ರಾಜಸ್ತಾನ್ ವಿರುದ್ಧ ಬೆಂಗಳೂರು ಸಂಭಾವ್ಯ XI ಹೀಗಿರಬಹುದು


ಜೈಪುರ, ಏಪ್ರಿಲ್ 02: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 14ನೇ ಪಂದ್ಯದಲ್ಲಿಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಿಸಲಿದೆ.
ಸವಾಯಿ ಮಾನ್ ಸಿಂಗ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಸೆಣಸಲಿವೆ. ಸತತ ಮೂರು ಸೋಲು ಕಂಡಿರುವ ಕೊಹ್ಲಿ ಪಡೆ ಹಾಗೂ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸುತ್ತಾ ಬಂದಿರುವ ರಹಾನೆ ಪಡೆ ಆಟ ರೋಚಕವಾಗಿರುವ ನಿರೀಕ್ಷೆಯಿದೆ.
ಉಭಯ ತಂಡಗಳ ಬ್ಯಾಟಿಂಗ್ ಶಕ್ತಿ ಚೆನ್ನಾಗಿದೆ. ಬೆಂಗಳೂರಿಗೆ ಹೋಲಿಸಿದರೆ ರಾಜಸ್ಥಾನದ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗ ಇನ್ನಷ್ಟು ಸದೃಢಗೊಂಡು, ಉತ್ತಮ ಪ್ರದರ್ಶನ ನೀಡಬೇಕಿದೆ. ಉಭಯ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಇದ್ದು, ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು. ಸ್ಟೀವ್ ಸ್ಮಿತ್ ಬದಲಿಗೆ ಆಸ್ಟನ್ ಟರ್ನರ್ ಅವರು ರಾಜಸ್ಥಾನ ತಂಡ ಸೇರುವ ನಿರೀಕ್ಷೆಯಿದೆ. ಇದೇ ರೀತಿ ಮಾರ್ಕಸ್ ಸ್ಟೋಯಿನಿಸ್ ಅವರು ಆರ್ ಸಿಬಿ ಸೇರಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ XI ರ ಸಂಭಾವ್ಯ ತಂಡ
ಆರಂಭಿಕರು: ಜೋಸ್ ಬಟ್ಲರ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ(ನಾಯಕ)
ಮಧ್ಯಮ ಕ್ರಮಾಂಕ : ಸಂಜು ಸಾಮ್ಸನ್, ರಾಹುಲ್ ತ್ರಿಪಾಠಿ, ಆಸ್ಟನ್ ಟರ್ನರ್,
ಆಲ್ ರೌಂಡರ್ಸ್: ಬೆನ್ ಸ್ಟೋಕ್ಸ್, ಕೃಷ್ಣಪ್ಪ ಗೌತಮ್
ಬೌಲರ್ಸ್: ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ವರುಣ್ ಅರೋನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರಂಭಿಕರು : ಪಾರ್ಥೀವ್ ಪಟೇಲ್(ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್
ಮಧ್ಯಮ ಕ್ರಮಾಂಕ : ವಿರಾಟ್ ಕೊಹ್ಲಿ(ನಾಯಕ), ಎಬಿ ಡಿ ವಿಲಿಯರ್ಸ್
ಆಲ್ ರೌಂಡರ್ಸ್: ಮೋಯಿನ್ ಅಲಿ, ಶಿವಂ ದುಬೇ, ವಾಷಿಂಗ್ಟನ್ ಸುಂದರ್
ಬೌಲರ್ಸ್ : ನಾಥನ್ ಕೌಲ್ಟರ್ ನೈಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications