್ನಿಂಗ್ ರೇಸ್

 Dhoni joins Watson and Tahirs sons in playful run

ಚೆನ್ನೈ, ಏಪ್ರಿಲ್ 08: ಐಪಿಎಲ್ 2019ರಲ್ಲಿ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡಿರುವ ಚೆನ್ನೈ ಸೂಪರ್​ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಸಕತ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.

ಪಂಜಾಬ್ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿದ್ದ ಮೈದಾನದಲ್ಲಿ ಮಕ್ಕಳೊಡನೆ ನಾಯಕ ಎಂ.ಎಸ್ ಧೋನಿ ಆಟವಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮಗುವೊಂದನ್ನು ಹೊತ್ತು ನಗುಮೊಗದಲ್ಲಿ ಧೋನಿ ಓಡಿ ಬರುವ ದೃಶ್ಯ ನೋಡಿದ ಎಲ್ಲರೂ ಯಾರು ಆ ಪುಟ್ಟ ಹುಡುಗ ಎಂದು ಕುತೂಹಲದಿಂದ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರಂತೆ.

ತಂಡದ ಸಹ ಆಟಗಾರರಾದ ಇಮ್ರಾನ್​ ತಾಹಿರ್​ ಹಾಗೂ ಶೇನ್​ ವ್ಯಾಟ್ಸನ್​ ಮಕ್ಕಳೊಂದಿಗೆ ಧೋನಿ ಸಂಭ್ರಮ ಹಂಚಿಕೊಂಡಿದ್ದಾರೆ.

ಮಕ್ಕಳ ತಮಾಷೆ ರನ್ನಿಂಗ್​ ರೇಸ್​ನಲ್ಲಿ ಧೋನಿ ಕೂಡ ಸಾಥ್​ ನೀಡಿದರು. ರೇಸ್​ನಲ್ಲಿ ಭಾಗವಹಿಸಿದ ಧೋನಿ ಮಕ್ಕಳನ್ನು ಬಿಟ್ಟು ಹಿಮ್ಮುಖವಾಗಿ ಅವರ ಮುಂದೆ ಓಡಿದರು.


ವಾಟ್ಸನ್ ಪುತ್ರ ತುಂಬಾ ಮುಂದೆ ಓಡುತ್ತಿದ್ದಂತೆ, ಇಮ್ರಾನ್​ ತಾಹಿರ್​ ಮಗನನ್ನು ಹೊತ್ತುಕೊಂಡು ವಾಟ್ಸನ್​ ಮಗನನ್ನು ಹಿಂದೆ ಬಿಟ್ಟು ಓಡಿ ಬಂದರು. ಬಳಿಕ ಅಪ್ಪನ ಬಳಿ ಓಡಿ ಬಂದ ವಾಟ್ಸನ್ ಪುತ್ರ ಅರೇ ಇದೇನಾಯ್ತು ಎಂದು ಅಚ್ಚರಿಯಿಂದ ಧೋನಿಯತ್ತ ನೋಡತೊಡಗಿದ್ದ ವಿಡಿಯೋವೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿತ್ತು. ಪರಾಶಕ್ತಿ ಎಕ್ಸ್ ಪ್ರೆಸ್(ಇಮ್ರಾನ್ ತಾಹೀರ್), ವಾಟ್ಟೋ (ವಾಟ್ಸನ್) ಪುತ್ರರ ರೇಸ್ ನಲ್ಲಿ ತಲಾ ಧೋನಿ ನೋಡಿ ಎಂದು ಮಾಡಿದ ಟ್ವೀಟ್ ವೈರಲಾಗಿದೆ.

Story first published: Monday, April 8, 2019, 23:53 [IST]
Other articles published on Apr 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+