ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಯಾಮ್ ಗೆ ಹ್ಯಾಟ್ರಿಕ್, ಡೆಲ್ಲಿ ವಿರುದ್ಧ ಪಂಜಾಬಿಗೆ ಭರ್ಜರಿ ಜಯ

Punjab

ಮೊಹಾಲಿ, ಏಪ್ರಿಲ್ 01 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 13ನೇ ಪಂದ್ಯದಲ್ಲಿ ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ ಸೆಣಸಾಟದ ವರದಿ ಇಲ್ಲಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 166/9 ಸ್ಕೋರ್ ಮಾಡಿದ್ದು, ಡೆಲ್ಲಿ ತಂಡಕ್ಕೆ ಗೆಲ್ಲಲು 167ರನ್ ಗುರಿ ನೀಡಲಾಗಿತ್ತು. ಆದರೆ, 152 ಸ್ಕೋರಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದ ಆರ್ ಅಶ್ವಿನ್ ಪಡೆ ಒಂದೆಡೆಯಾದರೆ, ಕೋಲ್ಕತಾ ನೈಟ್ ರೈಡರ್ಸ್ ಪರ ಈ ಬಾರಿಯ ಮೊದಲ ಸೂಪರ್ ಓವರ್ ನಲ್ಲಿ ಸೂಪರ್ ಜಯ ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೊಂದೆಡೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿವೆ.

ಡೆಲ್ಲಿ vs ಪಂಜಾಬ್ ಗೆಲುವು ಯಾರಿಗೆ? ಪಂದ್ಯದ ಮುನ್ನೋಟಡೆಲ್ಲಿ vs ಪಂಜಾಬ್ ಗೆಲುವು ಯಾರಿಗೆ? ಪಂದ್ಯದ ಮುನ್ನೋಟ

ಉಭಯ ತಂಡಗಳ ಬ್ಯಾಟಿಂಗ್ ಶಕ್ತಿ ಎಲ್ಲರಿಗೂ ತಿಳಿದಿದ್ದು, ಬೌಲಿಂಗ್ ವಿಭಾಗ ಇನ್ನಷ್ಟು ಸದೃಢಗೊಂಡು, ಉತ್ತಮ ಪ್ರದರ್ಶನ ನೀಡಬೇಕಿದೆ.

Apr 01, 2019, 11:53 pm IST

ಕಿಂಗ್ಸ್ ಎಲೆವನ್ ಪಂಜಾಬ್ ಗೆ ಭರ್ಜರಿ ಜಯ, ಸ್ಯಾಮ್ ಕರನ್ ಗೆ ಹ್ಯಾಟ್ರಿಕ್. 152 ಸ್ಕೋರಿಗೆ ಡೆಲ್ಲಿ ಸರ್ವಪತನ

Apr 01, 2019, 11:48 pm IST

ಸ್ಯಾಮ್ ಕರನ್ ಗೆ ಮತ್ತೊಂದು ವಿಕೆಟ್, ರಬಾಡಾ ಕ್ಲೀನ್ ಬೋಲ್ಡ್ 152/9 ಸ್ಕೋರ್, 5 ಎಸೆತಗಳಲ್ಲಿ 15ರನ್ ಗುರಿ

Apr 01, 2019, 11:43 pm IST

ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದ ಹನುಮ ವಿಹಾರಿ

Apr 01, 2019, 11:42 pm IST

ಸತತ ವಿಕೆಟ್ ಕುಸಿತದಿಂದ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್ ರನ್ ಚೇಸಿಂಗ್

Apr 01, 2019, 11:39 pm IST

ಇನ್ ಗ್ರಾಮ್ ಔಟ್ ! 38ರನ್ ಗಳಿಸಿ ಸ್ಯಾಮ್ ಕರನ್ ಗೆ ವಿಕೆಟ್ ಒಪ್ಪಿಸಿದರು. ಹರ್ಷ್ ಪಟೇಲ್ 18 ಓವರ್ ಗಳ ನಂತರ ಡೆಲ್ಲಿ 148/7

Apr 01, 2019, 11:32 pm IST

39ರನ್ ಗಳಿಸಿ ರಿಷಬ್ ಪಂತ್ ಔಟಾದ ಬಳಿಕ, ಕ್ರಿಸ್ ಮೊರಿಸ್ ರನ್ ಔಟ್, 17 ಓವರ್ ಗಳ ನಂತರ 144/5

Apr 01, 2019, 11:30 pm IST

ಕುತೂಹಲ ಘಟ್ಟದಲ್ಲಿ ಪಂದ್ಯ, ಅನಗತ್ಯವಾಗಿ ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 144/5

Apr 01, 2019, 11:06 pm IST

ಡೆಲ್ಲಿ ವಿರುದ್ಧ ಪಂಜಾಬ್ ಪಂದ್ಯದ ಚಿತ್ರಾವಳಿ

Apr 01, 2019, 11:04 pm IST

12.3ಓವರ್ ಗಳಲ್ಲಿ 101/3 ಗಳಿಕೆ, 45 ಎಸೆತಗಳಲ್ಲಿ 66ರನ್ ಬೇಕು

Apr 01, 2019, 11:03 pm IST

12 ಓವರ್ ಗಳ ನಂತರ 98/3 ಸ್ಕೋರ್ ಮಾಡಿದ ಡೆಲ್ಲಿ, ಪಂತ್ 17, ಇನ್ ಗ್ರಾ 14ರನ್ ಗಳಿಸಿ ಬ್ಯಾಟಿಂಗ್

Apr 01, 2019, 10:12 pm IST

2 ಓವರ್ ಗಳ ನಂತರ ಡೆಲ್ಲಿ ಮೊತ್ತ 16/1

Apr 01, 2019, 10:11 pm IST

ಪಂಜಾಬ್ ನಾಯಕ ಅಶ್ವಿನ್ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಗೆ ಕ್ಯಾಚಿತ್ತ ಪೃಥ್ವಿ

Apr 01, 2019, 10:10 pm IST

167ರನ್ ಚೇಸ್ ಮಾಡುತ್ತಿರುವ ಡೆಲ್ಲಿ ಮೊದಲ ಎಸೆತದಲ್ಲೇ ಪೃಥ್ವಿಶಾ ಔಟ್

Apr 01, 2019, 9:49 pm IST

ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 166/9 ಸ್ಕೋರ್ ಮಾಡಿದ್ದು, ಡೆಲ್ಲಿ ತಂಡಕ್ಕೆ ಗೆಲ್ಲಲು 167ರನ್ ಗುರಿ ನೀಡಲಾಗಿದೆ.

Apr 01, 2019, 9:48 pm IST

ಕೊನೆ ಓವರ್ ನಲ್ಲಿ 1 ಬೌಂಡರಿ, 1 ಸಿಕ್ಸರ್ ಸಿಡಿಸಿದ ಮಂದೀಪ್ ಸಿಂಗ್

Apr 01, 2019, 9:43 pm IST

ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ರನ್ ಔಟ್ ಆದ ಮಯಾಂಕ್ ಅಗರವಾಲ್

Apr 01, 2019, 9:41 pm IST

ಪಂಜಾಬ್ ಸ್ಕೋರ್ 152/7, ಆರ್ ಅಶ್ವಿನ್ ಕ್ಲೀನ್ ಬೋಲ್ಡ್ ಮಾಡಿದ ಕ್ರಿಸ್ ಮೊರಿಸ್

Apr 01, 2019, 9:30 pm IST

ಅರ್ಧಶತಕ ಗಳಿಸದೆ ಔಟಾದ ಡೇವಿಡ್ ಮಿಲ್ಲರ್ 139/5, ಮತ್ತೆ ಡೆಲ್ಲಿ ಮೇಲುಗೈ

Apr 01, 2019, 9:27 pm IST

16 ಓವರ್ ಗಳ ನಂತರ ಪಂಜಾಬ್ ತಂಡದ ಮೊತ್ತ 136/4, ಮಂದೀಪ್ ಸಿಂಗ್ ಹಾಗು ಡೇವಿಡ್ ಮಿಲ್ಲರ್ ಬ್ಯಾಟಿಂಗ್

Apr 01, 2019, 9:21 pm IST

15 ಓವರ್ ಗಳ ನಂತರ 129/4, ಡೇವಿಡ್ ಮಿಲ್ಲರ್ ಮೇಲೆ ರನ್ ಗತಿ ಹೆಚ್ಚಿಸುವ ಜವಾಬ್ದಾರಿ

Apr 01, 2019, 9:14 pm IST

ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆಗೆ ಮತ್ತೊಂದು ವಿಕೆಟ್, ವಿಕೆಟ್ ಕೀಪರ್ ಗೆ ಕ್ಯಾಚಿತ್ತು ಔಟಾದ ಸರ್ಫರಾಜ್(39), ಪಂಜಾಬ್ ಸ್ಕೋರ್ 14 ಓವರ್ ಗಳ ನಂತರ 121/4

Apr 01, 2019, 9:04 pm IST

ಸರ್ಫರಾಜ್ ಖಾನ್ ಸ್ಕೂಪ್ ಶಾಟ್

Apr 01, 2019, 9:03 pm IST

12 ಓವರ್ ಗಳ ನಂತರ 106/3 ಪಂಜಾಬ್. ಮಿಲ್ಲರ್, ಸರ್ಫರಾಜ್ ಉತ್ತಮ ಆಟ

Apr 01, 2019, 8:54 pm IST

10 ಓವರ್ ಗಳ ನಂತರ 86/3 ಸ್ಕೋರ್ ಮಾಡಿರುವ ಪಂಜಾಬ್, ಕ್ರೀಸ್ ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಸರ್ಫರಾಜ್ ಖಾನ್

Apr 01, 2019, 8:47 pm IST

9 ಓವರ್ ಗಳ ನಂತರ ಪಂಜಾಬ್ ಸ್ಕೋರ್ 75/3, ಸರ್ಫರಾಜ್ ರಿಂದ ಉತ್ತಮ ಆಟ.

Apr 01, 2019, 8:38 pm IST

ಶಿಖರ್ ಧವನ್ ಎಸೆತಕ್ಕೆ ಮಯಾಂಕ್ ಅಗರವಾಲ್ (6) ರನೌಟ್, ಪಂಜಾಬ್ ಸ್ಕೋರ್ 7.1 ಓವರ್ ಗಳಲ್ಲಿ 58/3

Apr 01, 2019, 8:36 pm IST

4 ರನ್ ಮಾತ್ರ ನೀಡಿದ ಲಾಮಿಚಾನೆ, 7 ಓವರ್ ಗಳ ನಂತರ 58/2 ಸ್ಕೋರ್ ಮಾಡಿರುವ ಪಂಜಾಬ್

Apr 01, 2019, 8:34 pm IST

6 ಓವರ್ ಗಳ ನಂತರ ಪಂಜಾಬ್ 54/2. ಮಯಾಂಕ್ 4ರನ್, ಸರ್ಫರಾಜ್ 15ರನ್

Apr 01, 2019, 8:28 pm IST

5 ಓವರ್ ಗಳ ನಂತರ ಪಂಜಾಬ್ ತಂಡದ ಮೊತ್ತ 44/2, ಮಯಾಂಕ್ ಹಾಗೂ ಸರ್ಫರಾಜ್ ಬ್ಯಾಟಿಂಗ್

Apr 01, 2019, 8:22 pm IST

4 ಓವರ್ ಗಳ ನಂತರ ಪಂಜಾಬ್ ತಂಡದ ಮೊತ್ತ 37/2

Apr 01, 2019, 8:20 pm IST

ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಎಲ್ ಬಿ ಬಲೆಗೆ ಬಿದ್ದ ಸ್ಯಾಮ್ ಕರನ್ 20 (10)

Apr 01, 2019, 8:17 pm IST

3 ಓವರ್ ಗಳ ನಂತರ ಪಂಜಾಬ್ ಸ್ಕೋರ್ 247/1, ಸ್ಯಾಮ್ ಕರನ್ ಸತತ ಬೌಂಡಿಗಳನ್ನು ಬಾರಿಸಿದ್ದಾರೆ

Apr 01, 2019, 8:11 pm IST

ಎರಡು ಓವರ್ ಗಳ ನಂತರ ಕಿಂಗ್ಸ್ ಎಲೆವನ್ ಪಂಜಾಬ್ ಸ್ಕೋರ್ 15/1

Apr 01, 2019, 8:09 pm IST

ಕಿಂಗ್ಸ್ ಎಲೆವನ್ ಪಂಜಾಬ್ ಆರಂಭಿಕ ಆಟಗಾರ ಕೆಎಲ್ ರಾಹುಲ್ ಔಟ್, ಪಂಜಾಬ್ ಸ್ಕೋರ್ 15/1

Apr 01, 2019, 7:45 pm IST

ಕಿಂಗ್ಸ್ ಎಲೆವನ್ XI ತಂಡ

ಪಂಜಾಬ್ ತಂಡ : ಆರಂಭಿಕರು: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಮಯಾಂಕ್ ಅಗರವಾಲ್ ಮಧ್ಯಮ ಕ್ರಮಾಂಕ : ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮಂದೀಪ್ ಸಿಂಗ್, ಸ್ಯಾಮ್ ಕರನ್ ಬೌಲರ್ಸ್: ಆರ್ ಅಶ್ವಿನ್ (ನಾಯಕ), ಮುಜೀಬ್ ಉರ್ ರೆಹ್ಮಾನ್, ಹರ್ಡುಸ್ ವಿಲೋಯಿನ್, ಮೊಹಮ್ಮದ್ ಶಮಿ, ಮುರಗನ್ ಅಶ್ವಿನ್

Apr 01, 2019, 7:43 pm IST

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಆರಂಭಿಕರು : ಶಿಖರ್ ಧವನ್, ಪೃಥ್ವಿ ಶಾ, ಮಧ್ಯಮ ಕ್ರಮಾಂಕ : ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇನ್ ಗ್ರಾಮ್, ರಿಷಬ್ ಪಂತ್(ವಿಕೆಟ್ ಕೀಪರ್), ಹನುಮ ವಿಹಾರಿ ಆಲ್ ರೌಂಡರ್ಸ್: ಕ್ರಿಸ್ ಮೋರಿಸ್ ಬೌಲರ್ಸ್ : ಕಾಗಿಸೋ ರಬಾಡ, ಸಂದೀಪ್ ಲಾಮಿಚಾನೆ, ಹರ್ಷಲ್ ಪಟೇಲ್, ಅವೇಶ್ ಖಾನ್

Apr 01, 2019, 7:41 pm IST

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬದಲಿಗೆ ವೇಗಿ ಆವೇಶ್ ಖಾನ್ ಗೆ ಅವಕಾಶ

Apr 01, 2019, 7:38 pm IST

ಐಪಿಎಲ್ 13ನೇ ಪಂದ್ಯ : ಟಾಸ್ ಗೆದ್ದ ಡೆಲ್ಲಿ ಗೆದ್ದ ನಾಯಕ ಶ್ರೇಯಸ್

ಪಂಜಾಬ್ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್

Story first published: Monday, April 1, 2019, 23:54 [IST]
Other articles published on Apr 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X