For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಎಬಿಡಿಯ ಹಾಗೆ ನಾನೂ ರನ್ ಗಳಿಸಬಲ್ಲೆ: ಆರ್‌ಸಿಬಿ ಆಲ್ ರೌಂಡರ್

IPL 2019: I can also score like Virat Kohli and AB de Villiers, says RCB star

ಬೆಂಗಳೂರು, ಏಪ್ರಿಲ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್‌ ರೌಂಡರ್ ಮೊಯೀನ್ ಅಲಿ ತನ್ನ ಆಟದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿನ ಸ್ಟಾರ್ ಬ್ಯಾಟ್ಸ್ಮ್‌ಗಳಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ನಂತೆ ನಾನೂ ಉತ್ತಮ ರನ್‌ ಗಳಿಸಬಲ್ಲೆ ಎಂದು ಅಲಿ ಹೇಳಿದ್ದಾರೆ.

'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'

'ಒಂದು ವೇಳೆ ಕೊಹ್ಲಿ ಅಥವಾ ಎಬಿಡಿ ಆಡದಿದ್ದರೂ ನನ್ನ ಆತ್ಮವಿಶ್ವಾಸವೇನೂ ಕುಂದೋದಿಲ್ಲ, ಬದಲಿಗೆ ಇನ್ನೂ ಹೆಚ್ಚಾಗುತ್ತೆ. ಕೆಕೆಆರ್ ವಿರುದ್ಧ ಎಬಿಡಿ ಆಡಲಿಲ್ಲ; ಅಂಥ ಸಂದರ್ಭದಲ್ಲೂ ನಾವು 200+ ರನ್‌ ಗಳಿಸಬಲ್ಲೆವು. ನನ್ನ ಆಟದ ಬಗ್ಗೆ ನನಗೆ ನಂಬಿಕೆಯಿದೆ' ಎಂದು ಮೊಯೀನ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಮತ್ತು ಎಬಿಡಿ ಮೇಲೆಯೇ ಬ್ಯಾಟಿಂಗ್ ವಿಭಾಗವನ್ನು ಮೇಲೆತ್ತುವ, ತಂಡಕ್ಕೆ ರನ್‌ ಕೊಡುಗೆ ನೀಡುವ ಒತ್ತಡವಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಅಲಿ ಒಂದಿಷ್ಟು ಸಂಗತಿಗಳನ್ನು ಹರವಿಕೊಂಡಿದ್ದಾರೆ.

ನಾನೂ ತಂಡದ ಬಲವಾಗಿ ನಿಲ್ಲಬಲ್ಲೆ

ನಾನೂ ತಂಡದ ಬಲವಾಗಿ ನಿಲ್ಲಬಲ್ಲೆ

'ವಿರಾಟ್, ಎಬಿಡಿಯಂತೆ ನಾನೂ ತಂಡವನ್ನು ಜಯದತ್ತ ಕೊಂಡೊಯ್ಯಬಲ್ಲೆ. ಅಂಥ ಸಂದರ್ಭಗಳು ಪ್ರತೀಸಾರಿ ಬರಲಾರದು. ಆದರೆ ಕೊಹ್ಲಿ-ಎಬಿಡಿ ಆರ್‌ಸಿಬಿ ತಂಡಕ್ಕೆ ಬಲವಾಗಿ ನಿಲ್ಲುವಂತೆ ನಾನೂ ನಿಲ್ಲಬಲ್ಲೆ ಎಂದು ಭಾವಿಸಿದ್ದೇನೆ. ಆ ವಿಶ್ವಾಸ ನನಗಿದೆ' ಎಂದು ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡುತ್ತ ಅಲಿ ಹೇಳಿದ್ದಾರೆ.

ಕೊಹ್ಲಿ-ಎಬಿಡಿ ಮೇಲಿನ ಒತ್ತಡ ಇಳಿಸಬೇಕು

ಕೊಹ್ಲಿ-ಎಬಿಡಿ ಮೇಲಿನ ಒತ್ತಡ ಇಳಿಸಬೇಕು

'ತಂಡದಲ್ಲಿದ್ದು ಕೊಹ್ಲಿ-ಎಬಿಡಿ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವುದು ನನ್ನ ಕರ್ತವ್ಯ. ತಂಡದ ಗೆಲುವು ಇಬ್ಬರೇ ಬ್ಯಾಟ್ಸ್ಮನ್‌ಗಳನ್ನು ಅವಲಂಬಿಸಿದೆ ಎಂದು ನಾವು ಬಿಂಬಿಸುತ್ತಾ ಹೋದಷ್ಟು ಆ ಇಬ್ಬರೂ ಆಟಗಾರರು ಹೆಚ್ಚು ಒತ್ತಡವನ್ನು ಅನುಭವಿಸಬೇಕಾಗುತ್ತದೆ. ತಂಡದ ಗೆಲುವು ಕಠಿಣವಾಗುತ್ತದೆ' ಎಂದು ಮೊಯೀನ್ ವಿವರಿಸಿದರು.

ತಂಡ ಬೆಂಬಲಿಸೋದು ನನ್ನ ಜವಾಬ್ದಾರಿ

ತಂಡ ಬೆಂಬಲಿಸೋದು ನನ್ನ ಜವಾಬ್ದಾರಿ

ಮಾತು ಮುಂದುವರೆಸಿದ 31ರ ಹರೆಯದ ಇಂಗ್ಲೆಂಡ್ ಕ್ರಿಕೆಟರ್ ಅಲಿ, 'ಬ್ಯಾಟಿಂಗ್ ಸರದಿ ಬಂದಾಗ ಬಂದು ಒಂದಷ್ಟು ರನ್‌ ಗಳಿಸಿ ತಂಡದ ಗೆಲುವಿನ ಭಾಗವಾಗುವ ಮೂಲಕ ಬ್ಯಾಟಿಂಗ್ ವಿಭಾಗವನ್ನು ಬೆಂಬಲಿಸೋದು ನನ್ನ ಜವಾಬ್ದಾರಿ' ಎಂದರು.

ಈ ಐಪಿಎಲ್‌ನಲ್ಲಿ ಕೊನೆಯ ಪಂದ್ಯ

ಈ ಐಪಿಎಲ್‌ನಲ್ಲಿ ಕೊನೆಯ ಪಂದ್ಯ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅಲಿ ಒಟ್ಟು 216 ರನ್ ಗಳಿಸಿದ್ದಾರೆ. ಏಪ್ರಿಲ್ 24ರ ಬುಧವಾರ ನಡೆಯುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯ 2019ರ ಐಪಿಎಲ್‌ನಲ್ಲಿ ಅಲಿಯ ಕೊನೆಯ ಪಂದ್ಯವಾಗಲಿದೆ. ಅನಂತರ ಅಲಿ ವಿಶ್ವಕಪ್ ತಯಾರಿಯ ನಿಮಿತ್ತ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

Story first published: Wednesday, April 24, 2019, 18:47 [IST]
Other articles published on Apr 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+