ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ!

ನವದೆಹಲಿ, ಏಪ್ರಿಲ್ 27: ಕ್ರಿಕೆಟ್ ಅಂಗಳ ಅಪರೂಪದ, ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾದ ಅನೇಕ ಉದಾಹರಣೆಗಳಿವೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂಥದ್ದೊಂದು ಅಪರೂಪದ ಸಾಧನೆಗಾಗಿ ಅಚ್ಚರಿ ಮೂಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿದ ಅತೀ ವಿರಳ ಸಂದರ್ಭವೊಂದಕ್ಕೆ ಧೋನಿ ಕಾರಣರಾಗಿದ್ದಾರೆ.
ಏಪ್ರಿಲ್ 11ರಂದು ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ನಾಯಕ, ವಿಕೆಟ್ ಕೀಪರ್ ಧೋನಿ ಆರ್‌ಆರ್ ಆಟಗಾರ ರಿಯಾನ್ ಪರಾಗ್ ಅವರನ್ನು ಶಾರ್ದೂಲ್ ಠಾಕೂರ್ ಓವರ್‌ನಲ್ಲಿ ಕ್ಯಾಚ್ ಮೂಲಕ ಔಟ್ ಮಾಡಿದ್ದರು.
ಧೋನಿ ಕ್ಯಾಚ್ ಹಿಡಿದ, ಔಟ್ ಮಾಡಿದ ಹಿಂದಿನ ದಾಖಲೆಗಳನ್ನು ಕೆದಕಿದಾಗ ಅಪರೂಪದ ಅಚ್ಚರಿ ಕಾಣಸಿಕ್ಕಿದೆ. ಸುಮಾರು 19 ವರ್ಷಗಳ ಹಿಂದೆ ರಣಜಿಯಲ್ಲಿ ಬಿಹಾರ ತಂಡ ಪ್ರತಿನಿಧಿಸಿದ್ದ ಧೋನಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಪರಾಗ್ ಕೆ ದಾಸ್ ಎಂಬವರನ್ನು ಸ್ಟಂಪ್ಡ್ ಔಟ್ ಮಾಡಿದ್ದರು. ಆ ಪರಾಗ್ ಕೆ ದಾಸ್ ಬೇರಾರೂ ಅಲ್ಲ; ಆರ್‌ಆರ್ ತಂಡದಲ್ಲಿ ಈಗ ಆಡುತ್ತಿರುವ ರಿಯಾನ್ ಅವರ ತಂದೆ!
ತಂದೆ-ಮಗ ಅಂದರೆ ಎರಡು ತಲೆಮಾರಿನ ಆಟಗಾರರನ್ನು ಔಟ್ ಮಾಡಿದ ಶ್ರೇಯಸ್ಸು ಧೋನಿಗೆ ಸಲ್ಲುತ್ತದೆ. ಬಹುಶಃ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ಬೇರೆ ಬೇರೆ ಹಂತಗಳಲ್ಲಿ ತಂದೆ-ಮಗನನ್ನು ಔಟ್ ಮಾಡಿದ ಇಂಥ ಪ್ರಸಂಗ ತೀರಾ ಅಪರೂಪವಾದುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications