Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿಂಗ್ಸ್ XI ಪಂಜಾಬ್‌ನ ವರುಣ್ ಚಕ್ರವರ್ತಿ ಐಪಿಎಲ್‌ನಿಂದ ಹೊರಕ್ಕೆ

IPL 2019: KXIP’s Varun Chakravarthy ruled out of IPL

ಮೊಹಾಲಿ, ಮೇ 1: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ವರುಣ್ ಚಕ್ರವರ್ತಿ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ನಿಂದ ಹೊರಬಿದ್ದಿದ್ದಾರೆ. ಸ್ಪಿನ್‌ ಬೌಲರ್ ಆಗಿದ್ದ ವರುಣ್ ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ಇನ್ನುಳಿದ ಪಂದ್ಯಗಳಿಂದ ಹೊರಗಿರಲಿದ್ದಾರೆ.

ಬೆರಳಿನ ಗಾಯಕ್ಕೀಡಾಗಿದ್ದ ತಮುಳುನಾಡು ಆಟಗಾರ ವರುಣ್, ಈ ಐಪಿಎಲ್‌ ಸೀಸನ್‌ನ ಹೆಚ್ಚಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಮಾರ್ಚ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಒಂದೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಲೆಗ್ ಸ್ಪಿನ್ನರ್ ಚಕ್ರವರ್ತಿ, 35 ರನ್‌ಗೆ 1 ವಿಕೆಟ್ ಪಡೆದಿದ್ದರು.

'ಐಪಿಎಲ್ ಅಂತಿಮ ಪಂದ್ಯಗಳಲ್ಲಾದರೂ ವರುಣ್ ಚೇತರಿಸಿಕೊಳ್ಳಲಿದ್ದಾರೆ ಎನ್ನುವ ಆಶಯ ನಮ್ಮದು. ಆದರೆ ಅವರ ಗಾಯ ಬೇಗ ಗುಣವಾಗುವ ಲಕ್ಷಣ ಕಾಣುತ್ತಿಲ್ಲ' ಎಂದು ಕೆXIಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಕಳೆದ ತಿಂಗಳು ಪಂಜಾಬ್ ತಂಡದ ಚೆನ್ನೈ ಭೇಟಿ ವೇಳೆ ಗಾಯ ಮಾಡಿಕೊಂಡ ವರುಣ್ ಅನಂತರ ಆಡುವ ತಂಡದಿಂದ ಹೊರಗುಳಿದಿದ್ದರು.

Story first published: Wednesday, May 1, 2019, 17:24 [IST]
Other articles published on May 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+