ಐಪಿಎಲ್: ಎಂಎಸ್ ಧೋನಿಗೊಂದು ವಿಶೇಷ ಸಂದೇಶ ಬರೆದ ಹಾರ್ದಿಕ್ ಪಾಂಡ್ಯ

ಮುಂಬೈ, ಮೇ 8: ಬ್ಯಾಟ್ ಬೀಸುತ್ತ ಎಂಎಸ್ ಧೋನಿ ಮೈದಾನ ಪ್ರವೇಶಿಸಿದರೆ ಸಾಕು; ಸುತ್ತ ನೆರೆದ ಪ್ರೇಕ್ಷಕರೆಲ್ಲ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಧೋನಿ ವ್ಯಕ್ತಿತ್ವ, ಅವರಿಗಿರುವ ಮಹತ್ವವನ್ನು ಪಂದ್ಯದ ವೇಳೆಯ ಈ ಚಿತ್ರಣವೇ ಬಿಚ್ಚಿಡಬಲ್ಲದು. ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಯುವ ಆಟಗಾರರ ಪಾಲಿನ ಮಾರ್ಗದರ್ಶಿಯಾಗಿರುವ ಧೋನಿಗೊಂದು ಸಂದೇಶ ಬರೆದುಕೊಂಡಿದ್ದಾರೆ.
ಧೋನಿ ಜೊತೆಗಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿರುವ ಹಾರ್ದಿಕ್ ಪಾಂಡ್ಯ ಧೋನಿ ಬಗ್ಗೆ ವಿಶೇಷ ಅನ್ನಿಸುವಂತ, ಭಾವನಾತ್ಮಕ ಸಂದೇಶದ ಸಾಲನ್ನು ಬರೆದಿದ್ದಾರೆ. ಯುವ ಆಟಗಾರರಲ್ಲಿ ಈಗ ಹೆಚ್ಚು ಪ್ರಭಾವ ಬೀರಿರುವ ಅನುಭವಿ ಆಟಗಾರರಲ್ಲಿ ದೋನಿಯೇ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಹಾರ್ದಿಕ್ ಮೆಸೇಜ್ ಕೊಂಚ ಭಿನ್ನ ಅನ್ನಿಸೋ ರೀತಿಯಲ್ಲಿದೆ.
ಹಾರ್ದಿಕ್ ಬರೆದಿರುವ ಟ್ವಿಟರ್ ಸಾಲು ಕೇವಲ ಎಂಟೇ ಪದಗಳಿಂದ ಕೂಡಿದೆ. ಆದರೆ ಆ ಪದಗಳೊಳಗೆ ಭಾವನೆಗಳಿವೆ, ಧೋನಿಯೆಡೆಗಿನ ಪ್ರೀತಿ-ಗೌರವ ಎರಡೂ ಸೇರಿದೆ. ಧೋನಿ-ಪಾಂಡ್ಯ ಜೊತೆಗಿರುವ ಚಿತ್ರದ ಸಾಲಿನಲ್ಲಿ ಹಾರ್ದಿಕ್, 'ನನ್ನ ಸ್ಫೂರ್ತಿ, ನನ್ನ ಗೆಳೆಯ, ನನ್ನ ಸಹೋದರ, ನನ್ನ ಪಾಲಿನ ದಂತಕತೆ' ಎಂದು ಬರೆದುಕೊಂಡಿದ್ದಾರೆ.
ಐಪಿಎಲ್ ನಲ್ಲಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿರುವ ನಾಲ್ಕು ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೇರಿವೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಾಂಡ್ಯ ಅವರಿದ್ದ ಮುಂಬೈ ತಂಡ, ಧೋನಿಯ ಚೆನ್ನೈ ತಂಡವನ್ನು ಸೋಲಿಸಿ ನೇರ ಫೈನಲ್‌ಗೆ ಪ್ರವೇಶಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications