ಐಪಿಎಲ್ 2019: ಕಿಂಗ್ಸ್ XI ಪಂಜಾಬ್ ಸೇರಿಕೊಳ್ಳಲಿದ್ದಾರೆ ಗೌತಮ್ ಗಂಭೀರ್?!

ನವದೆಹಲಿ, ಡಿಸೆಂಬರ್ 14: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಜಿ ಆಟಗಾರ ಗೌತಮ್ ಗಂಭೀರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೇರಿಕೊಳ್ಳಲಿದ್ದಾರಾ? ಹೌದೆನ್ನುತ್ತಿದೆ ಇತ್ತೀಚಿನ ಬೆಳವಣಿಗೆ. ಗಂಭೀರ್ ಮತ್ತು ಕಿಂಗ್ಸ್ ಇಲೆವೆನ್ ಫ್ರಾಂಚೈಸಿ ನಡುವಿನ ಸಂಭಾಷಣೆ ಇಂಥದ್ದೊಂದು ಸಾಧ್ಯತೆಯ ಮುನ್ಸೂಚನೆ ನೀಡಿದೆ.
ಬ್ಯಾಟ್ ಕೆಳಗಿಡುವ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ಪ್ರತಿನಿಧಿಸಿ ವೃತ್ತಿ ಜೀವನದ ಕಡೆಯ ಆಟ ಆಡಿದ್ದ ಗಂಭೀರ್ ಬ್ಯಾಟ್ ಕೆಳಗಿಡುವ ಮುನ್ನ ಆಂಧ್ರದೆದುರು ಅಮೋಘ ಶತಕ ಬಾರಿಸಿದ್ದರು. ವಿದಾಯದ ಬಳಿಕ ಕಾಮೆಂಟರಿಯಲ್ಲಿ ಮುಂದುವರೆಯುವ ಇಂಗಿತ ತೋರಿಕೊಂಡಿದ್ದರು.
ಆದರೆ ಈಗಿನ ಮಾಹಿತಿಯಂತೆ ಗಂಭೀರ್, ಕಾಮೆಂಟರಿ ಮೈಕ್ ಹಿಡಿಯುವ ಬದಲು ಕೋಚ್ ಆಗುವುದರಲ್ಲಿದ್ದಾರೆ. ಗಂಭೀರ್ ಮತ್ತು ಪಂಜಾಬ್ ಫ್ರಾಂಚೈಸಿ ಮಾಡಿರುವ ಟ್ವೀಟ್‌ಗಳು ಈ ಅನುಮಾನಕ್ಕೆ ಕನ್ನಡಿ ಹಿಡಿಯುವಂತಿದೆ.
ಟೀಮ್ ರೆಡ್‌ಗೆ ಥ್ಯಾಂಕ್ಸ್
ಡಿಸೆಂಬರ್ 4ರಂದು ಗಂಭೀರ್ ವಿದಾಯ ಘೋಷಿಸಿದ್ದಾಗ ಕಿಂಗ್ಸ್ XI ಪಂಜಾಬ್, 'ಒಂದು ಅಧ್ಯಾಯ ಮುಗಿದು ಇನ್ನೊಂದು ಶುರುವಾಗಿದೆ' ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಗಂಭೀರ್, 'ರೆಡ್ ಟೀಮಿಗೆ ಥ್ಯಾಂಕ್ಸ್. ಶೀಘ್ರವೇ ಜೊತೆ ಸೇರಿಕೊಳ್ಳೋಣ' ಎಂದು ಪ್ರತಿಕ್ರಿಯಿಸಿದ್ದರು.
ನಮ್ಮನ್ನು ಹುರಿದುಂಬಿಸಿ
ಗಂಭೀರ್ ಪ್ರತಿಕ್ರಿಯೆಗೆ ರೀ ಟ್ವೀಟ್ ಮಾಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್, 'ನಮಗಿದು ಅತೀ ಖುಷಿಯ ವಿಚಾರ. ತಮ್ಮ ತಂಡದ ಪರ ನಿಂತು ನಮ್ಮ ತಂಡದ ಸಿಂಹಗಳನ್ನು ಹುರಿದುಂಬಿಸುವುದನ್ನು ಎದುರು ನೋಡುತ್ತಿದ್ದೇವೆ' ಎಂಬರ್ಥದಲ್ಲಿ ಸಾಲುಗಳನ್ನು ಹಾಕಿಕೊಂಡಿದೆ. ಇಲ್ಲಿಗೆ ಗಂಭೀರ್ ಅವರು ಪಂಜಾಬ್ ಸೇರಿಕೊಳ್ಳುವುದು ಬಹುತೇಕ ಖಚಿತವಾದಂತೆ!
ಪಂದ್ಯ ಹಿಡಿದಿಟ್ಟುಕೊಳ್ಳಲು ನೆರವು
ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಬಿಯ 5ನೇ ಸುತ್ತಿನ ಪಂದ್ಯದಲ್ಲಿ ಗಂಭೀರ್ ಆಕರ್ಷಕ ಶತಕ ಬಾರಿಸಿದ್ದರು. 185 ಎಸೆತಗಳಿಗೆ ಗೌತಮ್ 112 ರನ್ ಗಳಿಸಿದ್ದರು. ಈ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು.
ವಿಶ್ವಕಪ್ ವಿಜೇತ ತಂಡದ ಹೀರೋ
ಎರಡು ವಿಶ್ವಕಪ್ ವಿಜೇತ ತಂಡದಲ್ಲಿದ್ದ ಗಂಭೀರ್ ಅವರು ಎರಡು ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಅರ್ಧಶತಕ ಬಾರಿಸಿ, ತಂಡವನ್ನು ಜಯದ ಹೊಸ್ತಿಲಿಗೆ ತಂದವರು. 2011ರ ವಿಶ್ವಕಪ್ ನಲ್ಲಿ 97ರನ್ ಬಾರಿಸಿದರು, ವಿಶ್ವ ಟಿ20 ಫೈನಲ್ ನಲ್ಲಿ 75ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications