ಐಪಿಎಲ್: ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಮಾಲಿಂಗ ಕಣಕ್ಕೆ?

ಮುಂಬೈ, ಮಾರ್ಚ್ 25: ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯಕ್ಕೆ ಅಲಭ್ಯರಿದ್ದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಮುಂದಿನ ಎರಡು ಮುಂಬೈ ಪಂದ್ಯಗಳಲ್ಲಿ ಆಡವುದರಲ್ಲಿದ್ದಾರೆ. ಐಪಿಎಲ್‌ನಲ್ಲಿ ಮಾಲಿಂಗ ಆಡಲು ಅನುವು ಮಾಡಿಕೊಡುವಂತೆ ಬಿಸಿಸಿಐಯು ಶ್ರೀಲಂಕಾ ಕ್ರಿಕೆಟನ್ನು ಕೇಳಿಕೊಂಡಿದೆ.
ರಾಜಸ್ಥಾನ್ vs ಪಂಜಾಬ್ ಪಂದ್ಯದ Live Score ಕೆಳಗಿದೆ
ಮುಂಬೈ ಮುಂದಿನ ಎರಡು ಪಂದ್ಯಗಳಿಗೆ ಅಂದರೆ ಮಾರ್ಚ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮತ್ತು ಮಾರ್ಚ್ 30ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಗಳಿಗೆ ಮಾಲಿಂಗ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಅನಂತರ ಮಾಲಿಂಗ ಶ್ರೀಲಂಕಾಕ್ಕೆ ವಾಪಸ್ಸಾಗಲಿದ್ದಾರೆ.
35ರ ಹರೆಯದ ಲಸಿತ್, ಐಪಿಎಲ್‌ನ ಮೊದಲ ಆರು ಪಂದ್ಯಗಳನ್ನು ಆಡದಿರಲು ನಿರ್ಧರಿಸಿದ್ದರು. ಮುಂಬರಲಿರುವ ವಿಶ್ವಕಪ್ ಆಯ್ಕೆ ಸಲುವಾಗಿ ಸೂಪರ್ ಪ್ರಾವಿನ್ಶಿಯಲ್ ಒನ್‌ಡೇ ಟೂರ್ನಿಯಲ್ಲಿ ಆಡಬೇಕು ಎಂದು ಶ್ರೀಲಂಕಾ ಕ್ರಿಕೆಟ್ ವಿಧಿಸಿದ್ದ ನಿರ್ಬಂಧ ಪೂರೈಸುವುದಕ್ಕಾಗಿ ಮಾಲಿಂಗ ಈ ನಿರ್ಧಾರ ತಾಳಿದ್ದರು.
ಆದರೆ ಭಾರತ ಪ್ರವಾಸದ ವೇಳೆ ಪ್ರಸಾರ ಆದಾಯಕ್ಕಾಗಿ ಶ್ರೀಲಂಕಾ ಕ್ರಿಕೆಟ್, ಬಿಸಿಸಿಯನ್ನು ಅವಲಂಬಿಸಿರುವುದರಿಂದ ಮತ್ತು ಮುಂಬರಲಿರುವ ಲಂಕಾ ಪ್ರೀಮಿಯರ್ ಲೀಗ್ ವೇಳೆ ಬಿಸಿಸಿಐ ಬೆಂಬಲ ಬೇಕಾಗಿರುವುದರಿಂದ ಬಿಸಿಸಿಐ ಕೋರಿಯನ್ನು ಶ್ರೀಲಂಕಾ ಕ್ರಿಕೆಟ್ ಪರಿಗಣಿಸಲಿದೆ ಎನ್ನಲಾಗಿದೆ. ಅಂತೂ ಮಾಲಿಂಗ ಮತ್ತೆ ಮುಂಬೈಗೆ ಮೆರಗು ತುಂಬಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications