ಮೊಹಾಲಿಯಲ್ಲಿ ರಾಜಸ್ಥಾನವನ್ನು ಮಣಿಸಲು ಸಜ್ಜಾದ ಪಂಜಾಬಿಗಳು

ಮೊಹಾಲಿ, ಏಪ್ರಿಲ್ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಉತ್ತಮ ಲಯಕ್ಕೆ ಮರಳಿರುವ ಪಂಜಾಬ್ ತಂಡದ ವಿರುದ್ಧ ಈಗಷ್ಟೇ ಜಯದ ರುಚಿ ಕಂಡಿರುವ ರಾಜಸ್ಥಾನ್ ರಾಯಲ್ಸ್ ತಂಡ ಸೆಣಸಲಿದೆ. ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನ ಹಾಗೂ ರಾಜಸ್ಥಾನ 7ನೇ ಸ್ಥಾನದಲ್ಲಿವೆ.
ಐಪಿಎಲ್ ಅಂಕಪಟ್ಟಿ ಏಪ್ರಿಲ್ 16 2.00 ಗಂಟೆ
ಮೊಹಾಲಿಯ ಮೈದಾನದಲ್ಲಿ ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ತವರು ಮೈದಾನದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಈ ಮೈದಾನದಲ್ಲಿ ನಡೆದಿರುವ 51 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 23 ಬಾರಿ ಹಾಗೂ ನಂತರ ಬ್ಯಾಟಿಂಗ್ ಮಾಡಿದ ತಂಡ 28 ಬಾರಿ ಗೆಲುವು ಸಾಧಿಸಿವೆ. 154 ರಿಂದ 165 ರನ್ ಈ ಮೈದಾನದ ಸರಾಸರಿ ಮೊತ್ತ.
ಉಭಯ ತಂಡಗಳು 18 ಬಾರಿ ಮುಖಾಮುಖಿಯಾಗಿದ್ದು, ಪಂಜಾಬ್ 08 ಹಾಗೂ ರಾಜಸ್ಥಾ 10 ಬಾರಿ ಗೆಲುವು ಸಾಧಿಸಿವೆ. ಪಂಜಾಬ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆಯಿಲ್ಲ. ಆದರೆ, ರಾಜಸ್ಥಾನ್ ತಂಡದಲ್ಲಿ ಕೃಷ್ಣಪ್ಪ ಗೌತಮ್ ಬದಲಿಗೆ ರಿಯಾನ್ ಪರಾಗ್ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ.
ಕಿಂಗ್ಸ್ ಎಲೆವನ್ ಪಂಜಾಬ್
ಕ್ರಿಸ್ ಗೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಮಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ನಿಕೋಲಾಸ್ ಪೂರನ್, ಮಂದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ನಾಯಕ), ಆಂಡ್ರ್ಯೂ ಟೈ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ.
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ(ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಟೀವ್ ಸ್ಮಿತ್, ಲಿಯಾಮ್ ಲಿವಿಂಗ್ ಸ್ಟೋನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಕೃಷ್ಣಪ್ಪ ಗೌತಮ್/ರಿಯಾನ್ ಪರಾಗ್, ಜೊಫ್ರಾ ಆರ್ಚರ್, ಜಯದೇವ್ ಉನದ್ಕತ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications