ಕ್ಯಾಪ್ಟನ್ ಕೂಲ್' ಧೋನಿ 'ಉಗ್ರ ಪ್ರತಾಪಿ' ಯಾಗಿದ್ದಕ್ಕೆ 50% ಸಂಭಾವನೆ ಕಟ್


ಚೆನ್ನೈ, ಏಪ್ರಿಲ್ 12: 'ಕ್ಯಾಪ್ಟನ್ ಕೂಲ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಈ ಅವತಾರದಲ್ಲಿ ನೋಡಿದ್ದು ಕಡಿಮೆ. ಮೈದಾನದಿಂದ ಹೊರಕ್ಕೆ ಹೋದ ಬಳಿಕ ಪಂದ್ಯದ ವೇಳೆ ಅಂಪೈರ್ ಜೊತೆ ಚರ್ಚೆ ನಡೆಸಿ, ಕಣ್ಣು ಕೆಂಪಗೆ ಮಾಡಿಕೊಂಡ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನಿಯಮಾವಳಿ ಮುರಿದ ಕಾರಣ ಅವರ ಸಂಭಾವನೆಯಲ್ಲಿ ಶೇ 50ರಷ್ಟು ಕಡಿತಗೊಳಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ನ ನಾಯಕ ಮಹೇಂದ್ರ ಸಿಂಗ್ಧೋನಿ ನಡೆದುಕೊಂಡ ರೀತಿ ಸರಿಯೇ? ತಪ್ಪೇ? ಹಾಗಾದ್ರೆ ಅಂಪೈರ್ ಮಾಡಿದ್ದು ಸರಿನಾ? ತಪ್ಪು ಕಂಡರೆ ಪ್ರಶ್ನಿಸ್ಬಾರ್ದಾ? ಹೀಗೆ ನಾನಾ ಪ್ರಶ್ನೆಗಳೆದ್ದಿವೆ.
ಕ್ರಿಕೆಟ್ ನಿಯಾಮಾವಳಿ ಪ್ರಕಾರ, ಮೊದಲಿಗೆ ಧೋನಿ ನಡೆದುಕೊಂಡ ರೀತಿ ತಪ್ಪು, ಆಟಕ್ಕಿಂತ ಯಾರು ದೊಡ್ಡವರಲ್ಲ, ವೃತ್ತಿಪರತೆ ಮೆರೆಯಬೇಕಾಗಿತ್ತು. ಅಂಪೈರ್ ನಿರ್ಣಯದ ಬಗ್ಗೆ ಪ್ರಶ್ನಿಸಲು ಬೇರೆ ಮಾರ್ಗಗಳಿತ್ತು. ಆದರೆ, ಟಿ20 ಪಂದ್ಯದಲ್ಲಿ ನಿರ್ಣಾಯಕ ಘಟ್ಟವಾಗಿದ್ದರಿಂದ ಧೋನಿ ಭಾವನಾತ್ಮಕವಾಗಿ ಸಭ್ಯತೆ ಹಾಗೂ ಶಾಂತರೂಪದ ಎಲ್ಲೆ ಮೀರಿ ಅಂಪೈರ್ ಜತೆ ಮಾತಿನ ಚರ್ಚೆ ನಡೆಸಿದರು.
ಕೊನೆಯ ಎಸೆತದ ತನಕ ರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ಚೆನ್ನೈ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದಾ ನಾಯಕ ಧೋನಿ ಅವರು ಔಟಾಗಿದ್ದರು. ಕೊನೆ ಓವರ್ ನ ಮೊದಲ ಎಸೆತದಲ್ಲಿ ಜಡೇಜ ಸಿಕ್ಸರ್ ಸಿಡಿಸಿ, ಗುರಿಯತ್ತ ಕೊಂಡೊಯ್ದರು.
ಧೋನಿ ಅವರು ಐಪಿಎಲ್ ನಿಯಮಾವಳಿಗಳನ್ನು ಮುರಿದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಪಂದ್ಯದ ಸಂಭಾವನೆಯ ಶೇ. 50 ರಷ್ಟನ್ನು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪಂದ್ಯದ ಕೊನೆ ಓವರ್ ನಲ್ಲಿ ನಡೆದಿದ್ದೇನು?
ಬೆನ್ ಸ್ಟೋಕ್ಸ್ ಎಸೆದ ಪಂದ್ಯದ ಕೊನೆ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಕ್ ನಲ್ಲಿದ್ದ ಸ್ಯಾಂಟ್ನರ್ ಅವರು ಕ್ರೀಸ್ ದಾಟಿ ಮುಂದೆ ಬಂದು ಫುಲ್ ಟಾಸ್ ಆಡಲು ಯತ್ನಿಸಿದರು. ಭುಜದ ನೇರವಾಗಿದ್ದ ಈ ಎಸೆತವನ್ನು ನೋಬಾಲ್ ಎಂದು ಅಂಪೈರ್ ಉಲ್ಹಾಸ್ ತೋರಿಸಿದ್ದು ಟಿವಿಯಲ್ಲಿ ದಾಖಲಾಗಿತ್ತು. ಆದರೆ, ನಂತರ ಲೆಗ್ ಅಂಪೈರ್ ಬ್ರೂಸ್ ಅಕ್ಸೆನ್ಪೋರ್ಡ್ ನೋಬಾಲ್ ಅಲ್ಲ ಎಂದು ಹೇಳಿದ ಬಳಿಕ ಸುಮ್ಮನಾದರು.

ಇದು ಅಂಪೈರ್ ಮಾಡಿದ್ದು ತಪ್ಪು ನಿಜ
ಅಂಪೈರ್ ಉಲ್ಹಾಸ್ 'ನೋಬಾಲ್' ತೀರ್ಪು ನೀಡಲಿಲ್ಲ. ಇದು ಅಂಪೈರ್ ಮಾಡಿದ ತಪ್ಪು, ನೋಬಾಲ್ ನಿರ್ಣಯ ನೀಡಬೇಕಾಗಿದ್ದು ಲೆಗ್ ಅಂಪೈರ್ ಎಂಬುದನ್ನು ಮರೆತು, ಸುಮ್ಮನೆ ಕೈ ಎತ್ತಿದ್ದರು. ಇದನ್ನು ನೋಡಿದ ಧೋನಿ ಕೂಡಲೇ ಅಂಪೈರ್ ಗಳ ಬಳಿ ಬಂದು ಪ್ರಶ್ನಿಸಿದರು. ಆದರೆ, ಅಂಪೈರ್ ತೀರ್ಪು ಬದಲಿಸಲಿಲ್ಲ. ಇದರಿಂದ ಧೋನಿ ಕೋಪದಿಂದಲೇ ಡಗ್ಔಟ್ಗೆ ತೆರಳಿದರು. ಆ ನಂತರ ಸ್ಯಾಂಟ್ನರ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಚೆನ್ನೈಗೆ ಗೆಲುವು ತಂದುಕೊಟ್ಟರು.
ಧೋನಿ ಮಾತನಾಡಿದ್ದು ಏನು?
ನೋಬಾಲ್ ನಿರ್ಣಯ ನೀಡಬೇಕಾಗಿದ್ದು ಲೆಗ್ ಅಂಪೈರ್ ಎಂಬುದನ್ನು ಮರೆತು, ಸುಮ್ಮನೆ ಕೈ ಎತ್ತಿದ್ದರು. ಇದನ್ನು ನೋಡಿದ ಧೋನಿ ಕೂಡಲೇ ಅಂಪೈರ್ ಗಳ ಬಳಿ ಬಂದು ಪ್ರಶ್ನಿಸಿದರು. ಆದರೆ, ಅಂಪೈರ್ ತೀರ್ಪು ಬದಲಿಸಲಿಲ್ಲ. ಇದರಿಂದ ಧೋನಿ ಕೋಪದಿಂದಲೇ ಡಗ್ಔಟ್ಗೆ ತೆರಳಿದರು ಈ ಕುರಿತ ವಿಡಿಯೋ ನೋಡಿ
ಅಭಿಮಾನಿಗಳಿಂದ ಸಮರ್ಥನೆ
ಅಂಪೈರ್ ನೋಬಾಲ್ ನೀಡಿರುವುದು ಸ್ಪಷ್ಟವಾಗಿದೆ. ನಾವೆಲ್ಲರೂ ಇದನ್ನು ನೋಡಿದ್ದೇವೆ. ಎಂಎಸ್ ಧೋನಿ ಮಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡ ಅಭಿಮಾನಿಗಳು
ಐಪಿಎಲ್‌ನಲ್ಲಿ ನಾಯಕನಾಗಿ 100ನೇ ಗೆಲುವಿನ ಇತಿಹಾಸ ಬರೆದ ಧೋನಿ!
ಅಂಪೈರ್ ಕೂಡಾ ಗೊಂದಲ
ಅಂಪೈರ್ ನಿರ್ಣಯ ನೀಡಿದ ಬಳಿಕ ತನ್ನ ತಪ್ಪಿನ ಅರಿವಾಗಿ ಲೆಗ್ ಅಂಪೈರ್ ಕಡೆ ನೋಡಿದರು. ಗೊಂದಲಮಯವಾಗಿತ್ತು. ಲೆಗ್ ಅಂಪೈರ್ ನೋ ಬಾಲ್ ಇಲ್ಲ ಎಂದಿದ್ದರಿಂದ ಮೇನ್ ಅಂಪೈರ್ ನೋ ಬಾಲ್ ಎಂದು ಮತ್ತೊಮ್ಮೆ ನೀಡಲಿಲ್ಲ.
ಧೋನಿ ಬ್ಯಾನ್ ಮಾಡಿ
ವೃತ್ತಿಪರತೆ ಮೆರೆಯುವಲ್ಲಿ ಧೋನಿ ವಿಫಲರಾಗಿದ್ದಾರೆ. ಅವರಿಗೆ ದಂಡ ವಿಧಿಸಿ, ಶಿಕ್ಷೆ ಕೋಡಬೇಕಿದೆ. ಆಟಕ್ಕಿಂತ ಯಾರು ದೊಡ್ಡವರಲ್ಲ ಎಂದ ಕ್ರಿಕೆಟ್ ಅಭಿಮಾನಿ.
ಕಪ್ಪು ಚುಕ್ಕೆಯಾಗಲಿದೆ
ಧೋನಿ ಮಾಡಿದ್ದು ಸರಿ ಇರಬಹುದು, ವಿಧಾನ ತಪ್ಪಿರಬಹುದು, ಆದರೆ ಇದು ದುರದೃಷ್ಟಕರ, ಇದೆಲ್ಲ ಬೇಕಾಗಿರಲಿಲ್ಲ, ಇತಿಹಾಸದ ಪುಟದಲ್ಲಿ ಧೋನಿ ಇಮೇಜ್ ಹಾಳುಗೆಡವಲು ಈ ಘಟನೆಯೊಂದು ಸಾಕು, ಆಟದ ಘನತೆ, ಸಭ್ಯತೆ ಎತ್ತಿ ಹಿಡಿಯಬೇಕಾಗಿದ್ದು, ನಾಯಕನ ಕರ್ತವ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications