ಅನಿಲ್ ಕುಂಬ್ಳೆಯ 'ಐಪಿಎಲ್ ಫೈನಲ್ XI'ನಲ್ಲಿ ಖ್ಯಾತ ಹೆಸರುಗಳೇ ಕಾಣೆ!

ಬೆಂಗಳೂರು, ಮೇ 11: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಪಿನ್ ದಂತಕತೆ, ಕನ್ನಡಿಗ ಅನಿಲ್ ಕುಂಬ್ಳೆ 2019ರ ಐಪಿಎಲ್ ಫೈನಲ್‌ಗಾಗಿ ತನ್ನ ನೆಚ್ಚಿನ ತಂಡವನ್ನು ಆರಿಸಿದ್ದಾರೆ. ಇದರಲ್ಲಿ ಭಾರತದ ಖ್ಯಾತ ಆಟಗಾರರೇ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಮೇ 12ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2019ರ ಫೈನಲ್ ಪಂದ್ಯ ನಡೆಯಲಿದೆ. ಇದರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯ ನಡೆಯುವುದಕ್ಕೂ ಮುನ್ನ ಅಂದರೆ ಶುಕ್ರವಾರ (ಮೇ 10) ಕುಂಬ್ಳೆ ತನ್ನ ನೆಚ್ಚಿನ ತಂಡ ಪ್ರಕಟಿಸಿದ್ದಾರೆ.
ಕುಂಬ್ಳೆಯ ಐಪಿಎಲ್ 2019 ನೆಚ್ಚಿನ ತಂಡವನ್ನು ಗಮನಿಸಿದರೆ ಅವರು ಗ್ರೂಪ್ ಸ್ಟೇಜ್ ಹಂತದ ಪ್ರದರ್ಶನಗಳನ್ನು ಪರಿಗಣಿಸಿ ಆಟಗಾರರ ಆಯ್ಕೆ ನಡೆಸಿರುವಂತೆ ಕಾಣಿಸುತ್ತದೆ. ಒಟ್ಟು 16 ಪಂದ್ಯಗಳಲ್ಲಿ 119.94ರ ಸ್ಟ್ರೈಕ್ ರೇಟ್ ನಲ್ಲಿ 463 ರನ್ ಗಳಿಸಿರುವ ಶ್ರೇಯಸ್ ಐಯ್ಯರ್‌ಗೆ ಇಲ್ಲಿ ಸ್ಥಾನ ಲಭಿಸಿದೆ.
ಇನ್ನು ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಹರ್ಭಜನ್ ಸಿಂಗ್ ಇವರ್ಯಾರೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅಂದ್ಹಾಗೆ ಕುಂಬ್ಳೆ ನೆಚ್ಚಿನ ತಂಡದಲ್ಲಿ ಖ್ಯಾತರಿಗೆ ಸ್ಥಾನ ನೀಡಿಲ್ಲ ಎಂಬುದನ್ನು ಹೊರತುಪಡಿಸಿದರೆ ಈ ತಂಡ ಬಲಿಷ್ಠವಾಗಿಯೇ ಇದೆ.
ಐಪಿಎಲ್ 2019ರ ಫೈನಲ್‌ಗೆ ಕುಂಬ್ಳೆಯ ನೆಚ್ಚಿನ XI
(ಬ್ಯಾಟಿಂಗ್ ಕ್ರಮಾಂಕದ ಆಧಾರದಲ್ಲಿ) ಡೇವಿಡ್ ವಾರ್ನರ್, ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ರಿಷಬ್ ಪಂತ್, ಎಂ.ಎಸ್. ಧೋನಿ (ವಿ.ಕೆ ಮತ್ತು ಸಿ), ಹಾರ್ದಿಕ್ ಪಾಂಡ್ಯ, ಆ್ಯಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್ ತಾಹಿರ್, ಕಾಗಿಸೋ ರಾಬಾಡಾ, ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications