Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಪಂಜಾಬಿನಿಂದ ಬ್ರಾಡ್ ಹಾಡ್ಜ್ ಔಟ್, ರಾಜಸ್ಥಾನಕ್ಕೆ ವಾರ್ನೆ ಕೋಚ್?

IPL 2019: KXIP remove Brad Hodge, Shane Warne to return as RR coach, claims report

ಬೆಂಗಳೂರು, ಆಗಸ್ಟ್ 26: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2019ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡ ಕೋಚ್ ಆಗಿ ಬ್ರಾಡ್ ಹಾಡ್ಜ್ ಕಾಣಿಸಿಕೊಳ್ಳುವುದಿಲ್ಲ. ಹುದ್ದೆ ತೊರೆಯುವಂತೆ ಸೂಚಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶೇನ್ ವಾರ್ನ್ ಅವರು ಮತ್ತೆ ಕೋಚ್ ಆಗುವ ಸಾಧ್ಯತೆಯಿದೆ ಎಂಬ ವರದಿ ಬಂದಿದೆ.

ಮುಂಬೈ ಮಿರರ್ ವರದಿಯಂತೆ ರಿಕಿ ಪಾಂಟಿಂಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ. ಬ್ರಾಡ್ ಹಾಡ್ಜ್ ಅವರು ಮೂರು ವರ್ಷಗಳ ಅವಧಿಗೆ ಕೋಚ್ ಆಗಿ ನೇಮಕವಗಿದ್ದರು. ಆದರೆ, ಒಂದು ವರ್ಷದ ಬಳಿಕ ಹುದ್ದೆ ತೊರೆಯಲು ಸೂಚಿಸಲಾಗಿದೆ. ಕಳೆದ ಸೀಸನ್ ನಲ್ಲಿ ಮೊದಲ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಕಂಡಿತ್ತು. ಆದರೆ, ನಂತರ ಏಳು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಜಯಿಸಲು ಸಾಧ್ಯವಾಯಿತು.

ಶೇನ್ ವಾರ್ನ್ ಅವರು ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ತಂಡದ ಮಾರ್ಗದರ್ಶಿಯಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಟಾಪ್ ನಾಲ್ಕು ತಂಡಗಳಲ್ಲಿ ಕಾಣಿಸಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಎಲಿಮಿನೇಟರ್ ನಲ್ಲಿ ಸೋಲು ಕಂಡಿತ್ತು.

Story first published: Sunday, August 26, 2018, 11:44 [IST]
Other articles published on Aug 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+