Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2019: ಆರಂಭಿಕ ಪಂದ್ಯದಲ್ಲೇ ಚೆನ್ನೈಗೆ ತಲೆಬಾಗಿದ ಬೆಂಗಳೂರು

IPL 2019, Live Score: Chennai Super Kings vs Royal Challengers Bangalore 

ಚೆನ್ನೈ, ಮಾರ್ಚ್ 23: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಎಲ್) 12ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಆರ್‌ಸಿಬಿ ತಂಡ ಮತ್ತದೇ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿ ಬೆಂಗಳೂರು ಅಭಿಮಾನಿಗಳನ್ನು ನಿರಾಶೆಗೊಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ)ಗೆ 71 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆ, 17.4 ಓವರ್‌ಗೆ 3 ವಿಕೆಟ್ ಕಳೆದು 71 ರನ್ ಪೇರಿಸುವುದರೊಂದಿಗೆ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45757

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಬೆಂಗಳೂರು ಅಭಿಮಾನಿಗಳನ್ನು ನಿರಾಶೆಗೀಡು ಮಾಡಿತು. ಹಾಲಿ ಚಾಂಪಿಯನ್ ಚೆನ್ನೈ ಪರ ಹರ್ಭಜನ್ ಸಿಂಗ್ ಮತ್ತು ಇಮ್ರಾನ್ ತಾಹೀರ್ ತಲಾ 3, ರವೀಂದ್ರ ಜಡೇಜಾ 2 ವಿಕೆಟ್ ಪಡೆದು ಆರ್‌ಸಿಬಿಯನ್ನು ಕಟ್ಟಿ ಹಾಕಿದರು.

ಬೆಂಗಳೂರಿನ ವಿರಾಟ್ ಕೊಹ್ಲಿ (6), ಮೋಯೀನ್ ಆಲಿ (9), ಎಬಿ ಡಿ ವಿಲಿಯರ್ಸ್ (9), ಶಿಮ್ರಾನ್ ಹೆಟ್ಮೇಯರ್ (0), ಕಾಲಿನ್ ಡೆ ಗ್ರ್ಯಾಂಡ್‌ಹೋಮ್ (4), ಶಿವಂ ದುಬೆ (2), ನವದೀಪ್ ಸೈನಿ (2) ಬೇಗನೆ ವಿಕೆಟ್ ಒಪ್ಪಿಸಿದರು. ಕೊಂಚ ವಿಕೆಟ್ ಕಾವಲು ಕಾದಿದ್ದು ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ (29) ಒಬ್ಬರೆ. ಆರ್‌ಸಿಬಿ 17.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 70 ರನ್ ಪೇರಿಸಿತು.

ಚೆನ್ನೈ ಇನ್ನಿಂಗ್ಸ್‌ ವೇಳೆ ಅಂಬಾಟಿ ರಾಯುಡು 28, ಸುರೇಶ್ ರೈನಾ 19, ಕೇದಾರ್ ಜಾಧವ್ ಅಜೇಯ 13 ರನ್ ಸೇರಿಸಿ ತಂಡವನ್ನು ಬೆಂಬಲಿಸಿದರು. ಬೆಂಗಳೂರು ಪರ ಯುಜುವೇಂದ್ರ ಚಾಹಲ್, ಮೊಯೀನ್ ಆಲಿ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಚೆನ್ನೈಯ ಹರ್ಭಜನ್ ಸಿಂಗ್‌ಗೆ ಲಭಿಸಿತು.

ಸಿಎಸ್‌ಕೆ ತಂಡ: ಅಂಬಾಟಿ ರಾಯುಡು, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಎಂಎಸ್ ಧೋನಿ (ಕೆ ಸಿ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

ಆರ್‌ಸಿಬಿ ತಂಡ: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಮೊಯೆನ್ ಅಲಿ, ಎಬಿ ಡಿ ವಿಲಿಯರ್ಸ್, ಶಿಮ್ರಾನ್ ಹೆಟ್ಮರ್, ಶಿವಮ್ ದುಬೆ, ಕೋಲಿನ್ ಡಿ ಗ್ರಾಂಡ್‌ಹೋಮ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ.

Story first published: Saturday, March 23, 2019, 23:23 [IST]
Other articles published on Mar 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+