ಐಪಿಎಲ್ 2019: ಸಿಎಸ್‌ಕೆ ವಿರುದ್ಧ ಕಿಂಗ್ಸ್‌ಗೆ 6 ವಿಕೆಟ್ ಜಯ

ನೆಟ್ ರನ್‌ರೇಟ್ ಆಧಾರದ ಮೇರೆಗೆ ಸ್ಪರ್ಧೆಯಿಂದ ಹೊರಬಿದ್ದ ಪಂಜಾಬ್ ಪಡೆ
ಮೊಹಾಲಿ, ಮೇ 05: ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ (71) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಟೇಬಲ್ ಟಾಪರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಲ್ಲಿನ ಐ.ಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಭಾನುವಾರ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್‌ಗೆ ಇಳಿದ ಸೂಪರ್ ಕಿಂಗ್ಸ್ ಫಾಫ್ ಡು'ಪ್ಲೆಸಿಸ್ (55 ಎಸೆತ, 96 ರನ್) ಮತ್ತು ಸುರೇಶ್ ರೈನಾ (38 ಎಸೆತ, 53 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 170 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ನಂತರ ಗುರಿ ಬೆನ್ನತ್ತದಿ ಕಿಂಗ್ಸ್ ಇಲೆವೆನ್ ಇನ್ನು 2 ಓವರ್ ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 173 ರನ್‌ಗಳನ್ನು ಚಚ್ಚಿತು.
ಆದರೆ, ಪ್ಲೇ ಆಫ್ಸ್ ತಲುಪಲು ಕಿಂಗ್ಸ್ ಇಲೆವೆನ್ ಈ ಪಂದ್ಯದಲ್ಲಿ ಭಾರಿ ರನ್‌ರೇಟ್ ಮೂಲಕ ಗೆಲ್ಲಬೇಕಿತ್ತು. 14 ಪಂದ್ಯಗಳಿಂದ 12 ಅಂಕಗಳನ್ನು ಗಳಿಸಿರುವ ಕಿಂಗ್ಸ್ ಇಲೆವೆನ್ ಕೊನೆಯ ಪಂದ್ಯದಲ್ಲಿ ಬಲಿಷ್ಠ ಸೂಪರ್ ಕಿಂಗ್ಸ್ ತಂಡವನ್ನು ಬೇಟೆಯಾಡಿದರೂ ನಾಕ್‌ಔಟ್ ಹಂತಕ್ಕೇರಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಸೋತರೂ ಸೂಪರ್ ಕಿಂಗ್ಸ್ ತಂಡ ಉತ್ತಮ ರನ್‌ರೇಟ್ ಬಲದೊಂದಿಗೆ ಕ್ವಾಲಿಫೈಯರ್ 1 ಪಂದ್ಯದಲ್ಲಿನ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಡು'ಪ್ಲೆಸಿಸ್ ಹೋರಾಟ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತು ಪಂಜಾಬ್ ಬೌಲರ್‌ಗಳನ್ನು ಬೆಂಡೆತ್ತಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಫಾಫ್, ಎದುರಿಸಿದ 55 ಎಸೆತಗಳಲ್ಲಿ 10 ಫೋರ್ ಮತ್ತು 4 ಸೂಪರ್ ಸಿಕ್ಸರ್ ಮೂಲಕ 96 ರನ್‌ಗಳನ್ನು ಚಚ್ಚಿ ಕೇವಲ 4 ರನ್‌ಗಳ ಅಂತರದಲ್ಲಿ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕದಿಂದ ವಂಚಿತರಾದರು.
ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಯಿಂಗ್ 11
ಕ್ರಿಸ್ ಗೇಲ್, ಕೆಎಲ್ ರಾಹುಲ್, ಮಯಾಂಕ್ ಆಗರ್ವಾಲ್, ನಿಕೊಲಾಸ್ ಪೂರನ್(ವಿಕೆಟ್‌ಕೀಪರ್) ಮಂದೀಪ್ ಸಿಂಗ್, ಸ್ಯಾಮ್ ಕರ್ರನ್, ಆರ್. ಅಶ್ವಿನ್, ಆಂಡ್ರೂ ಟೈ, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಹರಪ್ರೀತ್ ಬ್ರಾರ್.
ಸ್ಟ್ಯಾಟ್ ಇನ್ಫೋ..
06
ಸಿಎಸ್‌ಕೆ ವಿರುದ್ಧ ಭಾನುವಾರ 19 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿಸಿದ ಕೆಎಲ್ ರಾಹುಲ್ ಪ್ರಸಕ್ತ ಐಪಿಎಲ್‌ನಲ್ಲಿ ಬಾರಿಸಿದ ಆರನೇ ಅರ್ಧಶತಕ.
1252
ಕಿಂಗ್ಸ್ ಇಲೆವೆನ್ ಪಂಜಾಬ್ ಪರ ರಾಹುಲ್ ಈವರೆಗೆ ಆಡಿರುವ ಒಟ್ಟು 24 ಪಂದ್ಯಗಳಿಂದ ಗಳಿಸಿರುವ ಒಟ್ಟು ರನ್. ಇದರಲ್ಲಿ 12 ಅರ್ಧಶತಕಗಳು ಮತ್ತು 1 ಶತಕ ಸೇರಿವೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ಫಾಫ್ ಡು'ಪ್ಲೆಸಿಸ್, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್ ಧೋನಿ, ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications