ಐಪಿಎಲ್ ಇತಿಹಾಸ ನಿರ್ಮಿಸಲಿದ್ದಾರೆ ಡೆಲ್ಲಿ ವೇಗಿ ಕಾಗಿಸೋ ರಬಾಡಾ

ಚೆನ್ನೈ, ಮೇ 1: ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಾಗಿಸೋ ರಬಾಡಾ ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸುವುದರಲ್ಲಿದ್ದಾರೆ. ಬುಧವಾರ (ಮೇ 1) ಚೆನ್ನೈಯಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಬಾಡಾ ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಎಲ್ಲಾ ನಿರೀಕ್ಷೆಗಳಿವೆ.
ಡೆಲ್ಲಿ vs ಚೆನ್ನೈ ಪಂದ್ಯ, ಬುಧವಾರ (ಮೇ 1), Live ಸ್ಕೋರ್‌ಕಾರ್ಡ್
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ಬಾರಿಯ ಐಪಿಎಲ್‌ನ ಅಂಕಪಟ್ಟಿಯ ಅಗ್ರ ಸ್ಥಾನಿಗ ತಂಡಗಳಾದ ಡೆಲ್ಲಿ ಮತ್ತು ಚೆನ್ನೈ ತಂಡಗಳು ಕಾದಾಡುತ್ತಿವೆ. ಎರಡೂ ತಂಡಗಳೂ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವುದರಿಂದ ಈ ಪಂದ್ಯ ಎರಡಕ್ಕೂ ಪ್ರತಿಷ್ಠೆದ್ದು.
ಈ ಬಾರಿಯ ಐಪಿಎಲ್‌ನಲ್ಲಿ ರಬಾಡಾ ಸಾಧನೆ, ಹೊಸ ದಾಖಲೆಗಳ ಸಾಧ್ಯತೆ ಮತ್ತು ಹಿಂದೆ ದಾಖಲೆ ನಿರ್ಮಿಸಿದ್ದರ ಕುರಿತ ಇಲ್ಲೊಂದಿಷ್ಟು ಮಾಹಿತಿಗಳು ಇಲ್ಲಿವೆ.

ಪರ್ಪಲ್ ಕ್ಯಾಪ್ ರಬಾಡಾ ಕೈಯಲ್ಲಿ
ಈ ಬಾರಿ ಅದ್ಭುತ ಪ್ರದರ್ಶನದ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತುವ ನಿರೀಕ್ಷೆ ಮೂಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ದಕ್ಷಿಣ ಆಫ್ರಿಕಾ ಬೌಲರ್ ಕಾಗಿಸೋ ರಬಾಡಾ ತಂಡದಲ್ಲಿ ಪ್ರಮುಖ ಆಟಗಾರ. ಈಗಾಗಲೇ 25 ವಿಕೆಟ್ ಪಡೆದಿರುವುದರಿಂದ ಪರ್ಪಲ್ ಕ್ಯಾಪ್ ಯಾದಿಯಲ್ಲಿ ರಬಾಡಾ ಮುಂಚೂಣಿಯಲ್ಲಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಕನ್ನಡಿಗ ಶ್ರೇಯಸ್
2019ರ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ಗಾಗಿ ರಬಾಡಾ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ನ ಶ್ರೇಯಸ್ ಗೋಪಾಲ್ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ರಬಾಡಾ ಇನ್ನೊಂದೇ ವಿಕೆಟ್ ಪಡೆದರೂ ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಹೊಸ ದಾಖಲೆ ಬರೆಯಲಿದ್ದಾರೆ.

ಮಾರ್ಕೆಲ್ ಸಾಧನೆ ಸಮಬಲ
ಸದ್ಯ 25 ವಿಕೆಟ್ ಸಾಧನೆಯಿಂದ ಐಪಿಎಲ್ ಸೀಸನ್‌ನಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ದಾಖಲೆಯನ್ನು ರಬಾಡಾ ಮತ್ತು ಡೆಲ್ಲಿ ತಂಡದಲ್ಲಿದ್ದ ದಕ್ಷಿಣ ಆಫ್ರಿಕಾ ಬೌಲರ್ ಮಾರ್ನೆ ಮಾರ್ಕೆಲ್ ಹಂಚಿಕೊಂಡಿದ್ದಾರೆ. 2012ರಲ್ಲಿ ನಡೆದಿದ್ದ ಐಪಿಎಲ್ ಆವೃತ್ತಿಯಲ್ಲಿ ಮಾರ್ಕೆಲ್ 25 ವಿಕೆಟ್‌ನೊಂದಿಗೆ ಈ ದಾಖಲೆ ನಿರ್ಮಿಸಿದ್ದರು.

ಭಾರೀ ಮುನ್ನಡೆಗೆ ಅವಕಾಶ
ಆಡಿರುವ 12 ಪಂದ್ಯಗಳಲ್ಲಿ ಚೆನ್ನೈ ಮತ್ತು ಡೆಲ್ಲಿ ಎರಡೂ ತಂಡಗಳು 8 ಪಂದ್ಯಗಳನ್ನು ಗೆದ್ದು 16 ಅಂಕ ಕಲೆ ಹಾಕಿವೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಲೀಗ್ 2 ಪಂದ್ಯಗಳು+ಪ್ಲೇ ಆಫ್ಸ್ ಸೇರಿ ಇನ್ನೂ ಒಂದಿಷ್ಟು ಪಂದ್ಯಗಳನ್ನು ಆಡುವ ಅವಕಾಶವಿದೆ. ಹೀಗಾಗಿ ವಿಕೆಟ್ ಸಾಧಕರಲ್ಲಿ ರಬಾಡಾ ಭಾರೀ ಮುನ್ನಡೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ. ವಿಶ್ವಕಪ್ ನಿಮಿತ್ತ ಒಂದುವೇಳೆ ರಬಾಡಾ ತವರಿಗೆ ಹಿಂದಿರುಗಿದರೆ ಇನ್ಯಾರಾದರೂ ರಬಾಡಾ ಸ್ಥಾನ ಆವರಿಸಲೂಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications