For Quick Alerts
ALLOW NOTIFICATIONS  
For Daily Alerts
 

ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ಅವಕಾಶ ಸಿಕ್ಕರೆ ಕನ್ನಡಿಗನ ಪಾತ್ರದಲ್ಲಿ ನಟೊಸೋಕೆ ರೆಡಿ ಅಂದ್ರು ವಿರಾಟ್..!?
IPL 2019:kohli wants to play nags role if biopic made on RCB Insider host Mr. Nags

ಆರ್‌ಸಿಬಿ ಇನ್‌ಸೈಡರ್‌: ಆರೊಂದ್ಲಾ ಆರು, ಆರ್‌ ಮೂರ್ಲಾ ಹನ್ನೆರಡು ಎಂದು ಮಗ್ಗಿ ಹೇಳಿದ ವಿರಾಟ್‌

ಬೆಂಗಳೂರು, ಮೇ 05: ಟೀಮ್‌ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಆರ್‌ಸಿಬಿ ಇನ್‌ಸೈಡರ್‌ನ ನಿರೂಪಕ ಮಿಸ್ಟರ್‌ ನ್ಯಾಗ್ಸ್‌ ಅವರ ಪಾತ್ರ ಮಾಡುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಕ್ರಿಕೆಟ್‌ ಫೀಲ್ಡ್‌ನಿಂದ ಆಚೆಗೂ ಭರಪೂರ ಮನರಂಜನೆ ನೀಡುತ್ತಿರುವ ಆರ್‌ಸಿಬಿ ಇನ್‌ಸೈಡರ್‌ ಶೂ, ನೆಟ್ಟಿಗರ ಅದರಲ್ಲೂ ಆರ್‌ಸಿಬಿಯನ್ನರ ಅಚ್ಚುಮೆಚ್ಚಿನ ಕಾರ್ಯಕ್ರಮ.

ಕ್ರಿಕೆಟ್‌ ಮೈದಾನದಿಂದಾಚಗೆ ಆರ್‌ಸಿಬಿ ತಂಡದ ಆಟಗಾರರೊಡನೆ ಸಂದರ್ಶನ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜನಪ್ರಿಯ ನಿರೂಪಕ ಹಾಗೂ ನಟ ದಾನಿಶ್‌ ಸೇಠ್‌, ಇನ್‌ಸೈಡರ್‌ ಕಾರ್ಯಕ್ರಮದ ಮೂಲಕ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಇನ್ನು ಈ ಬಾರಿ ಆರ್‌ಸಿಬಿ ಪ್ರದರ್ಶನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿ ಗ್ರೂಪ್‌ ಹಂತದಲ್ಲೇ ತಂಡ ಸ್ಪರ್ಧೆಯಿಂದ ಹೊರಬಿದ್ದಿದೆ. ಅದರೆ ಇನ್‌ಸೈಡರ್‌ ಕಾರ್ಯಕ್ರಮ ಮಾತ್ರ ಎಂದಿನಂತೆ ಭಾರಿ ಸದ್ದುಮಾಡುತ್ತಿದ್ದು, ಕ್ರಿಕೆಟ್‌ ಪ್ರಿಯರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದೆ.

ಇನ್ನು ಇತ್ತೀಚೆಗೆ ಬೆಡ್‌ ಮೇಲೆ ನ್ಯಾಗ್ಸ್‌ ಜೊತೆಗೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಡೆಸಿರುವ ಚಿಟ್‌-ಚಾಟ್‌ ಅಂತೂ ಅಭಿಮಾನಿಗಳಿಗೆ ಮಜಾ ನೀಡುವುದಂತೂ ಖಂಡಿತ. ಆರೊಂದ್ಲಾ ಆರು ಎಂದು ಮಗ್ಗಿ ಹೇಳಿದ ಕೊಹ್ಲಿ, ನ್ಯಾಗ್ಸ್‌ ಕಂಡರೆ ಹೊಟ್ಟೆಕಿಚ್ಚು ಎಂದೂ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಒಂದು ವೇಳೆ ನ್ಯಾಗ್ಸ್‌ ಕುರಿತಾಗಿ ಸಿನಿಮಾ ನಿರ್ಮಾಣವಾದರೆ ತಾವೇ ನ್ಯಾಗ್ಸ್‌ ಪಾತ್ರದಲ್ಲಿ ನಟಿಸುವುದಾಗಿ ಹೇಳಿ, ನ್ಯಾಗ್ಸ್‌ ಅವರಂತೆ ಒಂದೆರಡು ಡೈಲಾಗ್‌ ಕೂಡ ಹೊಡೆದಿದ್ದಾರೆ. ಒಟ್ಟಾರೆ ಆರ್‌ಸಿಬಿ ಇನ್‌ಸೈಡರ್‌ನ ಈ ಎಪಿಸೋಡ್‌ ಸರ್ವರಿಗೂ ಇಷ್ಟವಾಗುವುದಂತೂ ಖಂಡಿತಾ. ಅದರ ಸಂಪೂರ್ಣ ವಿಡಿಯೊ ಇಲ್ಲಿದೆ. ಅಂದಹಾಗೆ ಇದು ಈ ಬಾರಿಯ ಆರ್‌ಸಿಬಿ ಇನ್‌ಸೈಡರ್‌ ಕಾರ್ಯಕ್ರಮದ ಕೊನೆಯ ಎಪಿಸೋಡ್‌ ಆಗಿದೆ.

Story first published: Sunday, May 5, 2019, 17:49 [IST]
Other articles published on May 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+