Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಪಂತ್ ಆಕರ್ಷಕ ಬ್ಯಾಟಿಂಗ್, ವೇಗದ ಅರ್ಧಶತಕ, ದಾಖಲೆ!

IPL 2019 MI VS DC : ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು ರಿಷಭ್ ಪಂತ್..! | Oneindia Kannada
IPL 2019, MI vs DC: Rishabh Pant slams 18-ball fifty, joins illustrious list

ಮುಂಬೈ, ಮಾರ್ಚ್ 24: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 24) ನಡೆದ ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಆಕರ್ಷಕ ಅರ್ಧಶತಕದೊಂದಿಗೆ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕಕ್ಕಾಗಿ ಗಮನ ಸೆಳೆದರು.

ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಡೆಲ್ಲಿ ಪರ ಮೈದಾನಕ್ಕಿಳಿದ ಪಂತ್ ಕೇವಲ 27 ಎಸೆತಗಳಿಗೆ 78 ರನ್ ಸಿಡಿಸಿದರು. ಅಲ್ಲದೆ ಕೇವಲ 18 ಎಸೆತಗಳಿಗೆ ಅರ್ಧಶತಕ ಬಾರಿಸಿ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಾಧಕರಲ್ಲಿ 12ನೇ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿ ಅಗ್ರ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದಾರೆ. ಪಂಜಾಬ್ ಪ್ರತಿನಿಧಿಸಿದ್ದ ರಾಹುಲ್, ಡೆಲ್ಲಿ ವಿರುದ್ಧ ಕಳೆದ ವರ್ಷ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇನ್ನು ಯೂಸುಫ್ ಪಠಾಣ್, ಸುನಿಲ್ ನರೇನ್, ಸುರೇಶ್ ರೈನಾ ಮತ್ತು ಕ್ರಿಸ್ ಗೇಲ್ ಈ ಯಾದಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಇಷ್ಟೇ ಅಲ್ಲ, ಒಂದು ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್‌ಗಾಗಿ ಪಂತ್ ಮೂರನೇ ಸ್ಥಾನ ಆವರಿಸಿಕೊಂಡಿದ್ದಾರೆ. ಕ್ರಿಸ್ ಮೋರೀಸ್ (422.22), ಕಾರ್ಲೋಸ್ ಬ್ರಾತ್‌ವೇಟ್ (309.09) ಬಳಿಕ ಮೂರನೇ ಸ್ಥಾನದಲ್ಲಿರುವ ಪಂತ್ 288.88 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ.

Story first published: Sunday, March 24, 2019, 23:35 [IST]
Other articles published on Mar 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+