Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಲೂ ಪ್ಲೇ ಆಫ್‌ ಪ್ರವೇಶಿಸಬಲ್ಲದು!

IPL 2019: How Virat Kohlis men can still qualify for IPL 2019 playoffs

ಬೆಂಗಳೂರು, ಏಪ್ರಿಲ್ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 'ಕಪ್‌' ಕನಸು ಬಹುತೇಕ ಕಮರಿದಂತೆಯೇ. ಆದರೆ ಒಂದು ಲೆಕ್ಕಾಚಾರದ ಆಧಾರದಲ್ಲಿ ಆರ್‌ಸಿಬಿಗೆ ಈಗಲೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

ಬೆಂಗಳೂರು vs ರಾಜಸ್ಥಾನ್ ಪಂದ್ಯ, ಏಪ್ರಿಲ್ 30, Live Score ಕೆಳಗಿದೆ

1
45925

ಆಡಿದ 12 ಪಂದ್ಯಗಳಲ್ಲಿ ಒಟ್ಟು 8ರಲ್ಲಿ ಸೋತು 4 ಪಂದ್ಯಗಳನ್ನು ಕೊಹ್ಲಿ ಪಡೆ ಗೆದ್ದುಕೊಂಡಿದೆ. ತಂಡದ ಖಾತೆಯಲ್ಲಿ ಕೇವಲ 8 ಅಂಕಗಳಿವೆ. ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವೇ ತಳದಲ್ಲಿದೆ. ಹಾಗಾದರೆ ಆರ್‌ಸಿಬಿಗೆ ನಿಜಕ್ಕೂ ಪ್ಲೇ ಆಫ್ ಪ್ರವೇಶದ ದಾರಿ ತೆರೆದಿದೆಯೇ?

ಹೌದು. ಆರ್‌ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಕಡೆಯ ಅವಕಾಶವೊಂದಿದೆ. ಆದರೆ ಈ ಕಡೇ ನಿರೀಕ್ಷೆ ನಿಜವಾಗೋದು ಕಷ್ಟಸಾಧ್ಯ. ಹಾಗಂತ ಸಾಧ್ಯವೇ ಇಲ್ಲವೆಂದಿಲ್ಲ, ಅಚ್ಚರಿಯ ಫಲಿತಾಂಶ ಬಂದರೂ ಬರಬಹುದು. ಯಾವ್ದಕ್ಕೂ ಹಾಗೇ ಒಮ್ಮೆ ಇದೇ ಸಾಲಿನ ಬೆನ್ನು ಹಿಡಿದು ಬನ್ನಿ..

ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ತಂಡಗಳು

ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 12ರಲ್ಲಿ 8 ಪಂದ್ಯಗಳನ್ನು ಗೆದ್ದು ತಲಾ 16 ಪಾಯಿಂಟ್‌ಗಳೊಂದಿಗೆ ಈಗಾಗಲೇ ಪ್ಲೇ ಆಫ್‌ ಪ್ರವೇಸಿವೆ. ಪ್ಲೇ ಆಫ್ ರೇಸ್‌ನಲ್ಲಿರುವ ಮುಂಬೈ ಇಂಡಿಯನ್ಸ್‌ ಬಳಿ 14 ಪಾಯಿಂಟ್‌ಗಳಿವೆ. ಆರ್‌ಸಿಬಿ ಇನ್ನುಳಿದ ಎರಡೂ ಪಂದ್ಯಗಳನ್ನು ಗೆದ್ದರೂ ಮುಂಬೈಗೆ ಮುನ್ನಡೆ ನೀಡಲು ತನ್ನಲ್ಲಿ 2 ಹೆಚ್ಚುವರಿ ಅಂಕಗಳಿವೆ. ಅಂದರೆ ಇನ್ನು ಮುಂಬೈಯನ್ನು ತಡೆಯೋದಂತೂ ದೂರದ ಮಾತು. ಇನ್ನೊಂದು ಲೆಕ್ಕಾಚಾರದಲ್ಲಿ ಬೆಂಗಳೂರು ಮುನ್ನಡೆ ಸಾಧಿಸಬೇಕಾದರೆ ಪ್ಲೇ ಆಫ್ ಪ್ರವೇಶಿಸಿದ ಮೂರನೇ ತಂಡವಾಗಿ ಎಂಐ ಬರಬೇಕಿದೆ.

ನೆಟ್‌ ರನ್‌ ರೇಟ್ ಭೀತಿ

ನೆಟ್‌ ರನ್‌ ರೇಟ್ ಭೀತಿ

ಆರಂಭಿಕ ಪಂದ್ಯಗಳನ್ನು ಸಾಲು ಸಾಲಾಗಿ ಸೋಲುವ ಮೂಲಕ ಆರ್‌ಸಿಬಿ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿಕೊಂಡಿತು. ಲೆಕ್ಕಾಚಾರದ ಆಧಾರದಲ್ಲಿ ಬೆಂಗಳೂರಿಗೆ ಗೆಲ್ಲುವ ಅವಕಾಶ ಇದೆಯಾದರೂ ಇಲ್ಲಿ ತಂಡದ ನೆಟ್ ರನ್‌ ರೇಟ್ ಕೂಡ ಪರಿಗಣಿಸಲ್ಪಡುತ್ತದೆ. ಸದ್ಯ ಆರ್‌ಸಿಬಿ ಖಾತೆಯಲ್ಲಿರುವ -0.694 ರನ್‌ ರೇಟ್, ತಂಡವನ್ನು ಪ್ಲೇ ಆಫ್ ದಾರಿಯಿಂದ ದೂರಕ್ಕೆ ತಳ್ಳುತ್ತಿದೆ. ಕಡಿಮೆ ರನ್‌ ರೇಟ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಲಿದೆ. ಒಟ್ಟಿನಲ್ಲಿ ಆರ್‌ಸಿಬಿ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಹೆಚ್ಚಿನ ರನ್‌/ವಿಕೆಟ್‌ಗಳಿಂದ ಗೆದ್ದು ನೆಟ್ ರನ್‌ ರೇಟ್ ಹೆಚ್ಚಿಸಿಕೊಳ್ಳಲು ಯತ್ನಿಸಬೇಕಿದೆ.

ಉಳಿದ ತಂಡಗಳು ಮೇಲೇಳಬಾರದು

ಉಳಿದ ತಂಡಗಳು ಮೇಲೇಳಬಾರದು

ಅಂಕಪಟ್ಟಿ ಗಮನಿಸಿದರೆ ಮುಂಬೈ ಬಿಟ್ಟು ಸನ್ ರೈಸರ್ಸ್ ಹೈದರಾಬಾದ್ ತಂಡ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್‌ಸಿಬಿಗೆ ಇನ್ನುಳಿದ ಪಂದ್ಯಗಳು ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್‌ ಮೇಲಿದೆ. ಈ ಪಂದ್ಯಗಳಲ್ಲಿ ಆರ್‌ಸಿಬಿ ಸುಲಭ ಗೆಲುವು ದಾಖಲಿಸಬೇಕು. ಒಟ್ಟಿನಲ್ಲಿ ಚೆನ್ನೈ, ಡೆಲ್ಲಿ, ಮುಂಬೈ ಹೊರತುಪಡಿಸಿ 12ಕ್ಕೂ ಹೆಚ್ಚು ಅಂಕ ಇನ್ಯಾವುದೇ ತಂಡ ಪಡೆದುಕೊಳ್ಳಬಾರದು.

ಆರ್‌ಸಿಬಿ ಗೆಲ್ಲಲು ಈ ಫಲಿತಾಂಶಗಳು ಬರಲೇಬೇಕು

ಆರ್‌ಸಿಬಿ ಗೆಲ್ಲಲು ಈ ಫಲಿತಾಂಶಗಳು ಬರಲೇಬೇಕು

ದಿನಾಂಕ: ಪಂದ್ಯ - ವಿಜೇತರು
ಏಪ್ರಿಲ್ 30: ಆರ್‌ಸಿಬಿ vs ಆರ್‌ಆರ್‌ - ಆರ್‌ಸಿಬಿ
ಮೇ 1: ಸಿಎಸ್ಕೆ vs ಡಿಸಿ - ಸಿಎಸ್ಕೆ ಅಥವಾ ಡಿಸಿ
ಮೇ 2: ಎಂಐ vs ಎಸ್ಆರ್‌ಎಚ್ - ಎಂಐ
ಮೇ 3: ಕೆXIಪಿ vs ಕೆಕೆಆರ್ - ಕೆXIಪಿ (ಸಣ್ಣ ಅಂತರದಿಂದ)
ಮೇ 4: ಡಿಸಿ Vs ಆರ್‌ಆರ್‌ - ಡಿ.ಸಿ.
ಮೇ 4: ಆರ್ಸಿಬಿ vs ಎಸ್ಆರ್ಎಚ್ - ಆರ್‌ಸಿಬಿ (ದೊಡ್ಡ ಅಂತರದಿಂದ)
ಮೇ 5: ಕೆ.ಎಸ್.ಐ.ಪಿ ವಿರುದ್ಧ ಸಿಎಸ್ಕೆ - ಸಿ.ಎಸ್.ಕೆ (ದೊಡ್ಡ ಅಂತರದಿಂದ)
ಮೇ 5: ಎಂಐ ಕೆಕೆಆರ್ - ಎಂಐ

ಆರ್‌ಸಿಬಿ ಗೆಲುವಿಗೆ ಇನ್ನೊಂದು ಅಡ್ಡಗಾಲು!

ಆರ್‌ಸಿಬಿ ಗೆಲುವಿಗೆ ಇನ್ನೊಂದು ಅಡ್ಡಗಾಲು!

ಅಂದ್ಹಾಗೆ ಆರ್‌ಸಿಬಿ ಪ್ಲೇ ಆಫ್ ದಾರಿಗೆ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಥವಾ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲೋದು ಸುಲಭವಿಲ್ಲ. ಯಾಕೆಂದರೆ ಆ ಎರಡೂ ತಂಡಗಳೂ ಪ್ಲೇ ಆಫ್ ಕನವರಿಕೆಯಲ್ಲಿವೆ. ಆರ್‌ಸಿಬಿಗೆ ಹೋಲಿಸಿದರೆ ಎರಡಕ್ಕೂ ಗೆಲುವಿನ ಮೂಲಕ ಪ್ಲೇ ಆಫ್‌ ಗುರಿ ತಲುಪುವ ಅವಕಾಶ ಹೆಚ್ಚಿದೆ. ಹೀಗಿದ್ದೂ ಆರ್‌ಸಿಬಿ ಎದುರು ಅವು ಸೋಲಬಲ್ಲವೆ? ಆ ಶಿವ್ನೇ ಬಲ್ಲ!

Story first published: Tuesday, April 30, 2019, 17:01 [IST]
Other articles published on Apr 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+