ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಯಾರ ಅಡ್ಡ ಹೆಸರು 'ಕುಳ್ಳ'?

ಮೊಹಾಲಿ, ಏಪ್ರಿಲ್ 02: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಂತರ ಉತ್ತಮ ಪ್ರದರ್ಶನ ನೀಡುತ್ತಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕಿಂಗ್ಸ್ ಎಲೆವನ್ ಪಂಜಾಬ್ ತಂಡ ತಲುಪಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಯಾಮ್ ಕರನ್ ಪಡೆದ ಹ್ಯಾಟ್ರಿಕ್ ನೆರವಿನಿಂದ ರೋಚಕ ಜಯ ದಾಖಲಿಸಿದ ಪಂಜಾಬ್ ತಂಡವೀಗ ಸಂಭ್ರಮದಲ್ಲಿದೆ. ಸಂಭ್ರಮದ ಸಮಯದಲ್ಲಿ ತಂಡದ ಆರಂಭ ಆಟಗಾರ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಲೋಕೇಶ್ ರಾಹುಲ್ ಅವರು ತಮ್ಮ ತಂಡದ ಆಟಗಾರರ ಅಡ್ಡ ಹೆಸರನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಈ ರೀತಿ ಅಡ್ಡ ಹೆಸರು ಏಕೆ ಕರೆಯುತ್ತೇವೆ ಎಂಬುದನ್ನು ತಿಳಿಸಿದ್ದಾರೆ.
* ಮೊದಲಿಗೆ ಮಯಾಂಕ್ ಅಗರವಾಲ್ ಗೆ 'Monk'ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯುವುದು ಮಯಾಂಕ್ ಗೂ ಇಷ್ಟವಂತೆ.
* ನಾಯಕ ರವಿಚಂದ್ರನ್ ಅಶ್ವಿನ್ ಅವರಿಗೆ 'Ash' ಎಂದು ಕರೆಯುತ್ತಾರಂತೆ.
* ಆಸ್ಟ್ರೇಲಿಯಾದ ವೇಗಿ ಆಂಡ್ರೆ ಟೈಗೆ ಸಿಂಪಲ್ಲಾಗಿ 'ಏಜೆ' ಎಲ್ಲರೂ ಕರೆಯುತ್ತಾರೆ.
* ಪಂಜಾಬ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮಂದೀಪ್ ಸಿಂಗ್ ಅವರನ್ನು 'ಮ್ಯಾಂಡಿ' ಎಂದು ಕರೆಯಲಾಗುತ್ತೆ.
* ಆದರೆ, ಎಲ್ಲರಿಗಿಂತ ಹೆಚ್ಚು ಜನಪ್ರಿಯವಾಗಿರುವುದು ಕರುಣ್ ನಾಯರ್ ಅವರ ಅಡ್ಡ ಹೆಸರು. ಕರುಣ್ ರನ್ನು 'ಕುಳ್ಳ' ಎಂದು ಕರೆಯುತ್ತೇವೆ. ಕನ್ನಡದಲ್ಲಿ ಕುಳ್ಳ ಎಂದರೆ ಏನು ಎಂಬುದನ್ನು ತಂಡದ ಇತರೆ ಆಟಗಾರರಿಗೆ ರಾಹುಲ್ ಅವರೇ ತಿಳಿಸಿದ್ದಾರೆ.
* ಕೆಎಲ್ ರಾಹುಲ್, ಮಯಾಂಕ್ ಹಾಗೂ ಕರುಣ್ ಮೂವರು ಕರ್ನಾಟಕ ತಂಡದವರಾಗಿರುವುದರಿಂದ ಮೂವರಲ್ಲಿ ಸಲುಗೆ ಹೆಚ್ಚಾಗೆ ಇದೆ.
* ಅದೇ ರೀತಿ ಆರ್ ಸಿಬಿಯಲ್ಲಿದ್ದಾಗ ಪರಿಚಯವಾದ ಸರ್ಫರಾಜ್ ಖಾನ್ ಈಗ ಪಂಜಾಬ್ ತಂಡದಲ್ಲೂ ರಾಹುಲ್ ಜತೆಗಿದ್ದಾರೆ. ಆರ್ ಸಿಬಿಯಲ್ಲಿದ್ದಾಗ ಕರೆಯುವಂತೆ ಸರ್ಫರಾಜ್ ರನ್ನು ಪಾಂಡಾ ಎಂದೇ ಕರೆಯಲಾಗುತ್ತದೆ. ಜೊತೆಗೆ ಸರ್ಫು ಎಂದು ಹೆಸರನ್ನು ಗಿಡ್ಡ ಮಾಡಲಾಗುತ್ತದೆ.
* ಇನ್ನು ತಮಗೆ ತಾವೇ ಹೆಸರಿಟ್ಟುಕೊಂಡ ಕ್ರಿಸ್ ಗೇಲ್ ಅವರ 'ಯೂನಿವರ್ಸಲ್ ಬಾಸ್' ಹೆಸರು ಎಲ್ಲರಿಗೂ ಚಿರಪರಿಚತ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಕೊನೆಯದಾಗಿ, ಅತ್ಯಂತ ಬೋರಿಂಗ್ ಅಡ್ಡಹೆಸರು ಯಾರದು? ಎಂಬ ಪ್ರಶ್ನೆಗೆ ಉತ್ತರಿಸಿ, ಮತ್ಯಾರದ್ದು ಅಲ್ಲ, ಅದು ನನ್ನ ಹೆಸರೇ, ನನ್ನನ್ನು ಸಿಂಪಲ್ಲಾಗಿ 'ಕೆಎಲ್' ಎಂದು ಎಲ್ಲಾ ಕರೆಯುತ್ತಾರೆ ಎಂದು ಲೋಕೇಶ್ ರಾಹುಲ್ ವಿಷಯ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications