For Quick Alerts
ALLOW NOTIFICATIONS  
For Daily Alerts
 

ಫೈನಲ್‌ನಲ್ಲಿ ಎಂಐ-ಸಿಎಸ್‌ಕೆ: ಇದು ಐಪಿಎಲ್‌ ಪಾಲಿನ ಎಲ್ ಕ್ಲಾಸಿಕೋ!

IPL 2019 Final: Combined XI of Mumbai Indians and Chennai Super Kings

ಹೈದರಾಬಾದ್, ಮೇ 11: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 2019 (ಐಪಿಎಲ್) ತೆರೆ ಕಾಣುವುದರಲ್ಲಿದೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮೇ 12) ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

ಪಂದ್ಯದ Live Score ಕಾರ್ಡ್ ಕೆಳಗಿದೆ

1
45949

ಎಂಐ vs ಸಿಎಸ್‌ಕೆ ಕಾದಾಟವನ್ನು ಐಪಿಎಲ್ ನಲ್ಲಿನ 'ಎಲ್ ಕ್ಲಾಸಿಕೋ' ಅನ್ನೋದಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ತಲಾ 3 ಸಾರಿ ಟ್ರೋಫಿ ಜಯಿಸಿರುವುದೋ ಇದಕ್ಕೆ ಕಾರಣ. ಹೀಗಾಗಿ ಫುಟ್ಬಾಲ್‌ನಲ್ಲಿ ಬಾರ್ಸಿಲೋನಾ-ರಿಯಲ್ ಮ್ಯಾಡ್ರಿಡ್‌ ಮುಖಾಮುಖಿಗೆ ಎಲ್ ಕ್ಲಾಸಿಕೋ ಎಂಬ ಹೆಸರಿರುವಂತೆ ಎಂಐ-ಸಿಎಸ್‌ಕೆ ಕದನವೂ ಐಪಿಎಲ್ ಪಾಲಿನ ಎಲ್‌ ಕ್ಲಾಸಿಕೋ ಪಂದ್ಯವಾಗಿ ಗುರುತಿಸಿಕೊಳ್ಳುತ್ತಿದೆ.

ಅಂಕಿ ಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆಯಾದರೂ ಹಾಲಿ ಚಾಂಪಿಯನ್ ಚೆನ್ನೈ 4ನೇ ಬಾರಿಗೆ ಟ್ರೋಫಿ ಜಯಿಸಿದರೂ ಅಚ್ಚರಿಯಿಲ್ಲ. ಅಂತಿಮ ಹಣಾಹಣಿ 7.30 pmಗೆ ಆರಂಭಗೊಳ್ಳಲಿದೆ. ಸ್ಟಾರ್‌ ಸ್ಪೋರ್ಟ್ಸ್, ಹಾಟ್ ಸ್ಟಾರ್ ಮತ್ತು ಮೈಖೇಲ್‌ ಕನ್ನಡದಲ್ಲೂ ಲೈವ್ ಸ್ಕೋರ್‌ ಮಾಹಿತಿ ಸಿಗಲಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ XI: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ರಾಹುಲ್ ಚಹಾರ್, ಜಯಂತ್ ಯಾದವ್/ಮಿಚೆಲ್ ಮೆಕ್ಲೆನಾಘನ್, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ.

ಚೆನ್ನೈ ಸೂಪರ್‌ ಕಿಂಗ್ಸ್ ಸಂಭಾವ್ಯ XI: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಶಾರ್ದೂಲ್ ಠಾಕೂರ್/ಮುರಳಿ ವಿಜಯ್, ದೀಪಕ್ ಚಹಾರ್.

Story first published: Sunday, May 12, 2019, 15:03 [IST]
Other articles published on May 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+