IPL 2019: ಅಭ್ಯಾಸದ ವೇಳೆ ಅದ್ಭುತ ಸಿಕ್ಸ್ ಸಿಡಿಸಿದ ಧೋನಿ-ವಿಡಿಯೋ

ಚೆನ್ನೈ, ಮಾರ್ಚ್ 23: ಟೀಮ್ ಇಂಡಿಯಾ ಮಾಜಿ ನಾಯಕ, ಎಂಸ್ ಧೋನಿ ಸಿಕ್ಸ್ ಮೂಲಕ ಬೆರಗು ಮೂಡಿಸೋದು ಅಪರೂಪವಲ್ಲ. ಐಪಿಎಲ್ ಉದ್ಘಾಟನಾ ಪಂದ್ಯಕ್ಕಾಗಿ ತಯಾರಿ ನಡೆಸುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಬಾರಿಸಿರುವ ಸಿಕ್ಸ್ ಈ ಬಾರಿ ಗಮನ ಸೆಳೆದಿದೆ.
ಐಪಿಎಲ್ 12ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕಾಗಿ ಚೆನ್ನೈಯ ಚೆಪಕ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುವಾಗ ಧೋನಿ ಬಾರಿಸಿರುವ ಸಿಕ್ಸ್ ವಿಡಿಯೋ ಟ್ವಿಟರ್ ನಲ್ಲಿ ಓಡಾಡುತ್ತಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ಆರಂಭಿಕ ಪಂದ್ಯದಲ್ಲೇ ಶುಭಾರಂಭ ಕಾಣುವ ಇಂಗಿತದಲ್ಲಿದೆ. ಆದರೆ ಪಂದ್ಯ ಸಾಕಷ್ಟು ಜಿದ್ದಾಜಿದ್ದಿಯಿಂದ ಕೂಡಿರುವುದರಂತೂ ನಿರೀಕ್ಷಿತ. ಐಪಿಎಲ್ ಉದ್ಘಾಟನಾ ಪಂದ್ಯ ಮಾರ್ಚ್ 23ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 8 pmಗೆ ಆರಂಭಗೊಳ್ಳಲಿದೆ.
Story first published: Saturday, March 23, 2019, 15:27 [IST]
Other articles published on Mar 23, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications