ಪಂಜಾಬ್ ವಿರುದ್ಧ ರಾಜಸ್ಥಾನ, ಈ ಆಡುವ XI ಇದ್ರೆ ಗೆಲುವು ಪಕ್ಕಾ

ಜೈಪುರ, ಮಾರ್ಚ್ 25: ಪಿಂಕ್ ಸಿಟಿ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಐಪಿಎಲ್ ಸೀಸನ್ ನ ಮೊದಲ ಪಂದ್ಯಗಳನ್ನಾಡಲಿವೆ.
ಆಡುವ ಹನ್ನೊಂದು ಬಳಗ ಆಯ್ಕೆಯಲ್ಲಿ ಎಡವಿದ್ದರಿಂದ ಆರ್ ಸಿಬಿ ಸೋಲು ಕಂಡಿತು ಎಂಬ ವಾದವಿದೆ. ಪಿಚ್ ಹಾಗೂ ಆಡುವ ಹನ್ನೊಂದು ಆಯ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪ್ರಮುಖ ಪಾತ್ರವಹಿಸುವುದಂತೂ ನಿಜ.
ಐಪಿಎಲ್ 2018ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪ್ರೀತಿ ಜಿಂಟಾ ಪಡೆ, ಐಪಿಎಲ್ 2019ರಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ಹುರುಪಿನೊಂದಿಗೆ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಎರಡು ತಂಡಗಳಲ್ಲಿ ಉತ್ತಮ ಆಟಗಾರರ ದಂಡೇ ಇದೆ. ಆದರೆ, ಅಂತಿಮವಾಗಿ ಮೈದಾನದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಇಂದು ರಾತ್ರಿ ಮೈಖೇಲ್ ಪುಟದಲ್ಲಿ ಕಾಣಿರಿ. ಸ್ಟಾರ್ ಸ್ಪೋರ್ಟ್ಸ್ 1, ಹಾಟ್ ಸ್ಟಾರ್ ನಲ್ಲಿ 8 ಗಂಟೆಗೆ ಪಂದ್ಯ ವೀಕ್ಷಣೆಗೆ ಲಭ್ಯ.
ಐಪಿಎಲ್ ಟೂರ್ನಿಯಲ್ಲಿ ಆಟವಾಡಿ, ಆಕರ್ಷಕ ಬಹುಮಾನ ಗೆಲ್ಲಿರಿ
ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಸಂಭಾವ್ಯ XI
ಆರಂಭಿಕರು : ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್
ಮಧ್ಯಮ ಕ್ರಮಾಂಕ : ಮಯಾಂಕ್ ಅಗರವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಮಂದೀಪ್ ಸಿಂಗ್
ಆಲ್ ರೌಂಡರ್ : ರವಿಚಂದ್ರನ್ ಅಶ್ವಿನ್(ನಾಯಕ), ಸ್ಯಾಮ್ ಕರನ್
ಬೌಲರ್ಸ್: ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಮುಜೀಬ್ ಉರ್ ರೆಹ್ಮಾನ್
***'
ರಾಜಸ್ಥಾನ್ ರಾಯಲ್ಸ್ ಆಡುವ XI
ಆರಂಭಿಕರು : ಅಜಿಂಕ್ಯ ರಹಾನೆ(ನಾಯಕ), ಸಂಜು ಸ್ಯಾಮ್ಸನ್
ಮಧ್ಯಮ ಕ್ರಮಾಂಕ: ಸ್ಟೀವ್ ಸ್ಮಿತ್, ಜೋಸ್ ಬಟ್ಲರ್, ರಾಹುಲ್ ತ್ರಿಪಾಠಿ
ಆಲ್ ರೌಂಡರ್ಸ್: ಬೆನ್ ಸ್ಟೋಕ್ಸ್, ಕೃಷ್ಣಪ್ಪ ಗೌತಮ್
ಬೌಲರ್ಸ್: ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಓಶಾನೆ ಥಾಮಸ್, ವರುಣ್ ಅರೋನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications