ಐಪಿಎಲ್ 2019 : ರಾಜಸ್ಥಾನ ವಿರುದ್ಧ ಪಂಜಾಬಿಗೆ ರೋಚಕ ಜಯ

ಮೊಹಾಲಿ, ಏಪ್ರಿಲ್ 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಕಿಂಗ್ಸ್ ಎಲೆವನ್ ಪಂಜಾಬ್ ರೋಚಕವಾಗಿ ಗೆದ್ದುಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ಚೇಸಿಂಗ್ :ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ 45 ಎಸೆತಗಳಲ್ಲಿ 50ರನ್(4ಬೌಂಡರಿ) ಸಿಡಿಸಿ ಉತ್ತಮ ಆರಂಭ ಒದಗಿಸಿದರು. ಜೋಸ್ ಬಟ್ಲರ್ 17 ಎಸೆತಗಳಲ್ಲಿ 23ರನ್ ಗಳಿಸಿ ಔಟಾದರು.
ಸಂಜು ಸಾಮ್ಸನ್ 21 ಎಸೆತಗಳಲ್ಲಿ 27ರನ್, ಅಜಿಂಕ್ಯ ರಹಾನೆ 21 ಎಸೆತಗಳಲ್ಲಿ 26ರನ್ ಗಳಿಸಿದರೂ ಉತ್ತಮ ಜೊತೆಯಾಟ ಸಾಧಿಸಲು ಗಳಿಸಲು ಆಗದೆ ವಿಕೆಟ್ ಕಳೆದುಕೊಂಡಿದ್ದು, ಪಂದ್ಯ ಕೈತಪ್ಪುವಂತೆ ಮಾಡಿತು.
ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಬಾರಿಸಿ 33ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಪ್ರಯೋಜನಕ್ಕೆ ಬರಲಿಲ್ಲ. ಆಸ್ಟನ್ ಟರ್ನರ್ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. ಅಂತಿಮವಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 170/7 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು ನಿಗದಿತ 20 ಓವರ್ ಗಳಲ್ಲಿ 182/6 ಸ್ಕೋರ್ ಮಾಡಿದೆ. ಕೆಎಲ್ ರಾಹುಲ್ ಅರ್ಧಶತಕ ಹಾಗೂ ಡೇವಿಡ್ ಮಿಲ್ಲರ್ 40 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಪಂಜಾಬ್ ಪರ ಕ್ರಿಸ್ ಗೇಲ್ 22 ಎಸೆತಗಳಲ್ಲಿ 30 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ಮಯಾಂಕ್ ಅಗರವಾಲ್ 12 ಎಸೆತಗಳಲ್ಲಿ 26 ರನ್ (1 ಬೌಂಡರಿ, 2 ಸಿಕ್ಸರ್)ಗಳಿಸಿ ರನ್ ಗತಿ ಹೆಚ್ಚಿಸಿದರು.
ಇನ್ನೊಂದೆಡೆ ಕೆಎಲ್ ರಾಹುಲ್ ಅವರು ಸಮಯೋಚಿತವಾಗಿ ಆಡಿ, 47 ಎಸೆತಗಳಲ್ಲಿ 52 ರನ್ (3 ಬೌಂಡರಿ, 2ಸಿಕ್ಸರ್) ಗಳಿಸಿದರೆ, ಡೇವಿಡ್ ಮಿಲ್ಲರ್ 27 ಎಸೆತಗಳಲ್ಲಿ 40ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿ ರನ್ ಗತಿ ಹೆಚ್ಚಿಸಿದರು.
ಕೊನೆ ಓವರ್ ನಲ್ಲಿ 4 ಎಸೆತಗಳಲ್ಲಿ 17 ರನ್ (1 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತವನ್ನು 182/6 ಕ್ಕೇರಿಸಿದರು.
ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನ ಹಾಗೂ ರಾಜಸ್ಥಾನ 7ನೇ ಸ್ಥಾನದಲ್ಲಿವೆ. ಈ ಮೈದಾನದಲ್ಲಿ ನಡೆದಿರುವ 51 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 23 ಬಾರಿ ಹಾಗೂ ನಂತರ ಬ್ಯಾಟಿಂಗ್ ಮಾಡಿದ ತಂಡ 28 ಬಾರಿ ಗೆಲುವು ಸಾಧಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications