ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಕೆಕೆಆರ್ ವಿರುದ್ಧ ಗೆಲುವಿಗೆ ಸಜ್ಜಾದ ಚೆನ್ನೈ ಕಿಂಗ್ಸ್!

IPL 2019, Kolkata Knight Riders vs Chennai Super Kings : Probable XIs, Match Prediction

ಕೋಲ್ಕತ್ತಾ, ಏಪ್ರಿಲ್ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಮಾಜಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿರುಸಿನ ಹಣಾಹಣಿ ನಿರೀಕ್ಷೆ ಮೂಡಿದೆ.

ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಸಂಜೆ 4ಗಂಟೆಗೆ ಪಂದ್ಯ ಆರಂಭವಾಗಲಿದ್ದು, ತವರು ಮೈದಾನದಲ್ಲಿ ಮೇಲುಗೈ ಸಾಧಿಸಲು ಕೆಕೆಆರ್ ಹವಣಿಸುತ್ತಿದೆ. ಸತತ ಸೋಲಿನ ನಂತರ ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಕೆಕೆಅರ್ ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಅಗ್ರಸ್ಥಾನದಲ್ಲಿರುವ ಚೆನ್ನೈ ತಂಡವು ಮತ್ತೊಮ್ಮೆ ಕೆಕೆಆರ್ ಮಣಿಸಲು ಸಜ್ಜಾಗುತ್ತಿದೆ.

ಕೆಕೆಆರ್ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ ಕೆಕೆಆರ್ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ

ಈ ಮೈದಾನದಲ್ಲಿ 72 ಐಪಿಎಲ್ ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 28 ಬಾರಿ ಹಾಗೂ ಬೌಲಿಂಗ್ ಮೊದಲು ಮಾಡಿದ ತಂಡವು 44 ಬಾರಿ ಗೆಲುವು ಸಾಧಿಸಿವೆ. ಉಭಯ ತಂಡಗಳು ಒಟ್ಟು 20 ಬಾರಿ ಎದುರಾಗಿದ್ದು, 12 ಬಾರಿ ಚೆನ್ನೈ ಹಾಗೂ ಕೆಕೆಆರ್ 07 ಬಾರಿ ಗೆಲುವು ಸಾಧಿಸಿವೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ

ಕೆಕೆಆರ್ ಪರ ಲಾಕಿ ಫರ್ಗುಸನ್ ಅವರು ಆಡುವ ಹನ್ನೊಂದರಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಕ್ರಿಸ್ ಲಿನ್ ಹಾಗೂ ಸುನಿಲ್ ನರೇನ್ ಮತ್ತೊಮ್ಮೆ ಆರಂಭಿಕರಾಗಬಹುದು. ಬ್ರಥ್ ವೈಟ್, ಜೋ ಡೆನ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ಚೆನ್ನೈ ತಂಡದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ ಮಿಚೆಲ್ ಸಾಂಟ್ನರ್ ಬದಲಿಗೆ ಡ್ವಾಯ್ನೆ ಬ್ರಾವೋ ಆಡಬಹುದು.

ಐಪಿಎಲ್: ವಿಶೇಷ ಬೌಲಿಂಗ್ ಸಾಧನೆಗಾಗಿ ದಾಖಲೆ ಬರೆದ ದೀಪಕ್ ಚಾಹರ್ ಐಪಿಎಲ್: ವಿಶೇಷ ಬೌಲಿಂಗ್ ಸಾಧನೆಗಾಗಿ ದಾಖಲೆ ಬರೆದ ದೀಪಕ್ ಚಾಹರ್

ಕೋಲ್ಕತಾ ನೈಟ್ ರೈಡರ್ಸ್
ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ, ವಿಕೆಟ್ ಕೀಪರ್), ಶುಭಂ ಗಿಲ್, ಆಂಡ್ರೆ ರಸೆಲ್, ಪಿಯೂಷ್ ಚಾವ್ಲಾ, ಹ್ಯಾರಿ ಗರ್ನಿ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ,

1
45905

ಚೆನ್ನೈ ಸೂಪರ್ ಕಿಂಗ್ಸ್:
ಶೇನ್ ವಾಟ್ಸನ್, ಫಾಫ್ ಡುಪ್ಲೇಸಿಸ್, ಸುರೇಶ್ ರೈನಾ, ಅಂಬಟಿ ರಾಯುಡು, ಕೇದಾದ್ ಜಾಧವ್, ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಮಿಚ್ ಸಾಂಟ್ನರ್/ಡ್ವಾಯ್ನೆ ಬ್ರಾವೋ, ರವೀಂದ್ರ ಜಡೇಜ, ದೀಪಕ್ ಚಾಹರ್, ಹರ್ಭಜನ್ ಸಿಂಗ್/ ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್

Story first published: Sunday, April 14, 2019, 13:22 [IST]
Other articles published on Apr 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X