'ಗೇಲಿಗೊಳಗಾದವನೇ ಗೆಲ್ಲೋದು' ಅಂತ ಸಾರಿದ ಸಿಎಸ್‌ಕೆ ಬೌಲರ್ ತಾಹಿರ್!

ಹೈದರಾಬಾದ್, ಮೇ 13: ಒಂದು ವಿಕೆಟ್ ಲಭಿಸಿದಾಗ ಮೈದಾನದ ಆ ತುದಿಯಿಂದ ಈ ತುದಿವರೆಗೂ ಓಡಾಡಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಭಿನ್ನ ರೀತಿಯ ಸಂಭ್ರಮಕ್ಕಾಗಿಯೇ ತಮಾಷೆಗೀಡಾಗಿದ್ದರು. ಆದರೆ ಅದೇ ತಾಹಿರ್ ಐಪಿಎಲ್‌ನ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ (ಚಿತ್ರಕೃಪೆ: ಬಿಸಿಸಿಐ)
ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ವಿಕೆಟ್ ಲಭಿಸಿದಾಗ ಅಲ್ಲಿಂದಿಲ್ಲಿಗೆ ಓಡಾಡಿ, ಜಿಗಿದಾಡಿ ವಿಚಿತ್ರ ರೀತಿಯಲ್ಲಿ ಸಂಭ್ರಮಿಸುತ್ತಿದ್ದ ಇಮ್ರಾನ್ ತಾಹಿರ್ ಅವರನ್ನು ಸಾಮಾಜಿಕ ಜಾಲತಾಣಿಗರು ತಮಾಷೆ ಮಾಡಿದ್ದರು. ಆದರೆ ತಾಹಿರ್, ಐಪಿಎಲ್ 2019ರ ಅತ್ಯಧಿಕ ವಿಕೆಟ್ ಸರದಾರನಾಗಿ ಮಿಂಚಿದ್ದಾರೆ.
ಹೈದರಾಬಾದ್‌ನಲ್ಲಿ ಭಾನುವಾರ (ಮೇ 12) ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ ಕಬಳಿಸಿದ್ದ ತಾಹಿರ್, ಒಟ್ಟು 26 ವಿಕೆಟ್‌ಗಳೊಂದಿಗೆ ಐಪಿಎಲ್ ಸೀಸನ್‌ವೊಂದರಲ್ಲಿ ಅತ್ಯಧಿಕ ವಿಕೆಟ್‌ಗಳನ್ನು ಪಡೆದ ದಾಖಲೆ ಸೃಷ್ಟಿಸಿದರು.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ವಿಕೆಟ್ ಪಡೆಯುವುದರೊಂದಿಗೆ ತಾಹಿರ್, 2019ರ ಐಪಿಎಲ್‌ನ 17 ಪಂದ್ಯಗಳಲ್ಲಿ 26 ವಿಕೆಟ್ ಸಾಧನೆಯೊಂದಿಗೆ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ವೇಗಿ ಕಾಗಿಸೋ ರಬಾಡಾ 12 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದರು.
ಸಿಎಸ್‌ಕೆಯ ಆರಂಭಿಕ ಬ್ಯಾಟ್ಸ್ಮನ್ ಶೇನ್ ವ್ಯಾಟ್ಸ್ಮನ್ ಅಬ್ಬರದ ಅರ್ಧ ಶತಕದ (80 ರನ್, 59 ಎಸೆತ) ಹೊರತಾಗಿಯೂ ಎಂಐ ತಂಡ ಫೈನಲ್ ಪಂದ್ಯವನ್ನು 1 ರನ್ನಿಂದ ಜಯಿಸಿ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಟ್ರೋಫಿ ಗೆದ್ದ ತಂಡವಾಗಿ ಮಿನುಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications